'ಜಾಗತೀಕರಣ ಸಂದೇಶ ಮರೆತ ಯುವಜನತೆ'
ಕ.ಪ್ರ.ವಾರ್ತೆ , ಮೈಸೂರು , ಸೆ. 30
ಇಂದಿನ ಯುವಜನರು ಸರಿಯಾದ ಜೀವನಶೈಲಿ ರೂಪಿಸಿಕೊಳ್ಳದೇ ಹಾಳಾಗಿ ಹೋಗಿದ್ದಾರೆ. ಜಾಗತೀಕರಣದ ಸಂದೇಶ ಮರೆತಿದ್ದಾರೆ ಎಂದು ಮೈವಿವಿ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ. ಮಹೇಶ್‌ಚಂದ್ರ ಗುರು ಅಭಿಪ್ರಾಯಪಟ್ಟರು.
ಸೋಮವಾರ ನಗರದ ಮಹಾರಾಜ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಭದ್ರ ಹಿತಾಸಕ್ತಿಗಳು ಯುವಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಂದ ಸಮಾಜ, ಸಂಸ್ಕೃತಿ, ಏಕತೆ ಛಿದ್ರವಾಗುತ್ತಿದೆ. ಎನ್‌ಎಸ್‌ಎಸ್ ಕಾರ್ಯಕರ್ತರು ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ದೇಶ ಕಟ್ಟುವ ಕಡೆ ಚಿಂತಿಸಬೇಕಿದೆ ಎಂದರು. ದೇಶದಲ್ಲಿ ಸೇವಾಲಾಲ್ ಹಾಗೂ ಶೋಕಿಲಾಲ್ ಎಂಬ ಎರಡು ರೀತಿಯ ಜನರಿದ್ದಾರೆ. ಯಾರು ತಮ್ಮ ಸೇವೆಯಿಂದ ಸದಾ ಕಾಲ ಚಿರಸ್ಮರಣೀಯರಾಗಿರುತ್ತಾರೋ ಅವರೆಲ್ಲ ಸೇವಾಲಾಲ್‌ಗಳು. ಮಿಕ್ಕವರೆಲ್ಲ ಶೋಕಿಲಾಲ್‌ಗಳು. 2020ಕ್ಕೆ ಭಾರತ ರೂಪುಗೊಳ್ಳಬೇಕೆಂದರೆ ಶಿಕ್ಷಣ ಮುಖ್ಯವಾದ ಸಾಧನ ಎಂದು ತಿಳಿಸಿದರು.
ಮಹಾರಾಜ ಕಾಲೇಜು ಪ್ರಾಂಶುಪಾಲೆ ಪ್ರೊ.ಸ.ನ. ಗಾಯತ್ರಿ, ಆಡಳಿತಾಧಿಕಾರಿ ಪ್ರೊ.ನಾಗರಾಜಮೂರ್ತಿ, ಎನ್‌ಎಸ್‌ಎಸ್ ಅಧಿಕಾರಿಗಳಾದ ಷಹಸೀನ ಬೇಗಂ, ಪ್ರೊ.ಶ್ರೀಕಂಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

