ಸಭೆ ನಾಳೆ
ಪಿರಿಯಾಪಟ್ಟಣ: ಜೆಡಿಎಸ್ ವತಿಯಿಂದ ಏ.4ರ ಬೆಳಗ್ಗೆ 12.30ಕ್ಕೆ ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆ ಕರೆಯಲಾಗಿದೆ ಎಂದು ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಮೋಹನ್ರಾಜ್ಕುಮಾರ್ ಹೇಳಿದ್ದಾರೆ. ಸಭೆಯನ್ನು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಉದ್ಘಾಟಿಸುವರು. ಮುಖಂಡರಾದ ಜಿ.ಟಿ. ದೇವೇಗೌಡ, ಸಂದೇಶ್ ನಾಗರಾಜ್, ಸಾ.ರಾ. ಮಹೇಶ್, ನರಸಿಂಹಸ್ವಾಮಿ ಆಗಮಿಸುವರು. ತಾಲೂಕು ಅಧ್ಯಕ್ಷ ಕೆ. ಮಹದೇವ್ ಅಧ್ಯಕ್ಷತೆ ವಹಿಸುವರು.
ಸದಸ್ಯತ್ವ ನೋಂದಣಿ
ಪಿರಿಯಾಪಟ್ಟಣ: ಕನ್ನಡ ಸಾಹಿತ್ಯ ಪರಿಷತ್ ಸದಸ್ಯತ್ವ ಪಡೆಯುವ ಮೂಲಕ ಸಾಹಿತ್ಯ ಪರಿಷತ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮೈಮುಲ್ ಉಪ ವ್ಯವಸ್ಥಾಪಕ ಡಾ.ಸಣ್ಣತಮ್ಮೇಗೌಡ ಹೇಳಿದರು. ಪಟ್ಟಣದ ಮೈಮುಲ್ ಕಚೇರಿಯಲ್ಲಿ ಕಸಾಪ ಸದಸ್ಯತ್ವ ನೋಂದಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೈಮುಲ್ ಹಾಲು ಉತ್ಪಾದನೆಗೆ ಮಾತ್ರ ಸೀಮಿತವಾಗಿರದೆ ನಾಡು, ನುಡಿಯ ಬಗ್ಗೆ ಸಾಕಷ್ಟು ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿದೆ ಎಂದು ತಿಳಿಸಿದರು. ಪಪಂ ಮುಖ್ಯಾಧಿಕಾರಿ ಪಂಕಜರೆಡ್ಡಿ, ಕಸಾಪ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಮಾತನಾಡಿದರು. ಮೈಮುಲ್ ವಿಸ್ತರಣಾಧಿಕಾರಿ ಕಾಳೇಗೌಡ, ರಂಗಸ್ವಾಮಿ, ಶಿಕ್ಷಕ ಪರಮಶಿವಯ್ಯ, ಕಗ್ಗುಂಡಿ ರಾಜು ಇದ್ದರು.
ಜೂಜುಕೋರರ ಸೆರೆ
ರಾವಂದೂರು: ಗ್ರಾಮದ ರಾವಂದೂರು ಸ್ಪೋರ್ಟ್ಸ್ ಕ್ಲಬ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಸ್ಪೋರ್ಟ್ಸ್ ಕ್ಲಬ್ ಮೇಲೆ ಬುಧವಾರ ಬೆಳಗ್ಗೆ 11ಕ್ಕೆ ಎಸ್ಐ ಕೆ.ಎಂ. ರಫಿಕ್ ನೇತೃತ್ವದ ತಂಡ ದಾಳಿ ನಡೆಸಿ, ಕಾನೂನು ಬಾಹಿರವಾಗಿ ಜೂಜಾಟದಲ್ಲಿ ತೊಡಗಿದ್ದ 6 ಮಂದಿಯನ್ನು ಬಂಧಿಸಿದ್ದು, ಇವರಿಂದ ಪಣಕ್ಕೆ ಇಡಲಾಗಿದ್ದ 8 ಸಾವಿರಗಳನ್ನು ಮತ್ತು ಜೂಜಾಟಕ್ಕೆ ಬಳಸಿದ್ದ ಪೀಠೋಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಕಿಗಾಹುತಿ
ಪಿರಿಯಾಪಟ್ಟಣ:ಕಿ ತೋಟಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರು. ಮೌಲ್ಯದ ತೆಂಗಿನ ಫಸಲು ಹಾಗೂ ಮರ ಸುಟ್ಟು ಹೋಗಿರುವ ಘಟನೆ ತಾಲೂಕಿನ ಕಾನೂರು ಗ್ರಾಮದಲ್ಲಿ ಜರುಗಿದೆ. ಕೆ.ಪ್ರೇಮಕುಮಾರ್ ಎಂಬವರಿಗೆ ಸೇರಿದ ತೆಂಗಿನ ತೋಟ ಬೆಂಕಿಗಾಹುತಿಯಾಗಿದ್ದು, ದುಷ್ಕರ್ಮಿಗಳು ಬೆಂಕಿ ಹಾಕಿರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಯುವಕನ ಕೊಲೆ
ನಂಜನಗೂಡು: ಯುಗಾದಿ ಹಬ್ಬದ ಸಮಯದಲ್ಲಿ ಜೂಜಾಡುವಾಗ ಉಂಟಾದ ಭಿನ್ನಾಭಿಪ್ರಾಯ ಒಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಆಲಂಬೂರಿನಲ್ಲಿ ಜರುಗಿದೆ. ಗ್ರಾಮದ ನಿವಾಸಿ ಪುಟ್ಟಸ್ವಾಮಿಶೆಟ್ಟಿ ಎಂಬವರ ಪುತ್ರ ಸ್ವಾಮಿ (25) ಕೊಲೆಯಾದ ವ್ಯಕ್ತಿ. ಆರೋಪಿಗಳಾದ ನಾಗಣ್ಣ, ಜಗದೀಶ, ಪ್ರಸಾದ್, ಶ್ರೀನಿವಾಸ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಸ್ವಾಮಿ ಮಂಗಳವಾರ ಸಂಜೆ ಗ್ರಾಮದಲ್ಲಿ ಸ್ನೇಹಿತರೊಡನೆ ಜೂಜಾಟದಲ್ಲಿ ನಿರತನಾಗಿದ್ದಾಗ ನಾಗಣ್ಣ, ಜಗದೀಶ, ಪ್ರಸಾದ್, ಶ್ರೀನಿವಾಸ ಎಂಬವರೊಡನೆ ಜಗಳವಾಯಿತು. ನಂತರ ಸ್ವಾಮಿಯನ್ನು ಹಿಂಬಾಲಿಸಿಕೊಂಡು ಬಂದ ಆರೋಪಿಗಳು, ಗ್ರಾಮದ ಹೊರ ವಲಯದಲ್ಲಿ ಆಯುಧದಿಂದ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ಶವವನ್ನು ಕಲ್ಲುಕಟ್ಟಿ ಹುಲ್ಲಹಳ್ಳಿ ನಾಲೆಗೆ ಮುಳುಗಿಸಿ ಪರಾರಿಯಾಗಿದ್ದಾರೆ ಎಂದು ಮೃತನ ತಂದೆ ಪುಟ್ಟಸ್ವಾಮಿಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ.ರಾತ್ರಿ ಮನೆಗೆ ಬಾರದಿರುವುದನ್ನು ಕಂಡು ಆತಂಕಗೊಂಡ ಸ್ವಾಮಿಯ ಪೋಷಕರು, ಪೊಲೀಸರಿಗೆ ದೂರು ನೀಡಲು ಮುಂದಾದರು. ಬುಧವಾರ ಗ್ರಾಮಸ್ಥರು ಹುಲ್ಲಹಳ್ಳಿ ನಾಲೆಯಲ್ಲಿ ಅಪರಿಚಿತ ಶವವೊಂದು ತೇಲುತ್ತಿರುವ ಕುರಿತು ನೀಡಿದ ಮಾಹಿತಿಯನ್ನಾಧರಿಸಿ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ, ಸ್ವಾಮಿಯನ್ನು ಕೊಲೆ ಮಾಡಿ ಬಿಸಾಕಿರುವ ಮಾಹಿತಿ ತಿಳಿದುಬಂದಿದೆ. ನಂತರ ಪ್ರಕರಣ ದಾಖಲಿಸಿಕೊಂಡಿರುವ ಬದನವಾಳು ಠಾಣೆಯ ಪೊಲೀಸರು ಶವವನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.
ಬಣ್ಣಾರಿ ಅಮ್ಮನ್ ಕಚೇರಿ ಆರಂಭಿಸಲು ಆಗ್ರಹ
ಅಂತರಸಂತೆ: ಅಂತರಸಂತೆ ಗ್ರಾಮದಲ್ಲಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಕಚೇರಿಯನ್ನು ತೆರೆಯಬೇಕೆಂದು ಕಬ್ಬು ಬೆಳೆಗಾರರು ಒತ್ತಾಯಿಸಿದ್ದಾರೆ. ಎಚ್.ಡಿ.ಕೋಟೆ ತಾಲೂಕು ಅಂತರಸಂತೆ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಹೋಬಳಿಯ ಬಹುತೇಕ ಕಡೆ ಕಬ್ಬು ಬೆಳೆಗಾರರಿದ್ದು, ಅಂತರಸಂತೆ ಗ್ರಾಮದಲ್ಲಿ ಬಣ್ಣಾರಿ ಅಮ್ಮನ್ ಕಾರ್ಖಾನೆಯ ಕಚೇರಿಯನ್ನು ತೆರೆಯಲಾಗಿತ್ತು. ಹೋಬಳಿಯ ಎಲ್ಲ ರೈತ ವರ್ಗಕ್ಕೂ ಅನುಕೂಲವಾಗಿತ್ತು. ಈಗ ಏಕಾಏಕಿ ಕಚೇರಿಯನ್ನು ಅಂತರಸಂತೆಯಿಂದ ಮೂರು ಕಿ.ಮೀ. ಇರುವ ಹೊಸಮಾಳ ಗ್ರಾಮದಲ್ಲಿ ಕಚೇರಿ ಪ್ರಾರಂಭಿಸಿರುವುದರಿಂದ ರೈತರಿಗೆ ಅನಾನುಕೂಲವಾಗಿದೆ. ಆದ್ದರಿಂದ ಕಚೇರಿಯನ್ನು ಪುನಃ ಅಂತರಸಂತೆ ಗ್ರಾಮದಲ್ಲೆ ಪ್ರಾರಂಭಿಸಬೇಕೆಂದು ಅಂತರಸಂತೆ, ನೂರಲಕುಪ್ಪೆ, ಮಚ್ಚರೆ, ಜಿಯಾರ, ಆನಗಟ್ಟಿ, ರಾಮೇನಹಳ್ಳಿ ಗ್ರಾಮದ ರೈತರು ಒತ್ತಾಯಿಸಿದ್ದಾರೆ. ನಾವು ಯಾವುದೇ ಮಾಹಿತಿ ಪಡೆಯಬೇಕಾದರೂ ಪಕ್ಕದಲ್ಲೆ ಬ್ಯಾಂಕ್ ಇರುವುದರಿಂದ ಅನುಕೂಲವಾಗಿತ್ತು. ಈಗ ತೊಂದರೆಯಾಗಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

