ಸಾಂಪ್ರದಾಯಿಕ ಉಡುಗೆ,ತೊಡುಗೆ ದಿನಾಚರಣೆ
ಚಾಮರಾಜನಗರ: ನಗರದ ಮೈಸೂರು ವಿವಿ ಸ್ನಾತಕೋತ್ತರ ಉಪ ಕೇಂದ್ರದಲ್ಲಿ ಪ್ರಥಮ ಮತ್ತು ಅಂತಿಮ ಎಂಬಿಎ ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಉಡುಗೆ-ತೊಡುಗೆ ದಿನಾಚರಣೆ ಆಚರಿಸಿದರು.
ವಿದ್ಯಾರ್ಥಿಗಳೇ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಕೇಂದ್ರದ ನಿರ್ದೇಶಕ ಪ್ರೊ. ಶಿವಬಸವಯ್ಯ ಮಾತನಾಡಿ, ಭಾರತ ದೇಶ ವಿಭಿನ್ನ ಸಂಸ್ಕೃತಿಯ ದೇಶ. 31 ರಾಜ್ಯಗಳಲ್ಲಿ ವಿವಿಧ ಭಾಷೆ, ಸಂಸ್ಕೃತಿ ಇದೆ. ಇದು ಜಗತ್ತಿನ ಯಾವ ಭಾಗದಲ್ಲೂ ಕಂಡು ಬರುವುದಿಲ್ಲ.
ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರಗಳಿಗೆ ಮಹತ್ವವಿದೆ. ಇಂದು ಪಾಶ್ಚಾತ್ಯ ಸಂಸ್ಕೃತಿಗೆ ಯುವಕ-ಯುವತಿಯರು ಮಾರು ಹೋಗುತ್ತಿರುವುದು ವಿಪರ್ಯಾಸ. ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸುವ ಜವಾಬ್ದಾರಿ ನಮ್ಮದು. ಇಂತಹ ದಿನಾಚರಣೆ ಆಚರಿಸುತ್ತಿರುವುದು ಅರ್ಥ ಪೂರ್ಣವಾಗಿದೆ ಎಂದು ಮೆಚ್ಚುಕೆ ಸೂಚಿಸಿದರು.
ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ವಾರಕ್ಕೆರಡು ಬಾರಿ ದೇಶಿಯ ಉಡುಗೆಗಳನ್ನು ತೊಟ್ಟು ಬರುವಂತೆ ಸೂಚಿಸಲಾಗಿದೆ. ಇಲ್ಲಿ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.
ವಿದ್ಯಾರ್ಥಿನಿ ಶೃತಿ ಮಾತನಾಡಿ ದಿನ ನಿತ್ಯ ಕಾಲೇಜಿಗೆ ಜೀನ್ಸ್, ಚೂಡಿದಾರ್ ಹಾಕಿಕೊಂಡು ಬರುತ್ತಿದ್ದೇವು. ಆದರೆ ವಾರದಲ್ಲೆರಡು ದಿನ ಸಾಂಪ್ರದಾಯಿಕ ಉಡುಗೆ ಹಾಕಿಕೊಂಡು ಬರುವುದರಿಂದ ಸಂತೋಷವಾಗುತ್ತಿದೆ. ಭಾರತೀಯ ಸಂಸ್ಕೃತಿ ಬಿಂಬಿಸುವ ಸೀರೆ, ಕುಪ್ಪಸ ತೊಟ್ಟು ಬರುವುದು ಸಂಸ್ಕೃತಿಯನ್ನು ಉಳಿಸುವ ನಿಟ್ಟನಲ್ಲಿ ಕರ್ತವ್ಯವೆಂದೆ ಭಾವಿಸುತ್ತೇನೆ ಎಂದು ಹೇಳಿದರು.
ವಿದ್ಯಾರ್ಥಿ ರಿತೇಶ್ ಹಾಗೂ ಪ್ರತಾಪ್ ಮಾತನಾಡಿ, ಇಂದು ನಮ್ಮ ಕಾಲೇಜಿನಲ್ಲಿ ಹಬ್ಬದ ವಾತಾವರಣವಿದೆ ಏಕೆಂದರೆ ಎಲ್ಲಾ ವಿದ್ಯಾರ್ಥಿಗಳು ಬಿಳಿ ಷರ್ಟು, ಬಿಳಿ ಪಂಚೆ ತೊಟ್ಟು ಬಂದಿದ್ದೇವೆ, ನಮಗೆಲ್ಲ ಖುಷಿಯಾಗಿದೆ ಎಂದರು. ಉಪನ್ಯಾಸಕಿ ಸುಪ್ರಿಯ, ಅಂಬಿಕಾ, ಇನ್ನಿತರ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

