ಮೈಸೂರು

ಕ್ಷುಲ್ಲಕ ಕಾರಣಕ್ಕೆ ಹಲ್ಲೆ; ವ್ಯಕ್ತಿ ಸಾವು

Published On :

ಪಾವಗಡ: ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳವಾರ ತಾಲೂಕಿನ ಉದ್ಧಘಟ್ಟೆ ಗ್ರಾಮದಲ್ಲಿ ನಡೆದಿದೆ. ವಿ.ಎಚ್. ಪಾಳ್ಯದ ಹನುಮಂತರಾಯಪ್ಪ (45) ಮೃತಪಟ್ಟವರು. ಹನುಮಂತರಾಯಪ್ಪ ಯುಗಾದಿ ಹಬ್ಬದ ಪ್ರಯುಕ್ತ ಕುಟುಂಬ ಸಮೇತ ಭಾನುವಾರ ಉದ್ದಘಟ್ಟೆ ಗ್ರಾಮಕ್ಕೆ ಆಗಮಿಸಿದ್ದು, ಮಾವ ಗಂಗಪ್ಪರ ಮನೆಯಲ್ಲಿ ಹಬ್ಬ ಪೊರೈಸಿದ ನಂತರ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ತನ್ನ ಮಗಳು ಓದುತ್ತಿಲ್ಲವೆಂದು ತರಾಟೆಗೆ ತೆಗೆದುಕೊಂಡರು ಎನ್ನಲಾಗಿದೆ. ನಂತರ ರಸ್ತೆಯಲ್ಲಿ ಮಗಳನ್ನು ಬೈದುಕೊಂಡು ಹೋಗುತ್ತಿರುವಾಗ ಗ್ರಾಮದ ಅಕ್ಕಪಕ್ಕದಲ್ಲಿ ವಾಸವಾಗಿದ್ದ ನಾಯಕ ಸಮುದಾಯದ ಕೆಲವರು ತಮ್ಮನ್ನೇ ಬಯ್ಯುತ್ತಿರುವುದಾಗಿ ಭಾವಿಸಿ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ತೀವ್ರ ಥಳಿತದಿಂದ ಆಸ್ವಸ್ಥನಾದ ಹನುಮಂತರಾಯಪ್ಪನನ್ನು ಗ್ರಾಮಸ್ಥರು ತುರ್ತು ವಾಹನಕ್ಕೆ ಕರೆ ಮಾಡಿ ಪಾವಗಡ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಮಂಗಳವಾರ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ. ಮೃತರ ಪತ್ನಿ ಗಂಗಮ್ಮ ಎಂಬುವರು ಘಟನೆಗೆ ಕಾರಣರಾದ ಉದ್ದಘಟ್ಟೆ ಗ್ರಾಮದ ವಿಜಯಕುಮಾರ್, ರಾಮಂಜಿನಪ್ಪ, ರಾಜು, ಲಕ್ಷ್ಮಮ್ಮ, ಈರಮ್ಮ, ಕರಿಯಮ್ಮನಪಾಳ್ಯ ಮಂಜುಳ, ಈರಪ್ಪ, ಲೋಕೇಶ್ ಸೇರಿದಂತೆ 9ಮಂದಿ ಆರೋಪಿಗಳ ವಿರುದ್ಧ ಅರಸೀಕೆರೆ ಠಾಣೆಗೆ ದೂರು ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.