ಮೈಸೂರು

ಕುಟುಂಬಕ್ಕೆ ಕೆಲ್ಲಹಳ್ಳಿ ಗ್ರಾಮಸ್ಥರ ಬಹಿಷ್ಕಾರ

Published On :

ಮೈಸೂರು: ತಾಲೂಕಿನ ಜಯಪುರ ಹೋಬಳಿಯ ಕೆಲ್ಲಹಳ್ಳಿ ಗ್ರಾಮದ ಮಹೇಶ್ ಮತ್ತು ಕುಟುಂಬಕ್ಕೆ ಗ್ರಾಮದ ಯಜಮಾನರಾದ ನಾಗರಾಜ್, ದ್ಯಾವಮರಿಗೌಡ ಹಾಗೂ ಮತ್ತಿತರರು ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗೆ ದೂರು ನೀಡಲಾಗಿದೆ.
ನನ್ನ ತಾಯಿ ದೇವಮ್ಮ, ಅಜ್ಜಿ ಸಾಕಮ್ಮ, ತಮ್ಮಂದಿರಾದ ಕೃಷ್ಣ ಮತ್ತು ಬಾಲರಾಜು ಗ್ರಾಮದಲ್ಲಿಯೇ ಹುಟ್ಟಿ ಬೆಳೆದಿದ್ದು, ಜೀವನೋಪಾಯಕ್ಕಾಗಿ ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದಾರೆ. ದೇವಮ್ಮ ಅವರು ಕಾನೂನು ಬದ್ಧ ಹಕ್ಕಿಗಾಗಿ ಆಕೆಯ ಅಣ್ಣನ ಮೇಲೆ ಸಿವಿಲ್ ನ್ಯಾಯಾಲಯದಲ್ಲಿ ಹಾಗೂ ನನ್ನ ಅಜ್ಜಿಯಾದ ಸಾಕಮ್ಮನವರು ಅವರ ತಮ್ಮ ಪರಮೇಶನ ಮೇಲೆ ಸಿವಿಲ್ ನ್ಯಾಯಾಲಯದಲ್ಲಿ ಅವರ ಕಾನೂನು ಬದ್ಧ ಹಕ್ಕಿಗಾಗಿ ದಾವೆ ಹೂಡಿದ್ದಾರೆ. ಗ್ರಾಮದ ಯಜಮಾನರು ನನ್ನ ಮತ್ತು ನನ್ನ ಕುಟುಂಬದರನ್ನು ಕರೆಸಿ, ಪಂಚಾಯಿತಿಯಲ್ಲಿ ನಾವು ಏನು ಹೇಳುತ್ತೇವೆ ಅದನ್ನು ನೀವು ಒಪ್ಪಿಕೊಂಡು, ನ್ಯಾಯಾಲಯದಲ್ಲಿ ಪ್ರಕರಣವನ್ನು ವಾಪಸ್ ಪಡೆಯಬೇಕೆಂದು, ಪಂಚಾಯತ್‌ನಲ್ಲಿ ತೀರ್ಮಾನ ತೆಗೆದುಕೊಂಡಿರುತ್ತೇವೆ ಎಂದು ಹೇಳಿದರು. ಆದರೆ ಪಂಚಾಯತ್‌ನಲ್ಲಿ ತೀರ್ಮಾನ ತೆಗೆದುಕೊಂಡಿರುವುದು ನ್ಯಾಯಸಮ್ಮತವಾಗಿಲ್ಲ. ನನಗೆ ಮತ್ತು ನನ್ನ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು 2012ರ ಅ.15ರಂದು ಪಂಚಾಯಿತಿಯಿಂದ ನಮ್ಮ ಕಟುಂಬಕ್ಕೆ ನ್ಯಾಯ ಸಿಗದಿದ್ದ ಕಾರಣ ನಮ್ಮ ಕುಟುಂಬ ಪಂಚಾಯತಿಯಿಂದ ಹೊರಬಂದು, ನ್ಯಾಯಾಲಯದ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದೆವು.
ಹೀಗಾಗಿ ಗ್ರಾಮದಲ್ಲಿ ನಮ್ಮನ್ನು ತಿರಸ್ಕರಿಸಿ, ದೇವಸ್ಥಾನದಲ್ಲಿ ಪೂಜೆ ಅವಕಾಶ ನೀಡದೆ, ಬಹಿಷ್ಕಾರ ಹಾಕಿದ್ದು, ಇದರ ಬಗ್ಗೆ ಪೊಲೀಸರಿಗೆ ಹಾಗೂ ತಹಸೀಲ್ದಾರ್‌ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಕೂಡಲೇ ನಮಗೆ ನ್ಯಾಯ ದೊರಕಿಸಿಕೊಡುವಂತೆ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.