ಅಂಬೇಡ್ಕರ್ ಜಯಂತಿ
ಶಾರದಾ ವಿಲಾಸ ವಿದ್ಯಾಸಂಸ್ಥೆ
ಕೃಷ್ಣಮೂರ್ತಿಪುರಂನ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿಯನ್ನು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ. ಪಿ. ವೆಂಕಟರಾಮಯ್ಯ ಉದ್ಘಾಟಿಸಿದರು. ರೈಲ್ವೆ ರಕ್ಷಣಾ ದಳದ ಸಹಾಯಕ ಭದ್ರತಾಧಿಕಾರಿ ಎಂ. ರಾಮಕೃಷ್ಣಪ್ಪ, ಸಂಸ್ಥೆ ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ, ಗೌರವ ಕಾರ್ಯದರ್ಶಿ ಎಸ್. ರವಿಶಂಕರ್ ಇದ್ದರು. ಪಿ. ವೆಂಕಟರಾಮಯ್ಯ ಹಾಗೂ ಎಂ.ರಾಮಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು.
ಸಂಗೀತ ಕಲೆಗಳ ವಿವಿ
ಲಕ್ಷ್ಮಿಪುರಂನಲ್ಲಿರುವ ಕರ್ನಾಟಕ ರಾಜ್ಯ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ಡಾ.ಅಂಬೇಡ್ಕರ್ ಜನ್ಮದಿನ ಆಚರಿಸಲಾಯಿತು. ಮಹಾರಾಜ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ಎಚ್.ಎಂ. ವಸಂತಮ್ಮ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಹಾಗೂ ಸಾಧನೆಯ ಕುರಿತು ಮಾತನಾಡಿದರು. ಕುಲಸಚಿವ ವೈ.ಎಸ್.ಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಎಂ.ಎಸ್. ಶೇಖರ್, ಹಣಕಾಸು ಅಧಿಕಾರಿ ಡಿ.ಒ ಕೃಷ್ಣಸ್ವಾಮಿ ಇದ್ದರು.
ಸಾರಿಗೆ ಸಂಸ್ಥೆ ನೌಕರರ ಸಂಘ
ಬನ್ನಿಮಂಟಪದ ಕೆಎಸ್ಆರ್ಟಿಸಿ ಅತಿಥಿ ಗೃಹದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೌಕರರು ಹಾಗೂ ಅಧಿಕಾರಿಗಳು ರಕ್ತದಾನದಲ್ಲಿ ಭಾಗವಹಿಸಿದ್ದರು. ಕೆ.ಆರ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ. ಮಂಜುನಾಥ್, ಸಂಘದ ಅಧ್ಯಕ್ಷ ಎನ್. ರವೀಂದ್ರ, ಪ್ರಧಾನ ಕಾರ್ಯದರ್ಶಿ ಡಿ. ಚಂದ್ರ, ಖಜಾಂಚಿ ಎಚ್. ಬಸವರಾಜು ಇದ್ದರು.
ಚರ್ಮ ಕುಶಲ ಕಾರ್ಮಿಕರು
ಡಾ. ಬಾಬು ಜಗಜೀವನರಾಂ ಚರ್ಮ ಕುಶಲ ಕಾರ್ಮಿಕರ ಸಂಘದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಪುರಭವನದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಿಜೆಪಿ ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್, ಮುಖಂಡರಾದ ಕಾಶಿವಿಶ್ವನಾಥ್ ಶೆಟ್ಟಿ, ಶಿವಣ್ಣ ಹಾಗೂ ಸಂಘದ ಅಧ್ಯಕ್ಷ ವಿ.ನಾರಾಯಣ ಇದ್ದರು.
ದಲಿತ ಸಂಘರ್ಷ ಸಮಿತಿ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಪುರಭವನದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜಿಲ್ಲಾ ಸಂಚಾಲಕ ಮಲ್ಲೇಶ್ ಚುಂಚನಹಳ್ಳಿ, ಬರಹಗಾರ ಡಾ.ಕೆ.ಪಿ. ಮಹಾಲಿಂಗು ಕಲ್ಕುಂದ, ಮುಖಂಡರಾದ ಹನುಮಂತು ಬೆಲವತ್ತ, ಗಂಗಾಧರ್, ಪಟ್ಟುಸ್ವಾಮಿ ದೇವರಸನಹಳ್ಳಿ ಇದ್ದರು.
ಅಲ್ಪಸಂಖ್ಯಾತರ ಸಮನ್ವಯ
ದಲಿತ ಹಿಂದುಳಿದ ಅಲ್ಪಸಂಖ್ಯಾತರ ಸಮನ್ವಯ ವೇದಿಕೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಪುರಭವನದ ಮುಂಭಾಗ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮುಖಂಡರಾದ ದ್ಯಾವಪ್ಪನಾಯಕ, ಜಿ.ಎಂ.ಅಂದಾನಿ, ಶ್ರೀನಿವಾಸ ಕಡಕೊಳ, ರಘು ಯಡಕೊಳ, ಚಂದ್ರಶೇಖರ್ ಇದ್ದರು.
ಪ್ರಜಾಶಕ್ತಿ ಆಂದೋಲನ
ಪ್ರಜಾಶಕ್ತಿ ಆಂದೋಲನ ವೇದಿಕೆ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನದ ಅಂಗವಾಗಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಹುಣಸೂರು, ಖಜಾಂಚಿ ಕೆರೆಹಳ್ಳಿ ಮಾದೇಶ್, ಮುಖಂಡರಾದ ಪ್ರಕಾಶ್, ಚಂದ್ರು, ಶಿವರಾಜು, ಸೂರಳ್ಳಿ ಮಹದೇವ ನಾಯಕ, ಬಸವರಾಜ ನಾಯಕ ಇದ್ದರು.
ಖಾದಿ ಗ್ರಾಮೋದ್ಯೋಗ
ಮೈಸೂರು ನಗರ ಕ್ರಾಂಗೆಸ್ ಸಮಿತಿಯ ಎಸ್ಸಿ ಘಟಕದ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಘಟಕದ ಜಿಲ್ಲಾ ಸಂಚಾಲಕ ಆರ್. ಸೋಮಸುಂದರ್. ಉಪಾಧ್ಯಕ್ಷರಾದ ಕಾಳಯ್ಯ, ಬಿ. ಪ್ರಸಾದ್, ಮುಖಂಡರಾದ ಎಂ. ಶಿವರಾಜ್, ಸುಭಾಷ್, ಕೆ. ಪುಟ್ಟಯ್ಯ, ಮಂಗಳಗೌರಿ, ಜಗನ್ನಾಥ್, ಕೃಷ್ಣಮೂರ್ತಿ, ಮೋಹನ್ಕುಮಾರ್, ಮಧುರಾಘವನ್, ಬಿ. ಶಿವರಾಜ್ ಇದ್ದರು.
ಕೆಎಸ್ಆರ್ಪಿ ಪಡೆ
ಕೆಎಸ್ಆರ್ಪಿ 5ನೇ ಪಡೆಯ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಜನ್ಮದಿನವನ್ನು ಸಂಸ್ಥೆಯ ಆವರಣದಲ್ಲಿ ಆಚರಿಸಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಪಡೆಯ ಕಮಾಡೆಂಟ್ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಆದಿ ಕರ್ನಾಟಕ ಸಮಿತಿ
ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಸಿಲ್ಕ್ ಪ್ಯಾಕ್ಟರಿ ಬಳಿ ಇರುವ ಬಸವಲಿಂಗಪ್ಪ ವೃತ್ತದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಬಿಜೆಪಿ ಮುಖಂಡರಾದ ಎಚ್.ವಿ. ರಾಜೀವ್, ಯು.ಎಸ್. ಶೇಖರ್, ಉಪಮೇಯರ್ ವಿ. ಶೈಲೇಂದ್ರ, ಸಮಿತಿ ಅಧ್ಯಕ್ಷ ಕೆ. ಮುರಳೀಧರ್ ಇದ್ದರು.
ಸರ್ವಜನಾಂಗ ವೇದಿಕೆ
ಸರ್ವಜನಾಂಗ ಹಿತರಕ್ಷಣಾ ವೇದಿಕೆಯು ಅಧ್ಯಕ್ಷ ವೇಣುಗೋಪಾಲ್ ನೇತೃತ್ವದಲ್ಲಿ ಪುರಭವನದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಿತು. ನಂತರ ನಜರಬಾದಿನ ವೇದಿಕೆ ಕಚೇರಿಯಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಪೂಜಿಸಿ ಗೌರವ ಸಲ್ಲಿಸಲಾಯಿತು. ಮುಖಂಡರಾದ ಪುಟ್ಟಯ್ಯ, ಎಲ್. ಮಹದೇವಪ್ಪ, ಎಂ. ಪ್ರಭುದೇವ್, ಮಲ್ಲಯ್ಯ, ಕೆ.ಆರ್. ಚಿಕ್ಕಣ್ಣ, ಅಕ್ರಂಪಾಶ, ಪಿ. ಮಹದೇವ್, ಲಿಂಗಮ್ಮ, ಬಿ.ಟಿ. ರಾಜಮ್ಮ, ಯಶೋದರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

