ಶಾಲಾ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ
ಸರಗೂರು: ಸಮೀಪದ ಬಿ.ಮಟಕೆರೆ ಗ್ರಾಮದಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್ಎಂಎಎ) ಯೋಜನೆಯಲ್ಲಿ ಮಂಜೂರಾಗಿರುವ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಸಂಸದ ಆರ್. ಧ್ರುವನಾರಾಯಣ್ ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು, ನಿಮ್ಮ ಶಾಲೆಗೆ ನಾಲ್ಕು ಕೊಠಡಿಗಳನ್ನು ನಿರ್ಮಿಸುವುದಕ್ಕೆ 28.32 ಲಕ್ಷ ಹಾಗೂ ಇದೇ ಯೋಜನೆಯಲ್ಲಿ ಕುಡಿಯುವ ನೀರು ಶೌಚಾಲಯಕ್ಕೆ 2.14 ಲಕ್ಷ ಮಂಜೂರು ಮಾಡಿಸಿದ್ದೇವೆ. ಇಲ್ಲಿ ಮೂಲ ಸೌಕರ್ಯ ಕುಂಠಿತವಾಗಿದೆ. ಪ್ರಾಣಿಗಳ ಹಾವಳಿ ಇದೆ. ಈ ಭಾಗಗಳಿಗೆ ಸೋಲಾರ್ ಫೆನ್ಸಿಂಗ್ ನಿರ್ಮಾಣ ಮಾಡಿಸಬೇಕು. ನಮ್ಮಲ್ಲಿ ಹುಲಿ ಹಾಗೂ ಆನೆಗಳು ಅತಿ ಹೆಚ್ಚಾಗಿರುವುದರಿಂದ ಹೆಚ್ಚಿನ ಭದ್ರತೆ ನೀಡಲು ಕೆಲವು ಯೋಜನೆ ರೂಪಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ಹುಲಿ ದಾಳಿಗೆ ತುತ್ತಾದವರ ಕುಟುಂಬಗಳಿಗೆ ತಲಾ 1 ಲಕ್ಷ ಹಾಗೂ ಗಾಯಗೊಂಡ ಚಿಕ್ಕನಿಗೆ 5 ಸಾವಿರ ಚೆಕ್ ವಿತರಿಸಿದರು.
ಗ್ರಾಮದ ಮುಖಂಡ ಎಂ.ಎನ್. ಭೀಮರಾಜು ಜಿಪಂ ಸದಸ್ಯೆ ಪದ್ಮಾ ಬಸವರಾಜು, ಎಐಸಿಸಿ ಸದಸ್ಯರಾದ ಡಿ. ಸುಂದರದಾಸ್, ಗ್ರಾಪಂ ಅಧ್ಯಕ್ಷೆ ಚಿಕ್ಕಬೊಮ್ಮ, ಉಫಾಧ್ಯಕ್ಷೆ ಸವಿತಾ ಸಿದ್ದಪ್ಪ, ತಾಪಂ ಅಧ್ಯಕ್ಷೆ ಚಂದ್ರಮ್ಮ, ಸದಸ್ಯ ರವಿಕುಮಾರ್, ಮುಖಂಡರಾದ ಬಸವರಾಜು, ತಮ್ಮಣ್ಣೇಗೌಡ, ಎಂ.ಕೆ. ಹರಿದಾಸ್, ಎಂ.ಎಸ್. ಜಯರಾಂ, ಇಒ ಕೆ ಲಿಂಗರಾಜು, ಗ್ರಾಪಂ ಸದಸ್ಯರಾದ ಉದಯಕುಮಾರ್, ಸಿದ್ದಪ್ಪ, ಸರಗೂರು ಎಸ್.ಎಲ್. ರಾಜಣ್ಣ, ಮಹದೇವಪ್ಪ ಕುರ್ಣೆಗಾಲ, ಶಂಭುಲಿಂಗ ನಾಯ್ಕ, ಮೊಳೆಯೂರು ವಲಯ ಅರಣ್ಯಾಧಿಕಾರಿಯಾದ ಶಂಕರೇಗೌಡ ಮತ್ತು ಪಿ. ರವಿ, ಬಿಇಒ ಎಂ. ಉದಯಕುಮಾರ್, ಡಾ. ಚಂದ್ರಶೇಖರ್ ಇದ್ದರು.
47.16 ಲಕ್ಷದಲ್ಲಿ ಏಳು ಕೊಠಡಿ
ಸಮೀಪದ ಸಾಗರೆ ಗ್ರಾಮದಲ್ಲಿ ಆರ್ಎಂಎಸ್ಎ ಯೋಜನೆ ಅಡಿಯಲ್ಲಿ ಸರ್ಕಾರಿ ಪ್ರೌಢಶಾಲೆಯ ನೂತನ ಏಳು ಕೊಠಡಿಗಳ 47.16 ಲಕ್ಷ ಹಾಗೂ ಕುಡಿಯುವ ನೀರು ಶೌಚಾಲಯ 1.60 ಲಕ್ಷ ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಸಂಸದ ಆರ್. ಧ್ರುವನಾರಾಯಣ್ ಗುದ್ದಲಿಪೂಜೆ ನೆರವೇರಿಸಿದರು. ಜಿಪಂ ಸದಸ್ಯೆ ಭಾಗ್ಯಲಕ್ಷ್ಮಿ ನಿಂಗರಾಜು, ತಾಪಂ ಸದಸ್ಯ ಸುನಂದಕುಮಾರ್, ಸಾಗರೆ ಗ್ರಾಪಂ ಅಧ್ಯಕ್ಷೆ ಸಣ್ಣಮ್ಮ ಸೋಮನಾಯ್ಕ, ಉಪಾದ್ಯಕ್ಷೆ ಕಮಲಮ್ಮ, ಮುಖ್ಯ ಶಿಕ್ಷಕ ನಿಂಗಣ್ಣ, ಪಿಡಿಒ ಕೃಷ್ಣಮೂರ್ತಿ, ಶಿಕ್ಷಕಿ ಮಂಜುಳಾ, ಜಯರಾಮ್, ಧನಂಜಯ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

