ಯೋಗ ಮಹತ್ವ ಅರಿಯಬೇಕು
ಕ.ಪ್ರ.ವಾರ್ತೆ , ಮೈಸೂರು , ಸೆ. 29
ಭಾರತೀಯ ಆಯುರ್ವೇದ ಪದ್ಧತಿಗಳಲ್ಲಿ ಒಂದಾದ ಯೋಗದ ಬಗ್ಗೆ ಇಂದು ಪಾಶ್ಚಿಮಾತ್ಯ ರಾಷ್ಟ್ರಗಳು ಹೆಚ್ಚು ತಿಳಿದುಕೊಳ್ಳಲು ಆಸಕ್ತಿ ತೋರುತ್ತಿದ್ದು, ನಮ್ಮಲ್ಲಿಯೂ ಸಹ ಪ್ರತಿಯೊಬ್ಬರೂ ಯೋಗದ ಮಹತ್ವ ಅರಿಯಬೇಕಾದ ಅವಶ್ಯಕತೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.
ಯೋಗ ದಸರಾ ಉಪಸಮಿತಿಯು ದಸರಾ ಮಹೋತ್ಸವ ಅಂಗವಾಗಿ ಭಾನುವಾರ ನಗರದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಏರ್ಪಡಿಸಿದ್ದ ಸ್ಮೃತಿ ಯೋಗ ಹಾಗೂ ಯೋಗ ರಸಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸು ಮತ್ತು ದೇಹದ ನಡುವೆ ಸಮನ್ವಯ ಕಾಪಾಡಲು ಯೋಗ ಪ್ರಮುಖ ಅಸ್ತ್ರ. ನಮ್ಮ ಪೂರ್ವಿಕರು ಯೋಗ ಅನುಸರಿಸುತ್ತಿದ್ದರಿಂದಲೇ ಜ್ಞಾನಿಗಳಾಗಿದ್ದರು ಎಂದರು.
ರಾಜ ಪರಂಪರೆ ಹುಟ್ಟುಹಾಕಿದ ದಸರಾ ಹಬ್ಬವು ಜನರ ಹಬ್ಬವಾಗಬೇಕು ಎಂಬ ಉದ್ದೇಶದಿಂದ ಹಲವು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ರೈತ ದಸರಾ, ಗ್ರಾಮೀಣ ದಸರಾ, ಯೋಗ ದಸರಾ ಹಾಗೂ ಇನ್ನಿತರ ದಸರಾ ಆಚರಿಸಲಾಗುತ್ತಿದೆ. ಈ ಮೂಲಕ ಜನರನ್ನು ಒಳಗೊಂಡು ಅತ್ಯಂತ ಸಂತೋಷದಿಂದ ದಸರಾ ಆಚರಿಸಬೇಕು ಎಂಬುದೇ ಉದ್ದೇಶವಾಗಿದೆ. ಈ ಮೂಲಕ ಯೋಗದ ಬಗ್ಗೆ ಜನರಿಗೆ ತಿಳಿವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀ ಪ್ರಕಾಶ ಸ್ವಾಮೀಜಿ, ದಕ್ಷಿಣ ವಲಯ ಐಜಿಪಿ ರಾಮಚಂದ್ರರಾವ್, ಆಯುಷ್ ನಿರ್ದೇಶನಾಲಯದ ನಿರ್ದೇಶಕ ವಿಜಯಕುಮಾರ್ ಗೋಗಿ, ಯೋಗ ದಸರಾ ಉಪಸಮಿತಿ ಅಧ್ಯಕ್ಷ ಎಲ್. ಭಾಸ್ಕರ್, ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಮಾಜಿ ಮೇಯರ್ ನಾರಾಯಣ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ನಾಗೇಶ್ ಮತ್ತಿತರರು ಇದ್ದರು. ನಗರದ ವಿವಿಧ ಶಾಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

