ಅಭಿವೃದ್ಧಿಯಲ್ಲಿ ರಾಜಕಾರಣ, ಜಾತಿ ದೂರವಿಡಿ
ಟಿ. ನರಸೀಪುರ: ಸರ್ಕಾರದಿಂದ ಕೈಗೊಳ್ಳುವ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜಕಾರಣ ಹಾಗೂ ಜಾತಿಯತೆಯನ್ನು ದೂರವಿಡಬೇಕು ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.
ತಾಲೂಕಿನ ಕೆಂಪೇಗೌಡನಕೊಪ್ಪಲು ಗ್ರಾಮದಲ್ಲಿ ಕಾಂಗ್ರೆಸ್ನ ಲೋಕಸಭಾ ಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡ ಆಲದ ಮರದಂತಿರುವ ಕಾಂಗ್ರೆಸ್ನಲ್ಲಿ ಅಹಿಂದ ವರ್ಗಗಳು ಸೇರಿದಂತೆ ಎಲ್ಲಾ ವರ್ಗ ಸಮುದಾಯದ ಜನರಿಗೆ ಸಮಾನವಾದ ಅವಕಾಶವಿದೆ. ಜಾತಿ ರಾಜಕಾರಣಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ ಎಂದರು.
ಮೂರು ದಶಕಗಳ ರಾಜಕಾರಣದಲ್ಲಿ ತಾವೆಂದೂ ಜಾತಿ, ಗುಂಪು ರಾಜಕಾರಣ ಮಾಡಿ ಅಭಿವೃದ್ಧಿ ನಿರ್ಲಕ್ಷಿಸಿಲ್ಲ. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಜೆಟ್ನಲ್ಲಿ ಕೃಷಿಗೆ 11 ಸಾವಿರ ಕೋಟಿಗಳನ್ನು ಪ್ರಕಟಿಸಿದೆ. ರೈತರು ಬೆಳೆದ ಬೆಳೆಗಳಿಗೆ ನಿಗದಿತ ಬೆಂಬಲ ಬೆಲೆ ಕೊಟ್ಟು ಖರೀದಿಸಲಾಗಿದೆ. ಬೆಲೆ ನಿಗದಿಗೆ ಆಯೋಗ ರಚನೆ ಮಾಡಲಾಗಿದೆ. ಇದನ್ನು ಯಾವೊಂದು ವರ್ಗವನ್ನು ಸೀಮಿತಗೊಳಿಸಿ ರೂಪಿಸಿದ ಯೋಜನೆಯಲ್ಲ. ಎಲ್ಲಾ ವರ್ಗದ ರೈತರ ಅಭಿವೃದ್ಧಿಗೆ ಪೂರಕವಾಗಿವೆ ಎಂದು ತಿಳಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಮಾತನಾಡಿ, ಕಳೆದ ಐದು ವರ್ಷಗಳ ಅವಧಿಯಲ್ಲಿ ಸಂಸದರಾಗಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾರಿಗೆ ಮತ್ತು ಸಂಪರ್ಕ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಕೇಂದ್ರದಿಂದ ಕೋಟ್ಯಂತರ ರುಪಾಯಿಗಳ ಅನುದಾನ ತಂದಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲು ಅವಕಾಶ ನೀಡುವಂತೆ ಮನವಿ ಮಾಡಿದರು.
ಇದೇ ವೇಳೆ ಬನ್ನೂರು ವನಿತಾ ಮಹಿಳಾ ಸಮಾಜದ ಅಧ್ಯಕ್ಷೆ ಜೆ.ವರಲಕ್ಷ್ಮೀ ರಮೇಶಗೌಡ, ಸುಮನ್, ಮಂಜುಳಾ, ಪದ್ಮ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಯಾಚೇನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್. ಶಂಕರೇಗೌಡ, ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ತಾಪಂ ಅಧ್ಯಕ್ಷ ಚಿದರವಳ್ಳಿ ನಟರಾಜು, ಬನ್ನೂರು ಪುರಸಭೆ ಅಧ್ಯಕ್ಷ ಅಜಿಜುಲ್ಲಾ, ಉಪಾಧ್ಯಕ್ಷ ರವೀಂದ್ರಕುಮಾರ್, ಮಾಜಿ ಶಾಸಕರಾದ ಎಸ್. ಕೃಷ್ಣಪ್ಪ, ಡಾ.ಎನ್.ಎಲ್. ಭಾರತೀಶಂಕರ್, ಮುಖಂಡರಾದ ಡಿ.ಪದ್ಮನಾಭ, ಎಂ.ಸುಧೀರ್, ಡಾ.ಕೆ.ಮಹದೇವ, ಕೊಡಗಹಳ್ಳಿ ರಾಮಕೃಷ್ಣ, ಎಂ.ಮಲ್ಲಿಕಾರ್ಜುನಸ್ವಾಮಿ, ಕೆ.ವಜ್ರೇಗೌಡ, ಎಂ.ರಾಜು, ಹೊನ್ನನಾಯ್ಕ, ಟಿ.ಎಚ್. ಮಂಜುನಾಥ್, ಲಕ್ಷ್ಮೀನಾರಾಯಣ, ಧನಂಜಯಕುಮಾರ್, ಕೇತುಪುರ ಪ್ರಭಾಕರ್, ಬಿ.ಎಂ. ಸೋಮಶೇಖರ್, ಬಿ.ಎಸ್. ರಾಮಲಿಂಗೇಗೌಡ, ರಮೇಶ್, ಮುನಾವರ ಪಾಷ, ಬಿ.ಕೆ. ಸುಮಿತ್ರಾ, ಸ್ವಾಮಿಗೌಡ, ಹನುಮನಾಳು ಸಿದ್ದೇಗೌಡ, ಹೊಸಹಳ್ಳಿ ಕೃಷ್ಣ, ಪಟೇಲ್ ನಟರಾಜು, ಮರಿಗೌಡ, ಚನ್ನಕೇಶವ, ಅನೂಪ್ಗೌಡ, ಕೆಬ್ಬೆ ನಾಗಣ್ಣ, ಇಂದ್ರೇಶ್, ವೈ.ಕೆ. ರಾಜಗೋಪಾಲ್, ವೈ.ಕೆ. ಬೋರೇಗೌಡ, ಕ್ಯಾತೇಗೌಡ, ಚಂದ್ರು, ಸತೀಶ್ ನಾಯಕ, ಸತ್ಯಬಾಬುಗೌಡ, ಆರ್. ಶಿವು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

