ಯಡಳಮ್ಮ ರಥೋತ್ಸವ
ಭೇರ್ಯ: ತಾಲೂಕಿನ ಗಂಧನಹಳ್ಳಿಯಲ್ಲಿ ಯಡಳಮ್ಮನ ತಾಯಿಯ ರಥೋತ್ಸವ ಇತ್ತೀಚೆಗೆ ವಿಜೃಂಭಣೆಯಿಂದ ನೆರವೇರಿತು. ಯಡಳಮ್ಮ ತಾಯಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಮಹಿಳೆಯರು ತಂಬೀಟ್ ಆರತಿಯೊಂದಿಗೆ ಮೆರವಣಿಗೆಯಲ್ಲಿ ಗ್ರಾಮದಿಂದ ಮೂರು ಕಿ.ಮೀ ದೂರದ ಕಪ್ಪಡಿ ಕ್ಷೇತ್ರದ ಕಾವೇರಿ ನದಿಯ ದಡದಲ್ಲಿರುವ ಯಡಳಮ್ಮನವರ ದೇವಸ್ಥಾನಕ್ಕೆ ಬಂಡಿಯ ಮುಖಾಂತರ ಸಾಗಿ, ದೇವಸ್ಥಾನಕ್ಕೆ ಮೂರು ಸುತ್ತು ಮೆರವಣಿಗೆ ಮಾಡಿ ಹಣ್ಣು ಜವನವನ್ನು ನವದಂಪತಿ, ಮಹಿಳೆಯರು, ಯುವಕರು ಎಸೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಬೇಡಿಕೊಂಡರು. ಮಹಿಳೆಯರು, ಮಕ್ಕಳು ಬೆಂಕಿಯ ಕೊಂಡದಲ್ಲಿ ಹಾಯ್ದು ಯಡಳಮ್ಮ ತಾಯಿಗೆ ಭಕ್ತಿ ನಮನ ಅರ್ಪಿಸಿದರೆ, ರಥೋತ್ಸವಕ್ಕೆ ಮುನ್ನ ತಾಯಿಗೆ ಶಾವಿಗೆ ಪಾಯಸ ಎಡೆ ಅರ್ಪಿಸಿದರು.ರಥೋತ್ಸವದಲ್ಲಿ ಸುಮಾರು 15 ಸಾವಿರ ಭಕ್ತರು ಭಾಗವಹಿಸಿದ್ದರು. ಈ ರಥೋತ್ಸವದಲ್ಲಿ ತಾಲೂಕು ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ ದೇವರಹಟ್ಟಿ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್, ಜಿ.ಎನ್. ಮಲ್ಲೇಗೌಡ,ಜಿ.ಎಂ. ಹೇಮಂತ್, ಜಿ.ಎನ್. ರಘು, ಭಾಗ್ಯಮ್ಮ, ದದ್ದುರಾಮೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

