ಅನ್ನದಾತರ ಆತ್ಮಕಥೆ ಸಾಧಕ ರೈತನಿಗೆ ಸನ್ಮಾನ
ಕ.ಪ್ರ.ವಾರ್ತೆ , ಹುಣಸೂರು , ಸೆ. 29
ಕನ್ನಡಪ್ರಭ ಪತ್ರಿಕೆಯು ಪ್ರಕಟಿಸಿದ ಅನ್ನದಾತರ ಆತ್ಮಕಥೆ ಸುದ್ದಿ ಸರಣಿಯ 100ನೇ ಭಾಗದ ಯುವ ರೈತ ಎಂ.ಬಿ. ಸುರೇಂದ್ರ ಹಾಗೂ ಮೈವಿವಿಯಿಂದ ಚಿನ್ನದ ಪದಕ ಪಡೆದ ಚನ್ನಸೋಗೆಯ ಸ್ವಾತಿ ಅವರನ್ನು ಪಟ್ಟಣದ ರೋಟರಿ ಸಂಸ್ಥೆ ವತಿಯಿಂದ ಶಾಸಕ ಎಚ್.ಪಿ. ಮಂಜುನಾಥ್ ಸನ್ಮಾನಿಸಿದರು.
ಪಟ್ಟಣದ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ದೇಶದ ಬೆನ್ನೆಲುಬು ರೈತಾಪಿ ವರ್ಗವಾಗಿದ್ದರೂ ದಿನಗಳು ಕಳೆದಂತೆ ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶದತ್ತ ರೈತರು ಗುಳೆ ಹೋಗುತ್ತಿರುವುದು ವಿಷಾದನೀಯ. ಇದಕ್ಕೆ ಅಪವಾದ ಎಂಬಂತೆ ಮಾದರಿಯಾಗಿ ನಿಂತ ನೂರಾರು ರೈತರಲ್ಲಿ ತಾಲೂಕಿನ ಮಲ್ಲೇಗೌಡನಕೊಪ್ಪಲು ಗ್ರಾಮದ ಪಧವೀಧರ, ಯುವ ರೈತ ಎಂ.ಬಿ. ಸುರೇಂದ್ರ ಒಬ್ಬರಾಗಿದ್ದಾರೆ. ಇವರು ಕೃಷಿ ಮತ್ತು ಹೈನುಗಾರಿಕೆಯಲ್ಲಿ ಕಂಡುಕೊಂಡಿದ್ದಾರೆ. ಸರ್ಕಾರಿ ಕೆಲಸಕ್ಕೆ ಹೋಗುವ ಅವಕಾಶವಿದ್ದರೂ ಅದನ್ನು ಬಿಟ್ಟು ಕೃಷಿಯಲ್ಲಿ ಉತ್ತಮವಾದ ಸಾಧನೆ ಮಾಡಿದ್ದಾರೆ ಎಂದು ಶ್ಲಾಘಿಸಿದರು.
ರೋಟರಿ ಸಂಸ್ಥೆ ಬಹುಕಾಲದಿಂದ ಹಮ್ಮಿಕೊಳ್ಳುತ್ತಾ ಬಂದಿರುವ ಸಮಾಜ ಸೇವಾ ಕಾರ್ಯವು ಶ್ಲಾಘನೀಯ. ಪೋಲಿಯೋ ನಿರ್ಮೂಲನೆಗೆ ಜಾಗೃತಿ, ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ಪೂರೈಕೆ, ಶಾಲಾ ವಿದ್ಯಾರ್ಥಿಗಳಿಗೆ ಹೆತ್ತವರ ವಿಮಾ ಯೋಜನೆಯಲ್ಲಿ ಸೌಲಭ್ಯ ಕಲ್ಪಿಸುವ ಸೇವೆ ಪ್ರಶಂಸನೀಯವಾದದು ಎಂದರು.
ಇದೇ ವೇಳೆ ರೋಟರಿ ಸಂಸ್ಥೆಯ ಮಹತ್ವಾಕಾಂಕ್ಷೆಯ ಹೆತ್ತವರ ವಿಮಾ ಯೋಜನೆಗೆ ಕಳೆದ ವರ್ಷ ಒಂದು ಲಕ್ಷ ರು. ನೆರವು ನೀಡಿದ ಶಾಸಕರನ್ನು ಹಾಗೂ ಬೇರೆಡೆಗೆ ವರ್ಗಾವಣೆಗೊಂಡ ಅಬಕಾರಿ ನೀರಿಕ್ಷಕ ಉಮಾಶಂಕರ್ ದಂಪತಿಯನ್ನು ಸನ್ಮಾನಿಸಲಾಯಿತು.
ರೋಟರಿ ಸಂಸ್ಥೆ ಅಧ್ಯಕ್ಷ ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ್ ಸಂಪಾದಕತ್ವದ ವಿಶೇಷ ವಾರ್ತಾಪತ್ರ ಬಿಡುಗಡೆಗೊಳಿಸಲಾಯಿತು. ನಿಯೋಜಿತ ಅಧ್ಯಕ್ಷ ಧರ್ಮಾಪುರ ನಾರಾಯಣ್, ಜೋನಲ್ ಲೆಫ್ಟಿನೆಂಟ್ ಎಚ್.ಎಸ್. ಸಚ್ಚಿತ್, ರೋಟರಿ ಶಾಲಾ ಸಮಿತಿ ಕಾರ್ಯದರ್ಶಿ ಹನಗೋಡು ನಟರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

