ಗಂಧನಹಳ್ಳಿ: ಹುಣಸಮ್ಮ ತಾಯಿ ರಥೋತ್ಸವ
ಕ.ಪ್ರ.ವಾರ್ತೆ ಭೇರ್ಯ ಏ. 19
ಗಂಧನಹಳ್ಳಿಯಲ್ಲಿ ಗ್ರಾಮದೇವತೆ ಹುಣಸಮ್ಮ ತಾಯಿ ರಥೋತ್ಸವ ಶುಕ್ರವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು.
ರಥೋತ್ಸವಕ್ಕೆ ಮುನ್ನ ಹುಣಸಮ್ಮ ತಾಯಿ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಮಹಿಳೆಯರು ತಂಬೀಟ್ ಆರತಿಯೊಂದಿಗೆ ಮೆರವಣಿಗೆಯಲ್ಲಿ ಪಲ್ಲಕ್ಕಿ ಉತ್ಸವ ಸಾಗಿತ್ತು. ನಂತರ ಹುಣಸಮ್ಮನನ್ನು ರಥದಲ್ಲಿ ಕೂರಿಸಿ ಮೂರು ಸುತ್ತು ಮೆರವಣಿಗೆ ಮಾಡಿ, ಹಣ್ಣು- ಜವನವನ್ನು ನವ ದಂಪತಿಗಳು, ಮಹಿಳೆಯರು, ಯುವಕರು ಎಸೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಳ್ಳುತ್ತಿದ್ದರು.
ಗ್ರಾಮದಲ್ಲಿ ಹಬ್ಬದ ಪ್ರಯುಕ್ತ ತಳಿರು ತೋರಣಗಳಿಂದ ನವ ವಧುವಿನಂತೆ ಶೃಂಗಾರಗೊಂಡು ಕಂಗೊಳಿಸಿತ್ತಿತ್ತು. ರಥೋತ್ಸವ ವೇಳೆಯಲ್ಲಿ ಭಾರಿ ಗುಡುಗು ಮಳೆ ಬಿದ್ದರೂ ಭಕ್ತಾದಿಗಳು ಚದುರದೆ ರಥೋತ್ಸವದಲ್ಲಿ ಸುಮಾರು 15 ಸಾವಿರ ಭಕ್ತಾದಿಗಳು ಭಾಗವಹಿಸಿದರು.
ರಥೋತ್ಸವದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್, ತಾಲೂಕು ಕುರುಬ ಸಂಘದ ಅಧ್ಯಕ್ಷ ಜಿ.ಎನ್. ಮಲ್ಲೇಗೌಡ, ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಿ.ಎಂ. ಹೇಮಂತ್, ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ, ರಾಮಕೃಷ್ಣೇಗೌಡ, ಗ್ರಾಮದ ಯಜಮಾನರಾದ ಜಿ.ಎನ್. ರಘು, ಜಿ.ಡಿ. ಕೃಷ್ಣೇಗೌಡ, ಬೀರೇಗೌಡ, ಎಸ್. ರಾಮು, ಲಕ್ಕೆಗೌಡ, ಚಿಕ್ಕೆಗೌಡ, ರಂಗೇಗೌಡ, ರಾಜೇಗೌಡ, ಲೋಹಿತ್, ಉದಯ ವರ್ವ, ಕನಕ ಸಂಘದ ಅರುಣ್, ಕೆಂಪರಾಜ್, ಜಿ.ಎನ್. ಮಂಜುನಾಥ್, ಜಿ.ಎನ್. ರವಿ, ಶ್ರೀಧರ್, ಸಚ್ಚಿ, ಭಾಸ್ಕರ್, ರವೀಶ್, ರಾಜೇಶ್, ಪರಣಿ, ಜೈರಾಜು, ಧನು, ತಿಲಕ್, ಅರ್ಚಕ ಸುರೇಶ್ ಹಾಗೂ ಗ್ರಾಮದ ಮುಖಂಡರು, ಯಜಮಾನರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

