ಹಸ್ತಾಕ್ಷರ ನೀಡಿ ಕೈಕೊಟ್ಟು ಹೋದ ದರ್ಶನ್!
ಮೈಸೂರು: ಲೋಕಸಭಾ ಚುನಾವಣಾ ಕಣದಲ್ಲಿರುವ ಶಿವಮೊಗ್ಗ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಗೀತಾ ಶಿವರಾಜ್ಕುಮಾರ್ ಮತ್ತು ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ನಟಿ ರಮ್ಯಾ ಪರ ಮತಪ್ರಚಾರ ಮಾಡುವುದಿಲ್ಲ ಎಂದು ಚಿತ್ರ ನಟ ದರ್ಶನ್ ಸ್ಪಷ್ಟಪಡಿಸಿದರು.
ನಗರದಲ್ಲಿ ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಪರ ಮತಯಾಚನೆಗಾಗಿ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆಯೆ ನನ್ನ ಕಾಲ್ಶೀಟ್ ಪಡೆದಿದ್ದರು. ಆದ್ದರಿಂದ ರೋಡ್ಶೋ ನಡೆಸಲು ಬಂದಿದ್ದೇನೆ. ಗೀತಾ ಶಿವರಾಜ್ಕುಮಾರ್ ಮತ್ತು ರಮ್ಯಾ ಅವರು ನನ್ನನ್ನು ಚುನಾವಣಾ ಪ್ರಚಾರಕ್ಕೆ ಕರೆದಿಲ್ಲ ಎಂದರು.
ಮತ ಪ್ರಚಾರ ನಡೆಸುತ್ತಿರುವ ಕಲಾವಿದರನ್ನು ಜೋಕರ್ಗಳು ಎಂದಿರುವ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ದೊಡ್ಡವರು. ಆದ್ದರಿಂದ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಹಿರಿಯ ನಟ ಅಂಬರೀಷ್ ಗುಣಮುಖರಾಗಿ ಬಂದಿರುವುದು ಸಂತೋಷದ ಸಂಗತಿ. ರಾಜಕೀಯ ನನ್ನ ವ್ಯಕ್ತಿತ್ವಕ್ಕೆ ಒಗ್ಗುವುದಿಲ್ಲ. ಆ ಕಾರಣಕ್ಕೆ ನಾನು ರಾಜಕೀಯಕ್ಕೆ ಹೋಗುವುದಿಲ್ಲ ಎಂದು ಪ್ರಶ್ನೆಮೊಂದಕ್ಕೆ ಉತ್ತರಿಸಿದರು.
ಎಲ್ಲಿ ರೋಡ್ ಶೋ: ಕಾಂಗ್ರೆಸ್ ಪರ ಪ್ರಚಾರಕ್ಕೆ ಆಗಮಿಸಿದ ದರ್ಶನ್ ಬಂದಷ್ಟೆ ವೇಗದಲ್ಲಿ ಹಿಂದಿರುಗಿದರು. ತೆರೆದ ಜೀಪ್ನಲ್ಲಿ ದರ್ಶನ ರೋಡ್ ಶೋ ನಡೆಸುವುದಾಗಿ ಕಾಂಗ್ರೆಸ್ನ ಚುನಾವಣಾ ಏಜೆಂಟ್ ಎಂ.ಲಕ್ಷ್ಮಣ್ ಪ್ರಕಟಣೆ ನೀಡಿದ್ದರು. ಆದರೆ ದರ್ಶನ್ ರೋಡ್ ಶೋ ಮಾಡಲಿಲ್ಲ.
ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಚುನಾವಣಾ ಪ್ರಚಾರ ನಡೆಸಲು ಕೃಷ್ಣಮೂರ್ತಿಪುರಂನ ಎಸ್ಡಿಎಂ ಮಹಿಳಾ ಕಾಲೇಜು ಬಳಿ ಆಗಮಿಸಿದ್ದರು. ಆದರೆ ಕಾಲೇಜು ಗೇಟ್ ಬಳಿ ನಿಂತುಕೊಂಡ ದರ್ಶನ್ ಕೆಲ ವಿದ್ಯಾರ್ಥಿನಿಯರಿಗೆ ಹಸ್ತಾಕ್ಷರ ನೀಡಿದರು. ಬಳಿಕ ಚುನಾವಣಾ ಪ್ರಚಾರವನ್ನೂ ಮಾಡದೆ ಕಾರು ಹತ್ತಿ ಹೊರಟರು. ಕಾಂಗ್ರೆಸ್ ಮಹಿಳಾ ಘಟಕದ ನಗರಾಧ್ಯಕ್ಷೆ ಮೀನಾ ತೂಗುದೀಪ್, ಪ್ರಧಾನ ಕಾರ್ಯದರ್ಶಿ ಎಚ್.ಎ. ವೆಂಕಟೇಶ್, ಮುಖಂಡರಾದ ಶ್ರೀನಾಥ್ ಬಾಬು, ರೇವಣ್ಣ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

