ಅಕ್ರಮ ಕಟ್ಟಡ ನಿರ್ಮಾಣ: ಜಿಲ್ಲಾಧಿಕಾರಿಗೆ ದೂರು
ಎಚ್.ಡಿ. ಕೋಟೆ: ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮಾಲಾರಾಮ್ ಎಂಬುವರು 3 ಗುಂಟೆ ಜಮೀನಿನಲ್ಲಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದಾರೆ ಎಂದು ಮಾದಾಪುರ ಗ್ರಾಪಂ ಸದಸ್ಯ ಎಂ. ಶಿವನಾಗರ್ಯ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಸರ್ವ ನಂ. 56-14ರಲ್ಲಿ 3 ಗುಂಟೆ ಪ್ರದೇಶದಲ್ಲಿ ಬೇನಾರಾಮ್ ಅವರ ಪುತ್ರ ಮಾಲಾರಾಮ್ ಅವರು ಈ ಕಟ್ಟಡ ನಿರ್ಮಾಣ ಮಾಡುತ್ತಿದ್ದು, 2013ರ ಡಿ. 20ರಂದು ಜಿಲ್ಲಾ ಕಚೇರಿಗೆ ಅನ್ಯಕ್ರಾಂತ ಮಂಜೂರಾತಿಗಾಗಿ ಅರ್ಜಿ ನೀಡಿದ್ದು, ಈ ಅರ್ಜಿಯು ನಮ್ಮ ಗ್ರಾಪಂ ಕಾರ್ಯಾಲಯಕ್ಕೆ ಬಂದಿದ್ದು, ಗ್ರಾಪಂ ವತಿಯಿಂದ ಯಾವುದೇ ರೀತಿಯಾದಂತಹ ತೀರ್ಮಾನ ಕೈಗೊಳ್ಳದಿರುವುದರಿಂದ ಇವರಿಗೆ ಕಟ್ಟಡ ಕಟ್ಟಲು ಅನುಮತಿ ನೀಡಿರುವುದಿಲ್ಲ ಮತ್ತು ಕಚೇರಿಯಿಂದ ಬಂದಿರುವ ಪತ್ರಕ್ಕೂ ನಾವು ಇಂದಿನವರೆವಿಗೂ ಉತ್ತರ ನೀಡಿಲ್ಲ. ಆದರೂ ಮಾಲಾರಾಮ್ ಅವರು ಕಾನೂನು ಬಾಹಿರವಾಗಿ ಕಟ್ಟಡ ಕಟ್ಟಿ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟ ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆದ್ದರಿಂದ ಇವರು ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡವನ್ನು ತೆರವುಗೊಳಿಸಲು ಆದೇಶಿಸಬೇಕೆಂದು ಕೋರಿದ್ದಾರೆ. ಇದೇ ಸರ್ವೆ ನಂನಲ್ಲಿ ಶಿವಣ್ಣೇಗೌಡರು ಮೂರು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಿ ಸರ್ಕಾರಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಅಕ್ರಮವಾಗಿ ಪಂಚಾಯಿತಿಯಲ್ಲಿ ಗೌಪ್ಯವಾಗಿ ಬಿಲ್ ಕಲೆಕ್ಟರ್ ಮುಖಾಂತರ ಅಕ್ರಮ ಖಾತೆಯನ್ನು ಸಹ ಮಾಡಿಸಿಕೊಂಡಿರುವುದರಿಂದ ತನಿಖೆ ನಡೆಸಿ ಕಟ್ಟಡ ಕೆಡವಲು ಆದೇಶಿಸುವಂತೆ ಮನವಿ ಮಾಡಿದ್ದಾರೆ.
ಅಕ್ರಮ ಒತ್ತುವರಿ: ಮಾದಾಪುರ ಗ್ರಾಪಂ ಆಸ್ತಿಯಾದ 1.28 ಗುಂಟೆ ಜಾಗದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ತೆರವುಗೊಳಿಸುವಂತೆ ಗ್ರಾಪಂ ಸದಸ್ಯ ಎಂ. ಶಿವಾನಾಗಾರ್ಯ ಲೋಕಾಯುಕ್ತ ನ್ಯಾಯಾಧೀಶರಲ್ಲಿ ಮನವಿ ಮಾಡಿದ್ದಾರೆ.
ಮೈಸೂರು-ಮಾನಂದವಾಡಿ ರಸ್ತೆಯ ಬದಿಯಲ್ಲಿರುವ ಸರ್ವೆ ನಂ 57-2ರಲ್ಲಿ 1.28 ಗುಂಟೆ ಪಂಚಾಯಿತಿ ಜಾಗದಲ್ಲಿ ವೆಂಕಟಚಲಯ್ಯ ಮತ್ತು ಅಪ್ಪಾಜಪ್ಪ ಅವರು 10 ಗುಂಟೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ಸುಮಾರು 50 ಲಕ್ಷ ರು. ಬೆಲೆ ಬಾಳುವಂತಹ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಿ, ಗ್ರಾಪಂಗೆ ಆಗುತ್ತಿರುವ ಆರ್ಥಿಕ ನಷ್ಟವನ್ನು ಸರಿಪಡಿಸಿಕೊಡುವಂತೆ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

