'ಬಿಜೆಪಿ- ಜೆಡಿಎಸ್ಗೆ ಪಾಠ ಕಲಿಸಿ'
ಮೈಸೂರು: ಜೆಡಿಎಸ್ನಂತಹ ಗೋಸುಂಬೆಗಳು ಮತ್ತು ಬಿಜೆಪಿಯಂತಹ ಆಷಾಢಭೂತಿಗಳನ್ನು ಮತದಾರರು ನಂಬಬೇಡಿ, ಕಾಂಗ್ರೆಸ್ ಅನ್ನು ಬೆಂಬಲಿಸುವ ಮೂಲಕ ಅಭ್ಯರ್ಥಿ ಎಚ್.ವಿಶ್ವನಾಥ್ ಅವರನ್ನು ಆಯ್ಕೆ ಮಾಡಬೇಕೆಂದು ಮಾಜಿ ಶಾಸಕ ಎಂ. ಸತ್ಯನಾರಾಯಣ ಮನವಿ ನೀಡಿದರು.
ಚಾಮುಂಡೇಶ್ವರಿ ಕ್ಷೇತ್ರದ ಕೆ.ಆರ್. ಮಿಲ್ ಕಾಲೋನಿ, ಕಾಮನಕೆರೆಹುಂಡಿ, ಸಿದ್ದಲಿಂಗಪುರ, ಕಳಸ್ತವಾಡಿ, ನಾಗನಹಳ್ಳಿ, ಶಾದನಹಳ್ಳಿ, ಏಕಲವ್ಯನಗರ, ಬೆಲವತ್ತ ಗ್ರಾಮಗಳಲ್ಲಿ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಮತಯಾಚಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದ 10 ತಿಂಗಳಲ್ಲಿ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು ನಡೆದಿದ್ದು, ಈ ಬಾರಿ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿಗೆ ಮತದಾರರು ತಕ್ಕಪಾಠ ಕಲಿಸುವರು ಎಂದು ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಜಿಪಂ ಅಧ್ಯಕ್ಷ ಎಂ.ಮಹದೇವ್, ಜಿಪಂ ಸದಸ್ಯೆ ಶಕುಂತಲ ವೆಂಕಟಯ್ಯ, ತಾಪಂ ಸದಸ್ಯ ಸೋಮಣ್ಣ, ಲೇಖಾ ವೆಂಕಟೇಶ್, ಜವರೇಗೌಡ ಇದ್ದರು.
ಎನ್ಐಇ ಕ್ರೀಡಾ ಚಟುವಟಿಕೆ ಉದ್ಘಾಟನೆ
ಮೈಸೂರು: ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಸಂಜೆ ಕಾಲೇಜಿನ ವಾರ್ಷಿಕ ಕ್ರೀಡಾ ಚಟುವಟಿಕೆಯನ್ನು ದೈಹಿಕ ಶಿಕ್ಷಣ ನಿರ್ದೇಶಕ ಶಂಕರ್ ನಾರಾಯಣ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಕ್ರೀಡೆಯಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡು ಆರೋಗ್ಯದ ಗುಣಮಟ್ಟ ಹೆಚ್ಚಿಸಿ, ಮಾನಸಿಕವಾಗಿ ಬಲಾಢ್ಯರಾಗಬೇಕು. ಈ ನಿಟ್ಟಿನಲ್ಲಿ ಎನ್ಐಇ ಸಂಜೆ ಕಾಲೇಜಿನ ಪ್ರಯತ್ನ ಶ್ಲಾಘನೀಯ ಎಂದರು.
ವಿವಿಧ ಕ್ರೀಡಾ ವಿಜೇತರಿಗೆ ಡಾ.ಎನ್.ಸುರೇಶ್ ಮತ್ತು ಡಾ.ಎಚ್.ಎಸ್. ಪ್ರಸನ್ನ ರೋಲಿಂಗ್ ಟ್ರೋಫಿ ನೀಡುವುದಾಗಿ ಘೋಷಿಸಿದರು. ಡಿ.ಆರ್. ಉಮೇಶ್, ಅರುಣ್, ಬಸವರಾಜು ಇದ್ದರು.
'ವಿಶ್ವಕರ್ಮರು ಮೋದಿ ಬೆಂಬಲಿಸಿ'
ಮೈಸೂರು: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ವಿಶ್ವಕರ್ಮರ ಆಶಾಕಿರಣ ನೇತಾರರಾಗಿದ್ದು, ಅವರನ್ನು ಬೆಂಬಲಿಸುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ಸುಮಾರು 35 ಲಕ್ಷಕ್ಕೂ ಹೆಚ್ಚು ವಿಶ್ವಕರ್ಮರಿದ್ದಾರೆ. ಆಳುವ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಚುನಾವಣೆ ವೇಳೆ ಮಾತ್ರ ಬಳಸಿಕೊಳ್ಳುವ ಕೆಲಸ ನಡೆಸುತ್ತಿದ್ದಾರೆ ಎಂದು ಬಿಜೆಪಿಯ 5ನೇ ವಾರ್ಡ್ ಅಧ್ಯಕ್ಷ ಎಸ್.ನಾಗರಾಜ್ ಆರೋಪಿಸಿದ್ದಾರೆ. ನರೇಂದ್ರ ಮೋದಿ ಅವರು ಗುಜರಾತ್ನಲ್ಲಿರುವ ಇಡೀ ವಿಶ್ವಕರ್ಮ ಸಮುದಾಯಗಳ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸುವ ಸಲುವಾಗಿ ಪಂಚಕಸುಬುಗಳನ್ನು ಬಲ್ಲ ವಿಶ್ವಕರ್ಮರ ಕೈಗೆ ಕೆಲಸ ಕೊಟ್ಟವರು. ಅಲ್ಲದೆ ವಲಸೆ ಬರುವುದನ್ನು ತಡೆಗಟ್ಟಲು ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಿದ ನೇತಾರ. ಅವರನ್ನು ಈ ದೇಶದ ಪ್ರಧಾನಿ ಮಾಡಲು ಸಮುದಾಯ ಬೆಂಬಲಿಸಬೇಕು ಎಂದು ಮುಖಂಡರಾದ ಟಿ.ರಾಜ್ಗೋಪಾಲ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

