ದೇಶದ ಅಭಿವೃದ್ಧಿಗೆ ಕೈ ಬೆಂಬಲಿಸಿ
ಸುತ್ತೂರು: ದೇಶದ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕು ಕಾರ್ಯ, ಕಾರಾಪುರ ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ಮತಯಾಚಿಸಿ ಮಾತನಾಡಿದ ಅವರು, ದೇಶದ ಎಲ್ಲಾ ವರ್ಗಗಳನ್ನು ಸಮಾನತೆಯಿಂದ ನೋಡುವ ಗುಣ ಕಾಂಗ್ರೆಸ್ನಲ್ಲಿದೆ ಎಂದರು. ಬ್ಲಾಕ್ ಅಧ್ಯಕ್ಷ ರಂಗಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಧರ್ಮೇಂದ್ರ, ಸುರೇಶ್ಬಾಬು, ಕುಮಾರ್, ಸಿದ್ದಯ್ಯ, ಸ್ವಾಮಿ, ಮರಿಸ್ವಾಮಿನಾಯಕ, ವೀರಶೈವ ಮುಖಂಡರಾದ ನಾಗರಾಜಪ್ಪ, ನರಸಿಂಹಮೂರ್ತಿ, ಮಹದೇವಪ್ಪ, ಮಲ್ಲಪ್ಪ, ಶೇಖರ್, ನಾಗರಾಜು, ಸಿದ್ದರಾಜು, ರಾಜೇಂದ್ರ ಇದ್ದರು.
ನಂತರ ವರುಣ ಕ್ಷೇತ್ರದ ಆಲಂಬೂರು, ಮಂಟಿ, ಸರಗೂರು, ಕಬ್ಬಳಗೆರೆಹುಂಡಿ, ಹನಿಯಂಬಳ್ಳಿಗೆ ತೆರಳಿ ಪ್ರಚಾರ ನಡೆಸಿದರು. ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಮಾಲೇಗೌಡ, ನಿಂಗಪ್ಪ, ಚಿನ್ನಸ್ವಾಮಿ, ಮಾರೇಗೌಡ, ಶಿವಬೀರಪ್ಪ, ಕೇಶವ್ ಇದ್ದರು. ಮೆಲ್ಲಹಳ್ಳಿ ಜಿಪಂ ಸದಸ್ಯ ಎಂ.ಬಿ. ಸಿದ್ದೇಗೌಡರು ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ್ ಪರ ವರುಣ ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು.
ಕಮಲ,ಕೈ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಮಹದೇವ್
ಪಿರಿಯಾಪಟ್ಟಣ: ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರ ಅಪಪ್ರಚಾರಕ್ಕೆ ಸಾರ್ವಜನಿಕರು ಕಿವಿಗೊಡದಂತೆ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಮಹದೇವ್ ಮನವಿ ಮಾಡಿದರು. ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಪಕ್ಷದ ಅಭ್ಯರ್ಥಿ ಚಂದ್ರಶೇಖರಯ್ಯ ಪರ ಮತಯಾಚಿಸಿ ಮಾತನಾಡಿದ ಅವರು, ಪ್ರತಿಪಕ್ಷಗಳ ಸುಳ್ಳು ವದಂತಿಗಳಿಗೆ ಯಾರೂ ಕಿವಿಗೊಡುವ ಅಗತ್ಯವಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಸೋಲುವುದು ಖಚಿತ. ಇನ್ನು ಬಿಜೆಪಿ ಅಭ್ಯರ್ಥಿ ಸಕಲೇಶಪುರದವರಾಗಿದ್ದು, ಅವರಿಗೆ ಮತ ಹಾಕಿದಲ್ಲಿ ಅವರನ್ನು ಹುಡುಕಿಕೊಂಡು ಸಕಲೇಶಪುರಕ್ಕೆ ಹೋಗಬೇಕಾಗುತ್ತದೆ. ಸಂಸದ ಎಚ್.ವಿಶ್ವನಾಥ್ ಅವರು ಸ್ಥಳೀಯರಾಗಿದ್ದುಕೊಂಡೇ ಏನೂ ಕೆಲಸ ಮಾಡಲಿಲ್ಲ. ಇನ್ನು ಸಕಲೇಶಪುರದ ಹೊರಗಿನ ವ್ಯಕ್ತಿ ಏನು ಕೆಲಸ ಮಾಡಲು ಸಾಧ್ಯ ಎಂದರು. ಅಭ್ಯರ್ಥಿ ಚಂದ್ರಶೇಖರಯ್ಯ ಮಾತನಾಡಿದರು. ತಾಪಂ ಉಪಾಧ್ಯಕ್ಷ ಪ್ರಕಾಶ್, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಅತ್ತರ್ಮತಿನ್, ಪಪಂ ಸದಸ್ಯರಾದ ಮಂಜುನಾಥ್ಸಿಂಗ್, ವೇಣುಗೋಪಾಲ್, ಮುಖಂಡ ಪಿ.ಎಂ. ಪ್ರಸನ್ನ, ರಹಮತ್ಜಾನ್ಬಾಬು, ಮೋಹನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

