ನೀತಿ ಆಧಾರಿತ ರಾಜಕೀಯ ಮುಖ್ಯ: ಸಿದ್ದನಗೌಡ ಪಾಟೀಲ
ಕ.ಪ್ರ.ವಾರ್ತೆ , ಮೈಸೂರು , ಸೆ. 30
ಪ್ರಧಾನಿ ಅಭ್ಯರ್ಥಿಯ ವ್ಯಕ್ತಿ ಆಧಾರಿತ ರಾಜಕಾರಣಕ್ಕಿಂತಲೂ ನೀತಿ ಆಧಾರಿತ ರಾಜಕೀಯ ಮುಖ್ಯ ಎಂದು ಸಿಪಿಐನ ರಾಷ್ಟ್ರೀಯ ಮಂಡಳಿ ಸದಸ್ಯ ಸಿದ್ದನಗೌಡ ಪಾಟೀಲ ಹೇಳಿದರು.
ಸಿಪಿಐ ಸೋಮವಾರ ಏರ್ಪಡಿಸಿದ್ದ ಎಡಪಕ್ಷಗಳ ರಾಜಕೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಎಂಬ ವ್ಯಕ್ತಿ ಆಧಾರಿತ ರಾಜಕಾರಣಕ್ಕಿಂತಲೂ ನೀತಿ ಆಧಾರಿತ ರಾಜಕೀಯ ಮುಖ್ಯ. ಕಾಂಗ್ರೆಸ್ ಮತ್ತು ಬಿಜೆಪಿಯ ಜನವಿರೋಧಿ ನೀತಿ ಬದಲಾಗಬೇಕಿದೆ. ಕಾಂಗ್ರೆಸ್- ಬಿಜೆಪಿಯ ಆರ್ಥಿಕ ನೀತಿಯಲ್ಲಿ ಯಾವುದೆ ಬದಲಾವಣೆ ಇಲ್ಲ. ಬದಲಿಗೆ ಭ್ರಷ್ಟಾಚಾರದಲ್ಲೂ ಪೈಪೋಟಿ ಇದೆ ಎಂದು ಟೀಕಿಸಿದರು.
ಉಭಯ ರಾಷ್ಟ್ರೀಯ ಪಕ್ಷಗಳೂ ಲೋಕಸಭಾ ಚುನಾವಣೆಗೆ ಸನ್ನದ್ಧವಾಗಿವೆ. ಪ್ರಧಾನಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿರುವ ಅವರ ನಿರ್ಧಾರ ಸಂವಿಧಾನ ಮತ್ತು ಪ್ರಜಾಸತಾತ್ಮಕತೆಯ ವಿರೋಧಿ. ನಮ್ಮದು ಅಧ್ಯಕ್ಷೀಯ ಮಾದರಿ ವ್ಯವಸ್ಥೆ ಇಲ್ಲ. ಸಂಸದೀಯ ಮಾದರಿ ಇದೆ. ಎರಡೂ ಪಕ್ಷಗಳ ಜನರ ಮನವೊಲಿಕೆಗೆ ಯಾವುದೆ ರೀತಿಯ ಪ್ರಣಾಳಿಕೆ ಇಲ್ಲ. ಬದಲಿಗೆ ವ್ಯಕ್ತಿ ಆಧಾರಿತ ರಾಜಕೀಯಕ್ಕೆ ಮುಂದಾಗಿವೆ ಎಂದು ಹೇಳಿದರು. ಕಾಂಗ್ರೆಸ್ ನೇತೃತ್ವದ ಸರ್ಕಾರ ಭೂ ಸುಧಾರಣೆ ಕಾಯ್ದೆ ಮೂಲಕ ಊಳುವವನಿಗೆ ಭೂಮಿ ಎಂದು ಬಡ ರೈತರಿಗೆ ಭೂಮಿ ನೀಡಲಾಯಿತು. ಆದರೆ ಈಗ ಅದೆ ಸರ್ಕಾರ ರೈತರಿಂದ ಭೂಮಿ ಕಸಿದುಕೊಂಡು ಉದ್ಯಮಿಗಳಿಗೆ ನೀಡುತ್ತಿದೆ ಎಂದು ಟೀಕಿಸಿದರು. ಕಾಂಗ್ರೆಸ್ ಮತ್ತು ಬಿಜೆಪಿಗೆ ಯಾವುದೆ ನೈತಿಕ ಹಕ್ಕಿಲ್ಲ ಎಂದ ಅವರು, ಬೆಂಗಳೂರಿನಲ್ಲಿ ಅ.8ಕ್ಕೆ ಬೃಹತ್ ರ್ಯಾಲಿ ಆಯೋಜಿಲಾಗಿದೆ. ಆದ್ದರಿಂದ ರ್ಯಾಲಿಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಅವರು ಕೋರಿದರು.
ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಜಿ.ಎನ್. ನಾಗರಾಜ್, ಕಾರ್ಯದರ್ಶಿ ಕೆ. ಬಸವರಾಜು, ಸಿಪಿಐ ಕಾರ್ಯದರ್ಶಿ ಎಚ್.ಆರ್. ಶೇಷಾದ್ರಿ, ಮುಖಂಡ ಜಯರಾಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

