ಮೈಸೂರು

ಅಕ್ರಮವಾಗಿ ಸಾಗಿಸುತ್ತಿದ್ದ ಮದ್ಯ ವಶ

Published On :

ಪಿರಿಯಾಪಟ್ಟಣ: ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ 8 ಸಾವಿರ ಮೌಲ್ಯದ 96 ಟೆಟ್ರಾಪ್ಯಾಕ್ ಮದ್ಯವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿರುವ ಘಟನೆ ಶುಕ್ರವಾರ ರಾತ್ರಿ ಜರುಗಿದೆ.
ದೊಡ್ಡಬೀದಿ ನಿವಾಸಿ ಆಟೋ ಚಾಲಕ ಮಂಜುನಾಥ್ ಬಂಧಿತ ಆರೋಪಿ. ಮಂಜುನಾಥ್ ಪಟ್ಟಣದಿಂದ ಗೋಣಿಕೊಪ್ಪ ರಸ್ತೆ ಕಡೆಗೆ ಆಟೋದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ, ಅಬಕಾರಿ ಇಲಾಖೆಯ ಅಬಕಾರಿ ಉಪ ಅಧೀಕ್ಷಕ ಜಾನ್‌ಮಥಾಯ್ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿ, ಆರೋಪಿಯನ್ನು ಬಂಧಿಸಿ ಮದ್ಯ ಹಾಗೂ ಸಾಗಾಣಿಕೆಗೆ ಬಳಸಲಾಗುತ್ತಿದ್ದ ಆಟೋವನ್ನು ಪಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿಗಳಾದ ಶ್ರೀನಿವಾಸಮೂರ್ತಿ, ರಮೇಶ್, ಆದಿಶೇಷ ಪಾಲ್ಗೊಂಡಿದ್ದರು.

ಹೆಬ್ಬಾಳು ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ
ಕೆ.ಆರ್. ನಗರ: ತಾಲೂಕಿನ ಹೆಬ್ಬಾಳು ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯ ಮಟ್ಟದ ಅತ್ಯುತ್ತಮ ಸಾಧನೆ ಪ್ರಶಸ್ತಿ ದೊರೆತಿದೆ.
ಮೈಸೂರಿನ ಎಂಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷ ಸಿ. ಬಸವೇಗೌಡ, ಉಪಾಧ್ಯಕ್ಷ ಎಸ್. ಸಿದ್ದೇಗೌಡ ಅವರು ಸಂಘದ ಅಧ್ಯಕ್ಷ ಚಂದಗಾಲು ಶಿವಪ್ರಕಾಶ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಚ್.ಎಸ್. ಮಹೇಂದ್ರ ಅವರಿಗೆ ಪ್ರಶಸ್ತಿ ವಿತರಿಸಿದರು. ಬ್ಯಾಂಕಿನ ರೈತಪರ ಸೇವೆ ಮತ್ತು ಉತ್ತಮ ಕೆಲಸವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದ್ದು, ನಗದು ಪುರಸ್ಕಾರವನ್ನು ಕೊಡಲಾಯಿತು. ಮಾಜಿ ಅಧ್ಯಕ್ಷ ಎಚ್.ಸಿ. ಸುಂದರ್, ಎಚ್.ಆರ್. ಬಾಲಕೃಷ್ಣ, ಎಚ್.ಬಿ. ಯೋಗೇಶ್, ನಿರ್ದೇಶಕರಾದ ಜಿ. ದಾಮೋದರ, ಎಚ್.ಕೆ. ಮೋಹನ್, ಸ್ವಾಮಯ್ಯ, ಅನುಸೂಯಮ್ಮ, ಮೇಲ್ವಿಚಾರಕರಾದ ಶಿವಲಿಂಗೇಗೌಡ, ಮಂಜುನಾಥ್, ರವಿಕುಮಾರ್, ಉದಯಕುಮಾರ್ ಇದ್ದರು.

ಬಾಲಕ ನೀರುಪಾಲು
ಪಿರಿಯಾಪಟ್ಟಣ: ಸೈಕಲ್‌ನಲ್ಲಿ ತೆರಳುತ್ತಿದ್ದ ಬಾಲಕನೊರ್ವ ನಾಲೆಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಅತ್ತಿಗೊಡು-ಕಗ್ಗನಿಕೊಪ್ಪಲು ಗ್ರಾಮಗಳ ನಡುವಿನ ಹಾರಂಗಿ ಬಲದಂಡೆ ನಾಲೆಯಲ್ಲಿ ಜರುಗಿದೆ. ತಾಲೂಕಿನ ಕಗ್ಗನಿಕೊಪ್ಪಲು ಗ್ರಾಮದ ರವಿ ಎಂಬವರ ಪುತ್ರ ಅಭಿಷೇಕ (13) ಮೃತಪಟ್ಟ ದುರ್ದೈವಿ. ಅಭಿಷೇಕ್ ಶನಿವಾರ ಮಧ್ಯಾಹ್ನ ಅತ್ತಿಗೊಡು ಗ್ರಾಮದಿಂದ ಸೈಕಲ್ಲಿನಲ್ಲಿ ಕಗ್ಗನಿಕೊಪ್ಪಲಿಗೆ ತೆರಳುತ್ತಿದ್ದಾಗ ರಸ್ತೆ ಬದಿಯ ಹಾರಂಗಿ ಬಲದಂಡೆ ನಾಲೆಗೆ ಬಿದಿದ್ದಾನೆ. ಕಾಲುವೆಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು ಬಾಲಕ ಬಹುದೂರ ಕೊಚ್ಚಿಹೋಗಿರುವ ಸಾಧ್ಯತೆ ಇದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ಠಾಣೆಯ ಮುಖ್ಯಸ್ಥ ಬಿ.ಎಂ. ರಾಮರಾಜು ನೇತೃತ್ವದಲ್ಲಿ ಬಾಲಕನ ಶವಕ್ಕಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.