ವೈಚಾರಿಕ ಮನೋಭಾವ ವೃದ್ಧಿಸುವುದೇ ಶಿಕ್ಷಣ
ಮೈಸೂರು: ವಿದ್ಯಾರ್ಥಿಗಳಲ್ಲಿರುವ ಪೂರ್ವಗ್ರಹ ಪೀಡನೆಗಳನ್ನು ಹೋಗಲಾಡಿಸಿ ವೈಚಾರಿಕ ಮನೋಭಾವ ಬೆಳೆಸುವುದೇ ಶಿಕ್ಷಣದ ಮೂಲ ಉದ್ದೇಶ ಎಂದು ವಿಶ್ರಾಂತ ಪ್ರಾಂಶುಪಾಲೆ ಪ್ರೊ.ವೈ.ಎಸ್. ಗೌರಮ್ಮ ಹೇಳಿದರು.
ಸರಸ್ವತಿಪುರಂನಲ್ಲಿರುವ ರಾಧಾಕೃಷ್ಣನ್ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರ ವ್ಯಕ್ತಿತ್ವ ಹಾಗೂ ಬರೆಹಗಳು ಕುರಿತು ಮಾತನಾಡಿದರು. ಭಾರತೀಯ ಸಂಸ್ಕೃತಿಯಲ್ಲಿ ವಿವಿಧತೆ ಇದ್ದರೂ ಸಹ ಏಕತೆಯನ್ನು ಪ್ರತಿಫಲನಗೊಳ್ಳುತ್ತದೆ. ಅದರಂತೆ ಹಿಂದೂ ಧರ್ಮದ ಪ್ರಕಾರ ಜೀವನ ದೃಷ್ಟಿಯನ್ನು ಅವಗಾಹನೆಗೆ ತಂದುಕೊಂಡು ಪರಸ್ಪರ ಸಹಬಾಳ್ವೆಯಿಂದ ಜೀವನ ನಡೆಸಿದಾಗ ಸಾಕ್ಷಾತ್ಕಾರಗೊಳ್ಳುತ್ತದೆ. ರಾಧಾಕೃಷ್ಣನ್ ಅವರು ಕೂಡ ಈ ರೀತಿಯ ಜೀವನ ಕಂಡುಕೊಂಡವರಾಗಿದ್ದರು. ಜ್ಞಾನದಾಹಿಗಳಾಗಿದ್ದ ಅವರು, ಬಡತನವನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತತ್ವಜ್ಞಾನದಲ್ಲಿ ಮೇರುಶಿಖರವನ್ನೇರಿದರು ಎಂದು ತಿಳಿಸಿದರು.
ನಿಜಗುಣ ಸತ್ಸಂಗ ಬಳಗದ ಅಧ್ಯಕ್ಷ ಸದಾಶಿವ ಗುರುಗಳು, ವಿವೇಕಪ್ರಭ ಪತ್ರಿಕೆಯ ಸಂಪಾದಕ ವೀರೇಶಾನಂದಜಿ, ವಿವಿಯ ಗ್ರಂಥಪಾಲಕ ಡಾ.ಸಿ.ಪಿ. ರಾಮಶೇಷ್, ವಿವಿಯ ಗಣಕ ವಿಜ್ಞಾನ ವಿಭಾಗದ ಪ್ರೊ.ಜಿ. ಹೇಮಂತಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

