ಮೈಸೂರು

ಏರುತಿದೆ ಪಕ್ಷಗಳ ಪ್ರಚಾರ ಕಾವು

Published On :

ಮೈಸೂರು: ಲೋಕಸಭಾ ಚುನಾವಣೆ ಮತದಾನಕ್ಕೆ ಇನ್ನು ಕೇವಲ ಆರು ದಿನಗಳು ಮಾತ್ರ ಬಾಕಿ ಇದ್ದು, ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಪ್ರಚಾರದ ಕಾವು ಏರತೊಡಗಿದೆ.
ಮೈಸೂರು- ಕೊಡಗು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಪರವಾಗಿ ಶಾಸಕ ಜಿ.ಟಿ. ದೇವೇಗೌಡರು ನಗರ ಕೆ.ಆರ್. ಮಿಲ್ ಕಾಲೋನಿಯಲ್ಲಿ ಪ್ರಚಾರ ನಡೆಸಿದರು. ಈ ಬಾರಿ ಕೇಂದ್ರದಲ್ಲಿ ತೃತೀಯ ರಂಗಕ್ಕೆ ಅವಕಾಶವಿದ್ದು ರಾಜ್ಯದಿಂದ ಎಚ್.ಡಿ.ದೇವೇಗೌಡರಿಗೆ ಹೆಚ್ಚಿನ ಬಲ ತುಂಬಬೇಕಾಗಿದೆ. ಆದ್ದರಿಂದ ನಮ್ಮ ಅಭ್ಯರ್ಥಿಗೆ ಹೆಚ್ಚು ಮತ ನೀಡುವಂತೆ ಕೋರಿದರು.
ಇವರೊಂದಿಗೆ ಮುಖಂಡರಾದ ಅರಕೇಶಣ್ಣ, ಶರಾವತಿ ವೆಂಕಟೇಶ್, ಬಂಡೀಪಾಳ್ಯ ಗಿರೀಶ್, ಕೆ.ಆರ್. ಮಿಲ್ ಶಿವಣ್ಣ, ನಾಗನಹಳ್ಳಿ ದಿನೇಶ್, ಗ್ರಾಪಂ ಅಧ್ಯಕ್ಷೆ ಶೋಭಾ ಚನ್ನೇಗೌಡ, ಲೋಕೇಶ್, ಎಸ್.ಎನ್. ವಾಸು, ಬಿ. ಕಾಂತರಾಜು, ಆಕಾಶ್‌ಗೌಡ, ಸುಜಾತ ದುರ್ಗೇಶ್, ಅನಿಲ್‌ಕುಮಾರ್, ರಾಘವೇಂದ್ರ, ಕಿರಣ್, ಪುಟ್ಟಸ್ವಾಮಿ, ಮಂಜು, ರವಿ ಇದ್ದರು.
ಇನ್ನೊಂದೆಡೆ ಜೆಡಿಎಸ್ ಅಧ್ಯಕ್ಷ ರಾಜಣ್ಣ ಅವರು ಅಭ್ಯರ್ಥಿ ಚಂದ್ರಶೇಖರಯ್ಯ ಅವರ ಮಗ ಡಾ. ಸುಭಾಷ್ ಜತೆ ಸೇರಿ ಕುವೆಂಪುನಗರ, ಶಾರದಾದೇವಿನಗರ, ಜಯನಗರದಲ್ಲಿ ಪ್ರಚಾರ ಕೈಗೊಂಡರು. ಬಳಿಕ ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಜೆಡಿಎಸ್‌ನ ಕಾನೂನು ಘಟಕದ ವತಿಯಿಂದ ಆಯೋಜಿಸಿದ್ದ ವಕೀಲರ ರ್ಯಾಲಿಯಲ್ಲಿ ನೂರಾರು ಮಂದಿ ಜೆಡಿಎಸ್ ಬೆಂಬಲಿತ ವಕೀಲರ ಜತೆ ಹೆಜ್ಜೆ ಹಾಕಿದರು. ರ್ಯಾಲಿಯು ನ್ಯೂ ಕಾಂತರಾಜ್ ಅರಸ್ ರಸ್ತೆಯ ಮೂಲಕ ಕುವೆಂಪುನಗರ, ಶಾರದಾದೇವಿನಗರದಲ್ಲಿ ಅಂತ್ಯಗೊಂಡಿತು.

ಕಾಂಗ್ರೆಸ್ ಭರಾಟೆ
ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಪರ ಶಾಸಕ ಎಂ.ಕೆ. ಸೋಮಶೇಖರ್ ಹಾಗೂ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಅವರು ನಗರ ಪಾಲಿಕೆ 12ನೇ ವಾರ್ಡ್ ವ್ಯಾಪ್ತಿಯ ಜೆ.ಪಿ.ನಗರ, ಚಾಮುಂಡಿಪುರಂನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಎಲ್ಲಾ ಜನರ ಹಿತ ಕಾಪಾಡುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ನೋಡಿ ಜನರು ಕಾಂಗ್ರೆಸ್‌ಗೆ ಮತ ನೀಡಬೇಕಿದೆ ಎಂದರು. ಮಾಜಿ ಉಪ ಮೇಯರ್ ಸಿದ್ದರಾಜು, ಮುಖಂಡರಾದ ರವಿಶಂಕರ್, ಮಾರ್ಬಳ್ಳಿ ಮಹದೇವಸ್ವಾಮಿ, ಬನುಮಯ್ಯ ಚೌಕದ ಎಸ್.ಎನ್. ರಾಜೇಶ್, ಪಾಲಿಕೆ ಸದಸ್ಯ ಸುನಿಲ್, ಗುಣ, ಎನ್. ಶಶಿಧರ್ ಸಂಗಾಪುರ ಇದ್ದರು.
ಇನ್ನೊಂದೆಡೆ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ. ಬಸವೇಗೌಡ ಜಯಲಕ್ಷ್ಮೀಪುರನಂಲ್ಲಿ ಪ್ರಚಾರ ನಡೆಸಿದರು. ಇವರಿಗೆ ನಗರಪಾಲಿಕೆ ಸದಸ್ಯ ಭಾಗ್ಯಲಕ್ಷ್ಮೀ, ಶಾರದಾ, ಸುನಿಲ್, ರವಿ, ಕೇಶವ್, ಮೋಹನ್ ಸಾಥ್ ನೀಡಿದರು. ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಎನ್.ಆರ್. ಕ್ಷೇತ್ರದಲ್ಲಿ ಪ್ರಚಾರ ನಡೆಸಿದರು. ಮಾಜಿ ಶಾಸಕ ಎಂ.ಸತ್ಯನಾರಾಯಣ ಅವರು ಕೂರ್ಗಳ್ಳಿ ಎಂ.ಮಹದೇವು, ಕೆ. ಮರೀಗೌಡ, ನಟರಾಜ್, ನಾಡನಹಳ್ಳಿ ರವಿ, ಪಟೇಲ್ ಜವರೇಗೌಡ, ಅರ್ಕೇಶ್, ಲೋಕೇಶ್ ಜೆ ನಾಡನಹಳ್ಳಿಯಲ್ಲಿ, ಎಂ.ಎನ್. ಮಹದೇವ್ ಎನ್.ಆರ್. ಮೊಹಲ್ಲಾದಲ್ಲಿ ಪ್ರಚಾರ ನಡೆಸಿದರು.

ಜೆಡಿಎಸ್ ಕಾನೂನು ಘಟಕ
ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಸುಬ್ಬಾರೆಡ್ಡಿ, ವಕ್ತಾರ ಬಾಬು, ಪಾಲಿಕೆ ಸದಸ್ಯರಾದ ಕೆ.ಟಿ. ಚಲುವೆಗೌಡ, ಬಿ.ಎಂ. ನಟರಾಜು, ಬಾಲು, ಎಸ್.ಬಿ.ಎಂ. ಮಂಜು, ಚಂದ್ರೇಗೌಡ, ತೇಜಮಣಿ, ಅಶ್ವಿನಿ,     ಕೌಶಲ್ಯ     ಪ್ರಸಾದ್, ರಾಮು     ಇದ್ದರು. ಮಹಿಳಾ ಪದಾಧಿಕಾರಿಗಳಾದ ಸುಜಾತ ದುರ್ಗೇಶ್,     ಪದ್ಮ, ಚಿತ್ರ, ವನಜಾ, ಸುಷ್ಮಾ, ಪೂಜಾ ಅವರು ಶಾರದಾದೇವಿನಗರದಲ್ಲಿ ಹಾಗೂ ಕೆ.ಆರ್. ಕ್ಷೇತ್ರದಲ್ಲಿ ಅಧ್ಯಕ್ಷ ಎಂ. ಬಸವರಾಜು, ಸತ್ಯನಾರಾಯಣ, ಚಿಕ್ಕಸೋಮಣ್ಣ, ಮಲ್ಲಿಕಾ, ನಾಗೇಶ್‌ರಾವ್, ಕೃಷ್ಣ, ಸುಜಾತ ಪ್ರಚಾರ ನಡೆಸಿದರು.

ಪ್ರತಾಪ ಮತಬೇಟೆ
ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರು ತಾಲೂಕಿನ ದಡದ ಕಲ್ಲಹಳ್ಳಿ ಪ್ರಚಾರ ನಡೆಸಿದರು. ಭಾರತದ ಭವಿಷ್ಯ ರೂಪಿಸಲು ನರೇಂದ್ರ ಮೋದಿಗೆ ಬೆಂಬಲ ನೀಡಬೇಕಿದೆ. ಈ ಬಾರಿ ಮೈಸೂರಿನಲ್ಲಿ ನನಗೆ ಅವಕಾಶ ನೀಡಿದರೆ ಉತ್ತಮ ಕೊಡುಗೆ ನೀಡುತ್ತೇನೆ ಎಂದು ಭರವಸೆ ನೀಡಿದರು.
ಇವರೊಂದಿಗೆ ಜಿಲ್ಲಾಧ್ಯಕ್ಷ ಹೇಮಂತಕುಮಾರ್‌ಗೌಡ, ಯಶಸ್ವಿ ಸೋಮಶೇಖರ್, ಅರುಣ್‌ಗೌಡ ಇದ್ದರು. ಮತ್ತೊಂದೆಡೆ ಯುವ ಮುಖಂಡ ಜೋಗಿ ಮಂಜು ನೇತೃತ್ವದಲ್ಲಿ ಸುಣ್ಣದಕೇರಿ, ಕನಕಗಿರಿ ಸೇರಿದಂತೆ ವಿವಿಧೆಡೆ ಕಡೆ ಪ್ರಚಾರ ನಡೆಸಿದರು. ಇವರಿಗೆ ವಿಕ್ರಂ, ರಾಕೇಶ್ ಭಟ್ ಸಹಕಾರ ನೀಡಿದರು.

ಇತರೆ ಅಭ್ಯರ್ಥಿಗಳೂ ಜೋರು
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬನ್ನೂರು ಕುಮಾರ್ ಶುಕ್ರವಾರ ತಮ್ಮ ಬೆಂಬಲಿಗರೊಂದಿಗೆ ಬನ್ನಿಮಂಟಪ, ಶಿವರಾತ್ರೀಶ್ವರ ನಗರ, ಕೆಸರೆ ಸೇರಿದಂತೆ ಇನ್ನಿತರೆಡೆಗಳಲ್ಲಿ ಪಾದಯಾತ್ರೆ ನಡೆಸಿದರು. ಮುಖಂಡರಾದ ಸರ್ದಾರ್, ವೆಂಕಟೇಶ್, ಎಂ.ಪಿ. ಅಯ್ಯಪ್ಪ, ರವಿ, ಫೈರೋಜ್ ಇದ್ದರು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಎಂ.ವಿ. ಪದ್ಮಮ್ಮ ಅವರು ಡಿ.ದೇವರಾಜು ಅರಸು ರಸ್ತೆ, ಶಿವರಾಂಪೇಟೆ ಸೇರಿದಂತೆ ವಿವಿಧೆಡೆ ಪಾದಯಾತ್ರೆ ನಡೆಸಿದರು. ಮುಖಂಡರಾದ ಸವಿತಾ, ವಿಜಯಲಕ್ಷ್ಮಿ, ಆನಂದ್, ತನುಶ್ರೀ, ಸಾಗರ್, ವೈಭವ್, ವಿಜಯ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.