ಭಾರತದ ವೈದ್ಯ ಕ್ಷೇತ್ರದಲ್ಲಿ ಕ್ರಾಂತಿ
ಕ.ಪ್ರ.ವಾರ್ತೆ ಮೈಸೂರು ಏ. 18
ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಹೆಚ್ಚು ತಂತ್ರಜ್ಞಾನ ಬಳಕೆಯಿಂದಾಗಿ ಕ್ರಾಂತಿ ಆಗಿದೆ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.
ಮೈಸೂರಿನ ಚಾಮರಾಜಪುರಂನಲ್ಲಿ ನೇತ್ರಧಾಮ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಮಾನವನ ದೇಹವು ವೈವಿಧ್ಯತೆಯಿಂದ ಕೂಡಿದೆ. ದೇಹದ ಬಗ್ಗೆ ವೈದ್ಯರಿಗೆ ಮಾತ್ರ ಹೆಚ್ಚಿನ ಅಂಶಗಳು ಗೊತ್ತಾಗಿವೆ. ಮಾನವನ ಒಂದೊಂದು ಅಂಗವು ಮುಖ್ಯವಾದದ್ದು, ಒಂದು ಅಂಗಕ್ಕೆ ಹಾನಿಯಾದರೂ ಅದನ್ನು ಮತ್ತೆ ನೈಜ ಸ್ಥಿತಿಗೆ ತರುವುದು ಕಷ್ಟ. ಆದರೆ, ತಂತ್ರಜ್ಞಾನ ಬಳಕೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಿದ್ದಾರೆ. ಇದು ಸ್ವಾಗತಾರ್ಹ ವಿಜ್ಞಾನದ ಬೆಳವಣಿಗೆಗಳು ಎಂದರು.
ನಮ್ಮ ದೇಶದಲ್ಲಿ ಇನ್ನೂ ಹಿಂದುಳಿದಿರುವ ಸಾಕಷ್ಟು ಪ್ರದೇಶಗಳಿವೆ. ಅಲ್ಲಿಗೆಲ್ಲ ವೈದ್ಯರು, ವಕೀಲರು ಹೋಗುವ ಮೂಲಕ ಆ ಜನರ ಸೇವೆ ಮಾಡಬೇಕು. ಎಲ್ಲ ಸೌಲಭ್ಯವುಳ್ಳ ಆಸ್ಪತ್ರೆಗಳು ಮತ್ತಷ್ಟು ಸ್ಥಾಪನೆಯಾಗಿ, ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಬೇಕು. ಗ್ರಾಮೀಣ ಪ್ರದೇಶದಲ್ಲೂ ದುಡಿಯಲು ವೈದ್ಯರು ಮನಸು ಮಾಡಬೇಕು ಎಂದು ಸಲಹೆ ನೀಡಿದರು.
ಮಕ್ಕಳಿಗೆ ತಂದೆ, ತಾಯಿ ನಿಜವಾದ ದೇವರು. ಪ್ರತಿಯೊಬ್ಬರಿಗೆ ತಾಯಿ ಮೊದಲ ದೇವರು. ಹೆತ್ತವರನ್ನು ಎಲ್ಲರೂ ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ನಡೆಯಬೇಕು. ಅದು ನಮ್ಮ ದೇಶದ ಸಂಸ್ಕೃತಿ ಕೂಡ ಎಂದು ತಿಳಿಸಿದರು.
ಪ್ರಫುಲ್ಲತಾ ಭಾರದ್ವಾಜ್, ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಕೆ.ಎಸ್. ಶ್ರೀಪ್ರಕಾಶ್, ಮೇಯರ್ ಎನ್.ಎಂ. ರಾಜೇಶ್ವರಿ, ನಗರಪಾಲಿಕೆ ಸದಸ್ಯೆ ಸಮೀನಾ ಜಬೀನ್ ಇದ್ದರು. ನೇತ್ರಧಾಮ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಗಣೇಶ್ ಸ್ವಾಗತಿಸಿದರು. ಸಿಇಒ ಡಾ.ಆರ್. ಸುಮನಶ್ರೀ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

