ಮೈಸೂರು

ದೇಸಿ ಆಟದ ನೆನಪಿಗೆ ಜಾರಿದ ಸಿಎಂ

Published On :

ಮೈಸೂರು: ನಂಜನಗೂಡು ತಾ. ಸುತ್ತೂರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ದನಗಳನ್ನು ತೊಳೆದು, ಬಣ್ಣ, ಬಣ್ಣಗಳಿಂದ ಸಿಂಗರಿಸಿ ಸಂಜೆ ವೇಳೆ ಕಿಚ್ಚು ಹಾಯಿಸುತ್ತಿದ್ದುದು, ಯುಗಾದಿ ಹಬ್ಬದಲ್ಲಿ ದಿನವಿಡಿ ದೇಸಿ ಆಟ ಆಡುತ್ತಿದ್ದುದು, ಅಮರಕೋಶದ ಶ್ಲೋಕಗಳನ್ನು ಉಚ್ಚರಿಸಲು ನಾಲಗೆ ಹೊರಳದೇ ಮೇಷ್ಟ್ರು ಹೊಡೆದಿದ್ದನ್ನು ಹೇಳಿಕೊಂಡು ನಕ್ಕರು. ಸಭಿಕರನ್ನು ನಗಿಸಿದರು. ನಾನು ಸಮಾಜವಾದಿ. ಲೋಹಿಯಾ ಅವರು ಕ್ರಿಕೆಟ್ ಅನ್ನು 11 ಮೂರ್ಖರು ಆಡುವ, 10 ಸಾವಿರ ಅತಿಮೂರ್ಖರು ನೋಡುವ ಆಟ ಎಂದು ಟೀಕಿಸುತ್ತಿದ್ದರು. ಆದರೂ ನಾನು ಈಗಲೂ ಕ್ರಿಕೆಟ್ ನೋಡುತ್ತೇನೆ. ಹಳ್ಳಿ ಕಡೆ ಈಗ ಗೋಲಿ, ಗಿಲ್ಲಿದಾಂಡು, ಬುಗುರಿ ಕೆತ್ತೋದು, ದಾರ ಸುತ್ತೋದು ಬರಲ್ಲ. ಹಳ್ಳಿಗೆ ಹೋದ್ರೆ ಕ್ರಿಕೆಟ್ ಬಾಲು ತಗಬೇಕು ಕಾಸು ಕೊಡಣ್ಣ ಅಂತಾ ಹುಡಗ್ರು ಕೇಳ್ತವೆ ಎಂದರು. ಸಂಕ್ರಾಂತಿ ಹಬ್ಬದಲ್ಲಿ ಕಿಚ್ಚು ಹಾಯಿಸಲು ಬೆಂಕಿ ಹಾಕಿ ದನಗಳನ್ನು ಮುನ್ನುಗ್ಗಿಸುತ್ತಿದ್ದರು. ಈಗ ಯಾರಾದ್ರು ಮುಂದಕ್ಕೆ ಹೋಗ್ತಾನೆ ಅಂದ್ರೆ ಹಿಂದಕ್ಕೆ ಎಳೆಯುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು. ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಇವನಾರವ, ಇವನಾರವ..., ಕುಲಕುಲವೆಂದು... ಸಾಲುಗಳನ್ನು ಉಲ್ಲೇಖಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.