ಮೈಸೂರು

ಅಂಬೇಡ್ಕರ್ ಸ್ತ್ರೀವಾದ ಪಿತಾಮಹ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಏ. 24
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಭಾರತದ ಸ್ತ್ರೀವಾದದ ಪಿತಾಮಹ ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ಹಾಗೂ ಸಾಹಿತಿ ಡಾ.ಧರಣಿದೇವಿ ಮಾಲಗತ್ತಿ ಹೇಳಿದರು.
ಮೈಸೂರು ವಿವಿ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರವು ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಕಾಲೇಜುಗಳತ್ತ ಅಂಬೇಡ್ಕರ್ ಚಿಂತನೆ- ವಿಸ್ತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದಿನವರಿಗಿಂತ ಈಗಿನ ಮಹಿಳೆಯರು ಸಾಮಾಜಿಕ ಪರಿಸ್ಥಿತಿ ಪರವಾಗಿಲ್ಲ. ಈ ಸ್ಥಿತಿಗೆ ಬರಲು ಭಾರತೀಯ ಮಹಿಳೆಯರು ಬಹಳ ದೂರ ತಲುಪಿದ್ದಾರೆ, ಶ್ರಮಿಸಿದ್ದಾರೆ. ಅಂಬೇಡ್ಕರ್ ಅವರು ಮಹಿಳಾ ಸಮಾನತೆಗಾಗಿ ಪ್ರಯತ್ನ ಪಟ್ಟರು. ಹಿಂದೂ ಕೋಡ್ ಬಿಲ್ ಅನುಷ್ಠಾನಕ್ಕೆ ತಂದಿಲ್ಲ ಎಂಬ ಕಾರಣಕ್ಕಾಗಿ ಅಂಬೇಡ್ಕರ್ ಅವರು ಕಾನೂನು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದರು ಎಂದು ತಿಳಿಸಿದರು.
ಪ್ರಗತಿಪರರು ಎನಿಸಿಕೊಳ್ಳಲು ಹಲವರು ಅಂಬೇಡ್ಕರ್ ಬಗ್ಗೆ ಮಾತನಾಡುತ್ತಾರೆ. ಆದರೆ, ಪೂರ್ವಗ್ರಹಗಳನ್ನು ಬಿಟ್ಟು ಅಂಬೇಡ್ಕರ್ ವಿಚಾರಗಳನ್ನು ತಿಳಿದುಕೊಳ್ಳುವ ಮನಸ್ಥಿತಿ ಇರಬೇಕು. ದಲಿತರು, ಮಹಿಳೆಯರ ವಿಮೋಚನೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಅಧ್ಯಯನ ಮಾಡಿ ಅಂಬೇಡ್ಕರ್ ಮಾತನಾಡಿದ್ದಾರೆ ಎಂದ ಅವರು, ಮಹಿಳೆಯರ ರಕ್ಷಣೆಗಾಗಿ ಎಷ್ಟೇ ಕಾನೂನು ಇದ್ದರೂ ಅವುಗಳ ಅನುಷ್ಠಾನ ಆಗಬೇಕು. ಪರಿಪಾಲನೆ ಧೋರಣೆ ಬೆಳೆಯಬೇಕಿದೆ ಎಂದು ಹೇಳಿದರು.
ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಂಯೋಜನಾಧಿಕಾರಿ ಡಾ.ಎಸ್. ನರೇಂದ್ರಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಂಬೇಡ್ಕರ್ ಬಗ್ಗೆ ಅನರ್ಥ ಮಾಡಿಕೊಂಡಿವವರು, ಅವರಿಗೆ ಪೂಜೆ ಸಲ್ಲಿಸುತ್ತಿರುವವರು ಅಪಾಯಕಾರಿ. ಅಂಬೇಡ್ಕರ್ ವಿಚಾರವನ್ನು ಯುವ ಪೀಳಿಗೆ ತಿಳಿದುಕೊಂಡು, ಅವರ ವಿಚಾರಗಳನ್ನು ಅಂತರಂಗಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಮಹಿಳಾ ವಿಮೋಚನೆಗೆ ಅಂಬೇಡ್ಕರ್ ಕೊಡುಗೆ ಕುರಿತು ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಡಾ.ಬಿ.ಯು. ಸುಮಾ ಹಾಗೂ ಅಂಬೇಡ್ಕರ್ ಅವರ ಸಾಂಸ್ಕೃತಿಕ ಚಿಂತನೆಗಳ ಮಹತ್ವ ಕುರಿತು ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಅವರು ವಿಶೇಷ ಉಪನ್ಯಾಸ ನೀಡಿದರು.
ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಪ್ರೊ.ಎಂ. ಪುರುಷೋತ್ತಮ್ ಅಧ್ಯಕ್ಷತೆ ವಹಿಸಿದ್ದರು. ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಡಾ.ಎನ್.ಟಿ. ಕೃಷ್ಣಮೂರ್ತಿ, ಖಜಾಂಚಿ ಪ್ರೊ.ಎಂ. ನೇತ್ರಾವತಿ, ವಿದ್ಯಾರ್ಥಿ ಅಧ್ಯಕ್ಷೆ ಎಂ.ಕವನ, ಕಾರ್ಯದರ್ಶಿ ಪ್ರಿಯದರ್ಶಿನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.