ತಂದೆ-ತಾಯಿ, ಗುರು ಋಣ ತೀರಿಸಲು ಸಾಧ್ಯವಿಲ್ಲ'
ಹುಣಸೂರು: ಜನ್ಮ ನೀಡಿದ ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಗುರುವಿನ ಋಣ ತೀರಿಸಲು ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರು ಅರಿತಲ್ಲಿ ಮಾತ್ರ ಗುರು-ಶಿಷ್ಯ ಪರಂಪರೆಗೆ ಅರ್ಥ ಬರುತ್ತದೆ ಎಂದು ಜಾನಪದ ವಿದ್ವಾಂಸ ಪಿ.ಕೆ. ರಾಜಶೇಖರ್ ವಿಷಾದ ವ್ಯಕ್ತಪಡಿಸಿದರು.
ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಸಿ. ಲೋಹಿತಾಶ್ವ ಬರೆದ ಆಡಳಿತಾತ್ಮಕ ಸಿದ್ಧಾಂತಗಳು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ, ಮಾತನಾಡಿ ಅವರು, ಶಿಷ್ಯನಿಗೆ ಬಡಿದು, ಬೈದು, ಗದರಿಸಿ ಪಾಠ ಹೇಳುವ ಕಾಲ ಹೋಗಿ ಗುರುವೇ ಶಿಷ್ಯನಿಗೆ ವಂದಿಸಿ ಪಾಠ ಕಲಿಸುವ ಕಾಲ ಬಂದಿದೆ. ಕೋಟಿ-ಕೋಟಿ ಚಕ್ರವರ್ತಿಗಳು, ಸಾಧಕರನ್ನು ರೂಪಿಸಬಲ್ಲ ಶಕ್ತಿ ಶಿಕ್ಷಕನಿಗೆ ಮಾತ್ರವಿದೆ ಎನ್ನುವುದನ್ನು ನಾವೆಲ್ಲರೂ ಅರಿಯಬೇಕು, ಗುರುವೆಂದರೆ ಕೇವಲ ಅಂಧಕಾರ ತುಂಬಿದ ವ್ಯಕ್ತಿಯನ್ನು ಬೆಳಕಿಗೆ ತರುವ ಮಹತ್ಕಾರ್ಯವನ್ನು ಮಾಡುವ ವ್ಯಕ್ತಿ. ಮಾತ್ರವಲ್ಲ ಜ್ಞಾನದಿಂದ ತುಂಬಿದ ತೂಕದ ವ್ಯಕ್ತಿತ್ವ ಹೊಂದಿದವರು ಗುರು ಎನ್ನುವುದನ್ನು ತಿಳಿಯಬೇಕು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಸಿ. ಲೋಹಿತಾಶ್ವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಧ್ಯಾಪಕರಾದ ಡಾ. ಕೆ.ಎನ್. ಮೋಹನ್, ಮುಖ್ಯಸ್ಥ ಎಂ.ಬಿ. ಬ್ರಹ್ಮಾನಂದ, ಪ್ರೊ. ವೆಂಕಟೇಶಯ್ಯ, ಡಾ. ಎಚ್.ಆರ್. ಪ್ರಕಾಶ್, ಘಟಕದ ಸಂಚಾಲಕರಾದ ಎನ್.ಸಿ. ಮಹೇಶ್, ಸಯ್ಯದ್ ರಿಯಾಜ್ ಪಾಷ, ಕ್ರೀಡಾ ಸಂಚಾಲಕ ಡಾ. ಬಿ.ವಿ. ಗಣೇಶ್, ಸಿಡಿಸಿ ಸದಸ್ಯರಾದ ಜಯರಾಂ, ರಾಜಶೇಖರ್ ಭಾಗವಹಿಸಿದ್ದರು.
ಇಂದು ಕೆಲವೆಡೆ ವಿದ್ಯುತ್ ವ್ಯತ್ಯಯ
ನಂಜನಗೂಡು: ನಂಜನಗೂಡು ಉಪ ವಿಭಾಗ ವ್ಯಾಪ್ತಿಗೆ ಬರುವ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಕಾಮಗಾರಿ ನಿರ್ವಹಿಸುವುದರಿಂದ ಸೆ.23ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಹೊಂದಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ. ನಂಜನಗೂಡು ಪಟ್ಟಣ, ಸುತ್ತಮುತ್ತಲಿನ ಪ್ರದೇಶ, ಮಹದೇವನಗರ ಕುಡಿವ ನೀರು ಸ್ಥಾವರ, ತಾಂಡ್ಯ ಕೈಗಾರಿಕಾ ಪ್ರದೇಶ, ನಂಜನಗೂಡು ಕೈಗಾರಿಕಾ ಪ್ರದೇಶ, ಚಿಕ್ಕಯ್ಯನ ಛತ್ರ ಹೋಬಳಿ, ದೇವರಸನಹಳ್ಳಿ, ಸುತ್ತಲಿನ ಗ್ರಾಮಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

