ಮೈಸೂರು

ಸಹಕಾರ ಇದ್ದರೆ ದೇಶ ಬೆಳವಣಿಗೆ: ಧ್ರುವ

Published On :

ಕ.ಪ್ರ.ವಾರ್ತೆ ಟಿ.ನರಸೀಪುರ ಸೆ. 22
ಜನ ಸಮುದಾಯದ ನಡುವೆ ಸಹಕಾರದ ಸಹಭಾಗಿತ್ವ ಎಂಬುದು ಇದ್ದಾಗ ಇಡೀ ದೇಶವೇ ಅಭಿವೃದ್ಧಿಶೀಲ ರಾಷ್ಟ್ರವಾಗುತ್ತದೆ ಎಂದು ಸಂಸದ ಆರ್. ಧ್ರುವನಾರಾಯಣ ಹೇಳಿದರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ನಡೆದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ನೆರೆಯ ಚೀನಾದಲ್ಲಿ ಜನ ಸಮುದಾಯದ ನಡುವೆ ಸಹಕಾರದ ಸಮನ್ವಯತೆ ಕಾಯ್ದುಕೊಂಡು ಹಾಗೂ ಎಲ್ಲರ ಸಹಭಾಗಿತ್ವ ಅವಕಾಶ ಇರುವುದರಿಂದ ಅದು ಅಭಿವೃದ್ಧಿ ರಾಷ್ಟ್ರವೆಂದು ಪ್ರಪಂಚದಲ್ಲಿ ಗುರುತಿಸಿಕೊಂಡಿದೆ ಎಂದರು.
ನರಸೀಪುರದಲ್ಲಿ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘವಾಗಲಿ ಅಥವಾ ತಾಲೂಕು ಅಂಬೇಡ್ಕರ್ ಅಭಿವೃದ್ಧಿ ಸಂಘಗಳೆರಡು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ. ಚಾ.ನಗರ ಸೇರಿದಂತೆ ಹಲವು ತಾಲೂಕು ಕೇಂದ್ರಗಳಲ್ಲಿರುವ ಅಂಬೇಡ್ಕರ್ ಭವನಗಳು ಬಳಕೆಯಾಗುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅನುದಾನವನ್ನು ವಿನಿಯೋಗಿಸಿ ಕಟ್ಟುವ ಭವನಗಳು ಸಮುದಾಯದ ಜನರಿಗೆ ಉಪಯೋಗವಾಗಬೇಕು. ಸಮರ್ಪಕವಾಗಿ ನಿರ್ವಹಣೆಯಾಗಬೇಕು ಎಂದು ತಿಳಿಸಿದರು.
ನಳಂದ ಬುದ್ಧವಿಹಾರದ ಬೋಧಿರತ್ನ ಭಂತೇಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ತುಂಬಲ ರಾಮಣ್ಣ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಆರ್. ಮಹದೇವಸ್ವಾಮಿ, ಉಪಾಧ್ಯಕ್ಷ ಎಂ. ಅಶ್ವಿನ್ಕುಮಾರ್, ಕಾರ್ಯದರ್ಶಿ ರಾಜಣ್ಣ, ಲೆಕ್ಕಾಧಿಕಾರಿ ಪುಟ್ಟಸ್ವಾಮಿ, ಚಾ.ನಗರ ಸಮಾಜ ಕಲ್ಯಾಣಾಧಿಕಾರಿ ದಾಶರಥಿ, ಎಸ್ಸಿ ಎಸ್ಟಿ ಅಭಿವೃದ್ಧಿ ಅಧಿಕಾರಿ ಎಸ್.ರಾಜೇಶ್, ಮುಖಂಡರಾದ ಎಂ.ಎಸ್. ಬಸವರಾಜು, ಕಮಲ್, ಶಿವಣ್ಣ, ಎನ್.ನಾಗಯ್ಯ, ಡಿ.ಆರ್. ಪುಟ್ಟಸ್ವಾಮಿ, ಪುಟ್ಟರಾಜು, ಟಿ.ಎನ್. ಪುಟ್ಟನಂಜಯ್ಯ, ಶ್ರೀಕಂಠ, ಪುಟ್ಟರಾಜು, ರೇವಣ್ಣ, ಎನ್.ಸೋಮಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.