ಬೋಗಯ್ಯನಹುಂಡಿಯಲ್ಲಿ ಬೊಗಸೆ ನೀರಿಗೂ ತತ್ವಾರ
ಗುಂಡ್ಲುಪೇಟೆ: ತಾಲೂಕಿನ ಬೋಗಯ್ಯನಹುಂಡಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ವಾರದಿಂದ ಹಾಹಾಕಾರ ಎದ್ದಿದೆ. ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹನಿ ನೀರಿಗಾಗಿ ಗ್ರಾಮದ ಜನರು ಪರಿತಪಿಸುವಂತಾಗಿದೆ.
ಗ್ರಾಮಕ್ಕೆ ನೀರು ಸರಬರಾಜಾಗುವ 4 ಕೊಳವೆ ಬಾವಿಯಲ್ಲಿ 3ರಲ್ಲಿ ನೀರು ಬತ್ತಿ ಹೋಗಿದ್ದು, ನೀರಿಗಾಗಿ ಸಂಕಟ ಪಡುವಂತಾಗಿದೆ. ಕೋಟೆಕೆರೆ ಗ್ರಾಪಂನ ವ್ಯಾಪ್ತಿಯ ಗ್ರಾಮದಲ್ಲಿ ಸುಮಾರು ಒಂದೂವರೆ ಸಾವಿರ ಜನಸಂಖ್ಯೆಯಿದೆ. ನೀರು ಬರುವ ಒಂದು ಕೊಳವೆ ಬಾವಿಯಲ್ಲಿ ಜನರಿಗೆ ನೀರು ಸಾಕಾಗುತ್ತಿಲ್ಲ.
ಗ್ರಾಮಾಂತರ ಪ್ರದೇಶದಲ್ಲಿ ವಿದ್ಯುತ್ ಸಮಸ್ಯೆ ಇದೆ. ವಿದ್ಯುತ್ ಬಂದಾಗ ರಾತ್ರಿ ಹಗಲೆನ್ನದೆ ಜನರು ದೂರದ ಜಮೀನುಗಳಿಗೆ ತೆರಳಿ ನೀರು ಶೇಖರಿಸುವುದು ಒಂದು ಸವಾಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅರಿವಿರಬೇಕಾದ ಸ್ಥಳೀಯ ಸಂಸ್ಥೆಗಳ ಜನ ಪ್ರತಿನಿಧಿಗಳೂ ಇತ್ತ ಗಮನಹರಿಸಿಲ್ಲ. ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕಾದ ಅಧಿಕಾರಿಗಳುಇಂಥ ಗಂಭೀರ ವಿಚಾರಕ್ಕೆ ಬಾರದಿರುವುದು ಈ ಭಾಗದ ಜನಪ್ರತಿನಿಧಿಗಳಿಗೆ ಅಧಿಕಾರಿಗಳ ಬಗ್ಗೆ ಹಿಡಿತವಿಲ್ಲ ಎಂಬುದು ಖಚಿತವಾದಂತಿದೆ.
ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡುವುದಾಗಿ ಹೇಳುತ್ತಿರುವ ಸಮಯದಲ್ಲಿ ಕುಡಿವ ನೀರು ಕೊಡಿ ಎಂದು ಗೋಗರೆಯುವಂತಾಗಿರುವುದು ಈ ಗ್ರಾಮದ ಜನರ ದುರಂತ ಎನ್ನುವಂತಾಗಿದೆ.
ಆಕ್ರೋಶ: ಈ ಭಾಗದ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳು ಸಮಸ್ಯೆಯ ಬಗ್ಗೆ ತಿಳಿದು ನೋಡದಿರುವ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಅಂತರ್ಜಲ ಕುಸಿಯಿತು ಎಂಬ ಮಾಹಿತಿ ಅರಿತು ಟ್ಯಾಂಕರ್ ಮೂಲಕವಾದರು ನೀರು ಕೊಡಿಸುವ ಕೆಲಸ ಮಾಡದಿರುವ ಅಧಿಕಾರಿಗಳ ಕ್ರಮವನ್ನು ಗ್ರಾಮಸ್ಥರು ಖಂಡಿಸಿದ್ದಾರೆ.
ಎಚ್ಚರಿಕೆ: ತಾಲೂಕು ಆಡಳಿತ ಇತ್ತ ಗಮನಹರಿಸ್ಲದಿದ್ದರೆ, ಸಮಸ್ಯೆ ಬಗೆಹರಿಸಲು ವಿಫಲವಾಗಿರುವ ಗ್ರಾಪಂ ವಿರುದ್ಧ ಮುತ್ತಿಗೆ ಹಾಕಿ ಪ್ರತಿಭಟಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

