ಮೈಸೂರು

ವಿದ್ಯುತ್ ವ್ಯತ್ಯಯ

Published On :

ಮೈಸೂರು: 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೊಮ್ಮುವ 11 ಕೆ.ವಿ. ಗಂಗೋತ್ರಿ ಮಾರ್ಗದಲ್ಲಿ ತುರ್ತು ನಿರ್ವಹಣಾ ಕೆಲಸದ ನಿಮಿತ್ತ ಈ ಕೆಳಕಂಡ ಪ್ರದೇಶಗಳಿಗೆ ಏ.12 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು. ವಿಶ್ವಮಾನವ ಜೋಡಿ ರಸ್ತೆ, ಕಾಮಾಕ್ಷಿ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು, ರೋಟರಿ ಶಾಲೆ, ವಿಜಯ ವಿಠ್ಠಲ ಶಾಲೆ, ಸರಸ್ವತಿಪುರಂ, 12 ರಿಂದ 17ನೇ ಮುಖ್ಯ ರಸ್ತೆವರೆಗೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.

ಮತದಾನ ಜಾಗೃತಿ
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಮತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯು ಜಾಗೃತಿ ನಡಿಗೆ ಜಾಥಾ ನಡೆಸಿತು. ಹಂಚ್ಯಾ ಸಾತಗಳ್ಳಿ ರಸ್ತೆಯಲ್ಲಿರುವ ವಿವಿಯ ಸ್ನಾತಕೋತ್ತರ ಕೇಂದ್ರದ ಆವರಣದಿಂದ ಹೊರಟ ಜಾಥಾದಲ್ಲಿ ಘೋಷ ವಾಕ್ಯಗಳ ಬ್ಯಾನರ್ ಹಾಗೂ ಭಿತ್ತಿಪತ್ರಗಳನ್ನು ಹಿಡಿದು ತೆರಳಿದ ವಿದ್ಯಾರ್ಥಿಗಳು ಮತದಾನ ಮಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದರು. ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಸಾಗಿ ತ್ರಿವೇಣಿ ವೃತ್ತದ ಮೂಲಕ ಯರಗನಹಳ್ಳಿ ವೃತ್ತದವರಿಗೆ ತಲುಪಿತು. ಅಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರ ಗಮನ ಸೆಳೆದರು. ವಿವಿಧ ವಿಭಾಗಗಳ ಮುಖ್ಯಸ್ಥರಾದ ಡಾ.ಎಸ್.ಬಿ. ಪ್ರಕಾಶ್, ಡಾ.ಎಸ್.ಎನ್. ತಿಮ್ಮರಾಜು, ಡಾ.ರೇಣುಕಾ ಮೂರ್ತಿ, ಡಾ.ಸುರೇಶ್, ಡಾ.ಎಂ. ಪ್ರಸನ್ನ ಕುಮಾರ್ ಇದ್ದರು.

ಯುವತಿ ನಾಪತ್ತೆ
ಮೈಸೂರು: ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಶೌಚಾಲಯಕ್ಕೆಂದು ತೆರಳಿದ ಯುವತಿ ಕಾಣೆಯಾಗಿದ್ದಾರೆ. ಮಾಗಡಿ ತಾಲೂಕು ಹುಲ್ಲೇನಹಳ್ಳಿಯ ಕೆ.ನಾಗರಾಜು ಎಂಬವರ ಪುತ್ರಿ ಸೌಂದರ್ಯ (18) ನಾಪತ್ತೆಯಾದವರು. ತಾತನ ಜೊತೆ ನಗರಕ್ಕೆ ಆಗಮಿಸಿದ್ದರು. ಗೋಧಿ ಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು, ಕನ್ನಡ ಮಾತನಾಡುವ ಈಕೆ 5 ಅಡಿ ಎತ್ತರ ಇದ್ದಾರೆ. ಇವರ ಸುಳಿವು ಸಿಕ್ಕಲ್ಲಿ ದೂ.2418107, 2418307 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.