ಮೈಸೂರು

ಬನ್ನಿಕುಪ್ಪೆ ಕಾಮಗಾರಿ ಬಗ್ಗೆ ವರದಿ ನೀಡಿ

Published On :

ಹುಣಸೂರು: ನಿರ್ಮಿತಿ ಕೇಂದ್ರದ ವತಿಯಿಂದ ಬನ್ನಿಕುಪ್ಪೆ ಗ್ರಾಮದಲ್ಲಿ ನಡೆದ ರಸ್ತೆ, ಚರಂಡಿ ಕಾಮಗಾರಿಗಳ ಬಗ್ಗೆ ವ್ಯಾಪಕ ದೂರು ಬಂದಿರುವುದರಿಂದ, ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿ ವರದಿ ನೀಡಬೇಕೆಂದು ಶಾಸಕ ಎಚ್.ಪಿ. ಮಂಜುನಾಥ್ ತಾಪಂ ಇಒಗೆ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ಎಲಚನಹಳ್ಳಿ ದೊಡ್ಡಹಗೌಡನಕೊಪ್ಪಲು, ಕಾಳೇಗೌಡನ ಕೊಪ್ಪಲಿನ ರಸ್ತೆ ಕಾಮಗಾರಿ ಆರಂಭಿಸದಿರುವ ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಎಂಜಿನಿಯರ್ ಬೋಜರಾಜರಿಗೆ ತಾಕೀತು ಮಾಡಿದರು.
ಸಂತೆ ಮೈದಾನದಲ್ಲಿ ಎಪಿಎಂಸಿ ವತಿಯಿಂದ ನಿರ್ಮಿಸಿರುವ ಮಾರ್ಕೆಟ್ ಅನೈತಿಕ ಚಟುಚಟಿಕೆಯ ತಾಣವಾಗಿದ್ದು, ರೈತರಿಗೆ ಉಪಯೋಗವಾಗುತ್ತಿಲ್ಲ. ತಕ್ಷಣವೆ ಪುರಸಭೆ ಸುಪರ್ದಿಗೆ ಒಪ್ಪಿಸಬೇಕೆಂದು ಎಪಿಎಂಸಿ ಕಾರ್ಯದರ್ಶಿಗೆ ತಿಳಿಸಿದರು.
ಲಕ್ಷಾಂತರ ರು. ವೆಚ್ಚದಲ್ಲಿ ಮಾರ್ಕೆಟ್ ನಿರ್ಮಿಸಿದರೂ ಬಳಕೆಯಾಗದೆ ಕಿಡಿಗೇಡಿಗಳು ಅಡ್ಡ ಮಾಡಿಕೊಂಡಿದ್ದಾರೆ. ರೈತರು ರಾತ್ರಿ ವೇಳೆ ತರಕಾರಿ ತಂದವರು ಬೀದಿಯಲ್ಲಿ ಮಲಗುವಂತಾಗಿದೆ. ನಿರ್ವಹಣೆ ಮಾಡುತ್ತಿಲ್ಲವೇಕೆ ಎಂದು ಕಾರ್ಯದರ್ಶಿ ಸುರೇಶ್‌ಬಾಬು ಅವರನ್ನು ಪ್ರಶ್ನಿಸಿ, ತಕ್ಷಣವೇ ಪುರಸಭೆಗೆ ಹಸ್ತಾಂತರಿಸುವಂತೆ ಸೂಚಿಸಿದರು. ಅಲ್ಲದೆ, ದುರಸ್ತಿಗೊಳಿಸಿ, ಕಾವಲುಗಾರರನ್ನು ನೇಮಿಸಿ ಉಸ್ತುವಾರಿ ವಹಿಸಬೇಕೆಂದು ಸೂಚಿಸಿದರು.
ಜಿಪಂ ಸದಸ್ಯ ಸಿ.ಟಿ. ರಾಜಣ್ಣ, ಡಾ.ಪುಷ್ಪಾ ಅಮರ್‌ನಾಥ್, ದೇವರಾಜ್, ಮಂಜು, ರಮೇಶ್, ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯಕ, ಮಹದೇವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.