ಮೈಸೂರು

ರಂಗೋಲಿ ಸ್ಪರ್ಧೆ

Published On :

ಮೈಸೂರು: ಶಂಕರ ಜಯಂತಿ ಅಂಗವಾಗಿ ಶ್ರೀಮಾತಾ ದುರ್ಗಾ ಪರಮೇಶ್ವರಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಂಕರಚಾರ್ಯರ ಕುರಿತ ಲೇಖನ ಸ್ಪರ್ಧೆ ಹಾಗೂ ರಂಗೋಲಿ ಸ್ಪರ್ಧೆಯನ್ನು ಏ. 20 ರಂದು ಏರ್ಪಡಿಸಿದೆ. ಅಂದು ಬೆಳಗ್ಗೆ 9.30 ಕ್ಕೆ ಕೃಷ್ಣಮೂರ್ತಿಪುರಂನ ಭಗಿನೀ ಸೇವಾ ಸಮಾಜದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ 8 ರಿಂದ 15 ವರ್ಷ ವಯಸ್ಸಿನ ಮಕ್ಕಳು ಭಾಗವಹಿಸಬಹುದು. ಆಸಕ್ತರು ಏ.15 ರೊಳಗೆ ತಮ್ಮ ಹೆಸರನ್ನು ಮೊ. 98808-63241 ಸಂಪರ್ಕಿಸಬಹುದು.

ಭಿತ್ತಿಪತ್ರ ಸ್ಪರ್ಧೆ
ಪ್ರಾದೇಶಿಕ ಪ್ರಾಕೃತಿಕ ಇತಿಹಾಸ ಸಂಗ್ರಹಾಲಯದ ಯೆಯಾ ಸಂಘಟನೆಯು ಭೂಮಿ ದಿನಾಚರಣೆಯ ಅಂಗವಾಗಿ ಸಿದ್ಧಾರ್ಥನಗರದಲ್ಲಿರುವ ಸಂಸ್ಥೆಯ ಆವರಣದಲ್ಲಿ ಏ. 22 ರಂದು ರಾಷ್ಟ್ರೀಯ ಮಟ್ಟದ ಭಿತ್ತಿಪತ್ರ ತಯಾರಿಸುವ ಸ್ಪರ್ಧೆ ಏರ್ಪಡಿಸಿದೆ. ಮೊದಲ ಮೂವರು ವಿಜೇತರು ಸೇರಿದಂತೆ 5 ಮಂದಿಗೆ ನಗದು ಬಹುಮಾನ ನೀಡಲಾಗುವುದು.  ಏ.1,1996 ರಿಂದ 31 ಮಾ. 2000 ಒಳಗೆ ಜನಿಸಿದವರು ಭಾಗವಹಿಸಬಹುದು. 200 ಮಂದಿಗೆ ಮಾತ್ರ ಪ್ರವೇಶ. ಏ. 15 ರಿಂದ 18 ರವರೆಗೆ ದೂ. 0821 2447046 ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಜೂ. 5 ರಂದು ನಡೆಯುವ ವಿಶ್ವ ಪರಿಸರ ದಿನಾಚರಣೆಯಲ್ಲಿ ಬಹುಮಾನ ವಿತರಣೆ ನಡೆಯಲಿದೆ ಎಂದು ಸಂಸ್ಥೆ ತಿಳಿಸಿದೆ.

ರಂಗಭೂಮಿ ದಿನ
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಲಲಿತಕಲಾ ಸಂಘದ ವತಿಯಿಂದ ಏ. 15 ರಂದು ವಿಶ್ವರಂಗಭೂಮಿ ದಿನಾಚರಣೆ ಏರ್ಪಡಿಸಿದೆ. ಅಂದು ಮಧ್ಯಾಹ್ನ 12 ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಂಗಕರ್ಮಿ ಶ್ರೀಕಂಠ ಗುಂಡಪ್ಪ ರಂಗಸಂದೇಶ ವಾಚಿಸುವರು. ಉಮೇಶ್, ಸಿ.ಆರ್. ಸಿಂಹ ಸ್ಮರಣೆ ಮಾಡುವರು. ಪ್ರಾಂಶುಪಾಲೆ ಡಾ.ಜಿ.ಎಂ. ಸುಶೀಲ ಅಧ್ಯಕ್ಷತೆ ವಹಿಸುವರು.

ಜಯಂತಿ
ಅಕ್ಕನ ಬಳಗ ಹಾಗೂ ಕದಳಿ ಮಹಿಳಾ ವೇದಿಕೆ ವತಿಯಿಂದ ಏ. 15 ರಂದು ಅಕ್ಕಮಹಾದೇವಿ ಜಯಂತಿ ಹಮ್ಮಿಕೊಂಡಿದೆ. ಅಂದು 10 ಕ್ಕೆ ಅಕ್ಕನ ಬಳಗ ಸಭಾಂಗಣದಲ್ಲಿ ವಿಶೇಷ ರಸಪ್ರಶ್ನೆ ಸ್ಪೆರ್ಧೆ ನಡೆಯಲಿದೆ. ಬಸವ ಜ್ಞಾನ ಮಂದಿರದ ಮಾತೆ ಬಸವಾಂಜಲಿ ಸಮ್ಮುಖ ವಹಿಸುವರು. ಬಳಗದ ಅಧ್ಯಕ್ಷೆ ಎ.ಎನ್. ಗೀತಾ ಗುರುಸ್ವಾಮಿ ಅಧ್ಯಕ್ಷತೆ ವಹಿಸುವರು.

ನವಿಲು ಗರಿ
ಬೋಗಾದಿಯ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಮೈಸೂರು ಶಾಖೆಯಲ್ಲಿ ಹುಣ್ಣಿಮೆ ಅಂಗವಾಗಿ ಏ.15 ರಂದು ನವಿಲು ಗರಿ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 6.30 ಕ್ಕೆ ಶೃತಿ ರಂಜಿನಿ ಅವರು ಭಕ್ತಿ ರಸಧಾರೆ ಸಂಗೀತ ನಡೆಸಿಕೊಡುವರು.       

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.