ಮತಗಟ್ಟೆಯ ಅಧಿಕಾರಿಗಳಿಗೆ ತರಬೇತಿ ನಾಳೆ: ಡಿಸಿ ಶಿಖಾ
ಮೈಸೂರು: ಲೋಕಸಭಾ ಚುನಾವಣೆ ಅಂಗವಾಗಿ ಮಾ.29 ರಂದು ಎಲ್ಲ ಮತಗಟ್ಟೆ ಅಧಿಕಾರಿಗಳಿಗೆ ನಡೆದ ಪ್ರಥಮ ತರಬೇತಿಯಲ್ಲಿ ಹಲವಾರು ಅಧಿಕಾರಿ, ನೌಕರರು ಗೈರು ಹಾಜರಾಗಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಹೇಳಿದ್ದಾರೆ. ಕೆಲವೊಂದು ಇಲಾಖಾ ಮುಖ್ಯಸ್ಥರು ಪತ್ರ ಬರೆದು ಆರ್ಥಿಕ ವರ್ಷದ ಕಡೇ ದಿನ ಇರುವುದರಿಂದ ಪ್ರಥಮ ತರಬೇತಿಗೆ ಅಧಿಕಾರಿ, ನೌಕರರು ಹಾಜರಾಗಲು ಕಷ್ಟವಾಗಿರುವುದರಿಂದ ಪ್ರಥಮ ತರಬೇತಿಯನ್ನು ಮುಂದಿನ ದಿನಾಂಕದಂದು ಆಯೋಜಿಸಬೇಕೆಂದು ಕೋರಿದ್ದಾರೆ. ಅದರಂತೆ ಏ.3ರ ಬೆಳಗ್ಗೆ 9ಕ್ಕೆ ಮಹಾರಾಜ ಶತಮಾನೋತ್ಸವ ಮಹಾರಾಜ ಶತಮಾನೋತ್ಸವ ಭವನದಲ್ಲಿ ವಿಶೇಷ ತರಬೇತಿ ಆಯೋಜಿಸಿದೆ. ಈ ತರಬೇತಿಗೆ ಮಾ.29 ರಂದು ನಡೆದ ಪ್ರಥಮ ತರಬೇತಿಗೆ ಗೈರು ಹಾಜರಾದ ಅಧಿಕಾರಿ, ನೌಕರರು ಸಹ ಕಡ್ಡಾಯವಾಗಿ ಭಾಗವಹಿಸಲು ತಿಳಿಸಿದೆ. ತಪ್ಪಿದ್ದಲ್ಲಿ ಚುನಾವಣಾ ಜನಪ್ರತಿನಿಧಿ ಕಾಯ್ದೆಯಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂಹಿತೆ ಉಲ್ಲಂಘನೆ: 2 ಪ್ರಕರಣ ದಾಖಲು
ಮೈಸೂರು: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಎಚ್.ಡಿ. ಕೋಟೆಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಜೆ.ಎಂ. ಮಹದೇವಪ್ಪ ಹಾಗೂ ಅಧ್ಯಕ್ಷ ಸಿ.ತಮ್ಮಣ್ಣೇಗೌಡ ಹಾಗೂ ವರುಣ ಕ್ಷೇತ್ರದ ವಿಶ್ವಕರ್ಮ ಜನಾಂಗದ ಮಹಾಸಭಾ ದೊಡ್ಡಹೊಮ್ಮ ಅವರ ವಿರುದ್ಧ ಚುನಾವಣಾಧಿಕಾರಿಗಳು ಮೊಕದ್ದಮೆ ದಾಖಲು ಮಾಡಿದ್ದಾರೆ. ಎಚ್.ಡಿ. ಕೋಟೆಯಲ್ಲಿ ಕಾಂಗ್ರೆಸ್ ವತಿಯಿಂದ ರೋಡ್ಶೋ ನಡೆಸಲು ಮಾತ್ರ ಪಪಂ ವತಿಯಿಂದ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಿಂದ ಅನುಮತಿ ಪಡೆದಿದ್ದು, ನಂತರ ಶಾದಿಮಹಲ್ನಲ್ಲಿ ಭಾಗವಹಿಸಿದರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಅನುಮತಿ ಪಡೆಯದೆ 2,500 ಪಾಂಪ್ಲೆಟ್ಸ್ಗಳನ್ನು ಮುದ್ರಿಸಲಾಗಿತ್ತು. ಜಾತಿ ಆಧಾರದಲ್ಲಿ ಕಾಂಗ್ರೆಸ್ಗೆ ಮತ ಹಾಕುವಂತೆ ವಿಶ್ವಕರ್ಮ ಜನಾಂಗದ ಮಹಾಸಭಾ ದೊಡ್ಡಹೊಮ್ಮ ತೀರ್ಮಾನ ಕೈಗೊಂಡಿದ್ದರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

