ಮೈಸೂರು

'ಸೇವಾ ಮನೋಭಾವದಿಂದ ರಾಷ್ಟ್ರಪ್ರೇಮ ಬೆಳೆಸಿ'

Published On :

ಕ.ಪ್ರ. ವಾರ್ತೆ, ರಾವಂದೂರು, ಸೆ.30
ಗಾಂಧೀಜಿಯ ಕನಸಿನಂತೆ ಸೇವಾ ಮನೋಭಾವನೆಯಿಂದ ಪ್ರತಿಯೊಬ್ಬರು ರಾಷ್ಟ್ರಪ್ರೇಮ ಬೆಳೆಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ರಾವಂದೂರು ವಿಜಯಬ್ಯಾಂಕ್ ವ್ಯವಸ್ಥಾಪಕ ಸೌಮನ್ ಷಾ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಿಗಾಗಿ ಏರ್ಪಡಿಸಲಾಗಿದ್ದ ರಸಪ್ರಶ್ನೆ ಮತ್ತು ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಸೇವಾ ಮನೋಭಾವನೆ ಕಡಿಮೆಯಾಗುತ್ತಿದ್ದು, ಸಮಾಜದಲ್ಲಿ ಸ್ವಾರ್ಥ ಮನೆ ಮಾಡಿದೆ. ಸೃಜನಾತ್ಮಕತೆ ಮತ್ತು ಪ್ರಾಪಂಚಿಕ ಜ್ಞಾನ ಹೊಂದಿರುವ ವಿದ್ಯಾರ್ಥಿ ಮಾತ್ರ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮುಂದೆ ಬರಲು ಸಾಧ್ಯ ಎಂದು ತಿಳಿಸಿದರು. ಪ್ರಾಂಶುಪಾಲ ಜಗನ್ನಾಥರಾವ್ ಜೋಷಿ ಮಾತನಾಡಿದರು. ವಿಜಯಬ್ಯಾಂಕ್ ಹಾಗೂ ಎನ್‌ಎಸ್‌ಎಸ್ ಯೋಜನೆಯ ಸಂಯೋಜನೆಯೊಂದಿಗೆ ರಸಪ್ರಶ್ನೆ ಮತ್ತು ರಂಗೋಲಿ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ರಾಜೀವ್, ಬ್ಯಾಂಕ್ ಸಿಬ್ಬಂದಿಯಾದ ಸುನಿಲ್, ರಮೇಶ್‌ಕುಮಾರ್, ರವಿ, ರಮೇಶ್, ಕಲೀಲುಲ್ಲಖಾನ್, ರಾಜೇಶ್, ಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.