ಪಿಂಚಣಿ ಸಮಸ್ಯೆಗಳಿದ್ದರೆ ಸಂಪರ್ಕಿಸಿ
ಕ.ಪ್ರ.ವಾರ್ತೆ ಸಾಲಿಗ್ರಾಮ ಸೆ. 24
ವಿವಿಧ ಪಿಂಚಣಿ ಯೋಜನೆಯ ಅರ್ಹ ಫಲಾನುಭವಿಗಳು ತಮ್ಮ ಯಾವುದೇ ಸಮಸ್ಯೆಗಳಿದ್ದರೂ ನಾಡಕಚೇರಿಯನ್ನು ಸಂಪರ್ಕಿಸಬೇಕೆಂದು ಹುಣಸೂರು ಉಪವಿಭಾಗಾಧಿಕಾರಿ ವಿನುತಪ್ರಿಯಾ ಹೇಳಿದರು.
ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಮಂಗಳವಾರ ನಾಡಕಚೇರಿಯಲ್ಲಿ ನಡೆದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವು ಫಲಾನುಭವಿಗಳಿಗೆ ಪಿಂಚಣಿ ಯೋಜನೆಯ ಮಂಜೂರಾತಿ ಆದೇಶ ಪತ್ರ ವಿತರಿಸಿ ಅವರು ಮಾತನಾಡಿದರು.
ಹುಣಸೂರು ಉಪವಿಭಾಗ ವ್ಯಾಪ್ತಿಯಲ್ಲಿ ಬರುವ ನಾಲ್ಕು ತಾಲೂಕು ಕೇಂದ್ರಗಳ ಪ್ರತಿ ಹೋಬಳಿಗಳಲ್ಲಿ ಪಿಂಚಣಿ ಅದಾಲತ್ ನಡೆಯುತ್ತಿದ್ದು, ಇದರಲ್ಲಿ ಅಧಿಕಾರಿಗಳೊಂದಿಗೆ ನಾನು ಕೂಡ ಭಾಗವಹಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಣೆ ಮಾಡುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತುಗಳನ್ನು ವಿತರಣೆ ಮಾಡಲಾಗುತ್ತಿದೆ. ಇಂತಹ ಸರ್ಕಾರದ ಆದೇಶದಂತೆ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತ ತಪ್ಪದೇ ಪಾಲ್ಗೊಂಡು, ಯೋಜನೆ ಯಶಸ್ವಿಗೆ ಕಾರ್ಯಪ್ರವೃತ್ತರಾಗಬೇಕೆಂದು ತಿಳಿಸಿದರು.
ಅಟಲ್ ಜೀ-ಜನಸ್ನೇಹಿ ಕೇಂದ್ರವು ಪಟ್ಟಣದಲ್ಲಿ ಆರಂಭಗೊಂಡ ದಿನದಿಂದ ಇಲ್ಲಿಯವರೆಗೆ ಇಂದಿರಾ ವೃದ್ಯಾಪ್ಯ ವೇತನ-13, ಸಂಧ್ಯಾ ಸುರಕ್ಷಾ-246, ವಿಧವಾ ವೇತನ-163, ಅಂಕವಿಕಲ ವೇತನ (400)-14, ಅಂಗವಿಕಲ ವೇತನ (1000)-24 ಜನರಿಗೆ ಒಟ್ಟು 460 ಫಲಾನುಭವಿಗಳಿಗೆ ಮಂಜೂರಾತಿ ಆದೇಶ ಪತ್ರ ವಿತರಿಸಲಾಗಿದ್ದು, ಈ ದಿನ ಹೊಸದಾಗಿ 49 ಅರ್ಜಿ ಸ್ವೀಕರಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಯಾರಿಗೆ ಈ ಹಿಂದೆ ಪಿಂಚಣಿ ಮಂಜೂರಾಗಿ ಹಣ ಬಂದಿಲ್ಲ, ಮಂಜೂರಾಗಿದ್ದು ಈಗ ರದ್ದಾಗಿದೆ ಹಾಗೂ ಅರ್ಜಿ ಕೊಟ್ಟರೂ ಕೆಲಸವಾಗಿಲ್ಲ ಎಂಬುದರ ಮಾಹಿತಿ ಪಡೆದು ಸ್ಥಳದಲ್ಲೆ ಪರಿಹರಿಸಿದರು.
ನಾಡಕಚೇರಿಯಲ್ಲಿನ ಪಿಂಚಣಿ ಯೋಜನೆಯ ದಾಖಲೆಗಳನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು. ಅದಾಲತ್ನಲ್ಲಿ ಉಪ-ತಹಸೀಲ್ದಾರ್ ತಿಮ್ಮಯ್ಯ, ರಾಜಸ್ವ ನಿರೀಕ್ಷಕ, ಪ್ರಭಾಕರ್, ಗ್ರಾಮ ಲೆಕ್ಕಾಧಿಕಾರಿಗಳಾದ ಕುಮಾರ್, ತಿಮ್ಮಯ್ಯ, ಸಂಜೀವಮೂರ್ತಿ, ಪ್ರಹ್ಲಾದ್, ರಾಮಯ್ಯ, ಈರಯ್ಯ, ಸಿಬ್ಬಂದಿಗಳಾದ ಸಂದೀಪ್, ಉಮೇಶ್, ಶಿವು ಮತ್ತು ಸಾರ್ವಜನಿಕರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

