ಮೈಸೂರು

ಗಣಪತಿ ಮೆರವಣಿಗೆಗೆ ಅಡ್ಡಿ: ಪ್ರತಿಭಟನೆ

Published On :

ನಂಜನಗೂಡು: ಗಣಪತಿ ಮೆರವಣಿಗೆ ಕೊಂಡೊಯ್ಯುವ ವಿಚಾರದಲ್ಲಿ ಎರಡು ಕೋಮಿನ ನಡುವೆ ವಿವಾದ ಉಂಟಾಗಿ ನೂರಾರು ಮಂದಿ ಇಲ್ಲಿನ ಟೌನ್ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.ಪಟ್ಟಣದ ನೀಲಕಂಠನಗರ ಬಡಾವಣೆ ಯುವಕರು ಗಣಪತಿ ವಿಸರ್ಜನೆಗಾಗಿ ಮೆರವಣಿಗೆ ಕೊಂಡೊಯ್ಯುವಾಗ ಮತ್ತೊಂದು ಕೋಮಿನವರು ತಮ್ಮ ಪ್ರಾರ್ಥನಾ ಮಂದಿರದ ಮುಂದೆ ಮೆರವಣಿಗೆ ಕೊಂಡೊಯ್ಯಬಾರದು ಎಂದು ತಾಕೀತು ಮಾಡಿದ್ದೇ ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣ ಎನ್ನಲಾಗಿದೆ. ಪೊಲೀಸ್ ಠಾಣೆಯಲ್ಲಿ ದೂರ ದಾಖಲಿಸಿಕೊಳ್ಳಲು ನಿರಾಕರಿಸಿದ್ದರಿಂದ ಕುಪಿತರಾದ ಪ್ರತಿಭಟನಾಕಾರರು ಊಟಿ ರಸ್ತೆಯ ಪ್ರಸನ್ನಚಿಂತಾಮಣಿ ಗಣಪತಿ ದೇವಾಲಯದ ಬಳಿ ಗಣಪತಿ ಮೆರವಣಿಗೆಯನ್ನು ಮಾರ್ಗ ಮಧ್ಯೆ ನಿಲ್ಲಿಸಿ  ಠಾಣೆ ಮುಂದೆ ಪ್ರತಿಭಟನೆಗಿಳಿದರು. ಪ್ರತಿವರ್ಷ ಗಣಪತಿ ಮೆರವಣಿಗೆ ಸಂದರ್ಭದಲೆಲ್ಲ ಉದ್ದೇಶಪೂರ್ವಕವಾಗಿ ತಕರಾರು ತೆಗೆಯಲಾಗತ್ತಿದೆ ಸೂಕ್ತ ಕ್ತಮ ಕೈಗೊಳ್ಳಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.  

ಡೈವೋರ್ಸ್‌ಗೆ ಮಾವ ಒತ್ತಡ: ಅಳಿಯ ಆತ್ಮಹತ್ಯೆ
ಮಂಗಳೂರು: ವಿವಾಹ ವಿಚ್ಛೇದನ ನೀಡುವಂತೆ ಮಾವ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಳಿಯ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ವರ್ಷದ ಹಿಂದೆ ಮಾಲೆಮಾರ್‌ನ ನವೀನ್ ಕುಮಾರ್ (27) ಅವರು ಮಂಗಳ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದರು. ಬಳಿಕ ದಾಂಪತ್ಯದಲ್ಲಿ ವಿರಸ ಉಂಟಾಗಿತ್ತು. ಮಾವ ನಾರಾಯಣ ಮತ್ತು ದೊಡ್ಡತ್ತೆ ಸುಮಿತ್ರ ಎಂಬವರು ಪದೇ ಪದೇ ಬಂದು, 'ಮಗಳಿಂದ ದೂರವಾಗು ಅವಳಿಗೆ ಡೈವೋರ್ಸ್ ನೀಡು' ಎಂದು ಪೀಡಿಸುತ್ತಿದ್ದರು. ಇದರಿಂದ ನೊಂದು ನವೀನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.