ಕುಲಸಚಿವ ಪ್ರೊ.ಸಿ. ಬಸವರಾಜ ನೇಮಕ ಹಿಂದಕ್ಕೆ
ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಸಿ. ಬಸವರಾಜು ಅವರ ನೇಮಕವನ್ನು ರಾಜ್ಯ ಸರ್ಕಾರವು ಹಿಂಪಡೆದುಕೊಂಡಿದೆ. ಮೈಸೂರು ವಿವಿ ಕಾನೂನು ವಿಭಾಗ ಪ್ರಾಧ್ಯಾಪಕ ಹಾಗೂ ಡೀನ್ ಪ್ರೊ.ಸಿ. ಬಸವರಾಜು ಅವರನ್ನು ಕುಲಸಚಿವರಾಗಿ (ಆಡಳಿತ) ಸರ್ಕಾರ ನೇಮಿಸಿತ್ತು. ಮೈಸೂರು ವಿವಿ ಬರೆದಿರುವ ಪತ್ರದಲ್ಲಿ ಪ್ರೊ.ಸಿ. ಬಸವರಾಜು ಅವರು 2007ನೇ ವರ್ಷದ ನೇರ ನೇಮಕಾತಿಯಲ್ಲಿ ಪ್ರಾಧ್ಯಾಪಕರಾಗಿ ನೇಮಕವಾಗಿದ್ದಾರೆ. ಆದರೆ, 2007ನೇ ಸಾಲಿನಲ್ಲಿ ನಡೆದ ನೇರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎನ್ನಲಾಗಿತ್ತು. ಈ ಅಕ್ರಮಗಳ ಬಗ್ಗೆ ರಚಿತವಾದ ಏಕಸದಸ್ಯ ವಿಚಾರಣಾ ಆಯೋಗವು ವಿಚಾರಣೆ ನಡೆಸಿ, ಸಲ್ಲಿಸಿರುವ ವರದಿಯಲ್ಲಿ ನೇಮಕಾತಿಯಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಮತ್ತು ಅನರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿರುವುದು ರುಜುವಾತಾಗಿದೆ. ಈ ಹಿನ್ನೆಲೆಯಲ್ಲಿ ನೇಮಕಾತಿ ಪ್ರಾಧಿಕಾರವು ಡಾ.ಸಿ.ಬಸವರಾಜು ಅವರ ಕಾಯಂಪೂರ್ವ ಪರೀಕ್ಷಾರ್ಥ ಅವಧಿಯನ್ನು ಇದುವರೆಗೂ ಘೋಷಿಸಿಲ್ಲ. ಹೀಗಾಗಿ ಡಾ.ಬಸವರಾಜು ಅವರನ್ನು ಕುಲಸಚಿವರನ್ನಾಗಿ ನೇಮಿಸಲು ಅರ್ಹರಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರವು ತನ್ನ ಆದೇಶ ಹಿಂಪಡೆದಿದೆ. ಪ್ರೊ.ಬಸವರಾಜು ಅವರಿಂದ ತೆರವಾದ ಕುಲಸಚಿವ (ಆಡಳಿತ) ಸ್ಥಾನಕ್ಕೆ ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವರನ್ನು ಪ್ರಭಾರ ವಹಿಸಿಕೊಳ್ಳಲು ರಾಜ್ಯ ಸರ್ಕಾರವು ಸೂಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

