ವಾಹನ ಚಾಲಕರ ಸಂಘದ ಕಚೇರಿ ಚಾಲನೆ
ಸರಗೂರು: ನಿಮ್ಮ ನಿತ್ಯ ಶ್ರಮದ ಕೆಲಸದಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗಿದೆ. ಸಾರ್ವಜನಿಕ ಕೆಲಸಕ್ಕೆ ಕಾರ್ಯಾಲಯ ಅವಶ್ಯಕವಾಗಿದ್ದು, ಪ್ರಯಾಣಿಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ವ್ಯವಹರಿಸುವಂತೆ ಶಾಸಕ ಎಸ್. ಚಿಕ್ಕಮಾದು ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಮುಂಭಾಗ ನಿರ್ಮಿಸಿರುವ ವಾಹನ ಚಾಲಕರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ವಾಹನ ಚಾಲಕರು 24 ಗಂಟೆ ಕಾರ್ಯನಿರ್ವಹಿಸುತ್ತೀರಿ. ನಿಮ್ಮ ಜೀವನದ ಜೊತೆಗೆ ಇತರೆ ಜೀವನ ನಿಮ್ಮ ಮೇಲೆ ಇದೆ. ಅಂತಹ ಕಠಿಣ ವೃತ್ತಿ ನಿಮ್ಮದು, ಒಂದು ಕ್ಷಣ ನೀವು ಮೈಮರೆತರೆ ಏನಾದರು ಆಗಬಹುದು. ಚಾಲನೆ ವೇಳೆಯಲ್ಲಿ ದುಶ್ಚಟದಿಂದ ದೂರ ಇರಬೇಕು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಕೂಡದು. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮೇಲೆ ಅವಲಂಭಿಸಿರುತ್ತಾರೆ. ಹೀಗಾಗಿ ಚಾಲನೆ ಮಾಡುವಾಗ ಜಾಗೃತರಾಗಿ ವಾಹನ ಚಾಲನೆ ಮಾಡುವಂತೆ ಸಲಹೆ ನೀಡಿದರು.
ಸರಗೂರು ಎಸ್ಐ ಅರುಣ್ಕುಮಾರ್ ಮಾತನಾಡಿ, ರಸ್ತೆಯಲ್ಲಿ ಪಾದಚಾರಿಗಳು ಸಂಚಾರ ಮಾಡುವ ವೇಳೆಯಲ್ಲಿ ನಿಧಾನವಾಗಿ ಚಾಲನೆ ಮಾಡಬೇಕು. ಕೆಎಸ್ಆರ್ಟಿಸಿ ಅವರ ಜೊತೆಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಿದರು. ಸರ್ವೆ ರಾಜಣ್ಣ ಟ್ರಸ್ಟ್ ಅಧ್ಯಕ್ಷ ಎಸ್.ವಿ. ವೆಂಕಟೇಶ್ ಮಾತನಾಡಿದರು. ಸರಗೂರು ವಾಹನ ಚಾಲಕರ ಸಂಘದ ನಾಮಫಲಕವನ್ನು ಜೆಡಿಎಸ್ ಮುಖಂಡ ಎಂ.ಸಿ. ದೊಡ್ಡನಾಯಕ ಅನಾವರಣಗೊಳಿಸಿದರು. ಪಪಂ ಅಧ್ಯಕ್ಷೆ ಪದ್ಮಾ ಶ್ರೀನಿವಾಸ್, ಸದಸ್ಯೆ ಬೆಳಗಮ್ಮ ರಂಗಯ್ಯ, ರೂಪನೇಮೀಶ್, ನಾಗರಾಜ ರಾಮ, ಮಾಜಿ ಸದಸ್ಯ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಕೆ.ಚಿಕ್ಕವೀರನಾಯಕ, ಪಿ.ರವಿ, ಚಾ. ನಂಜುಂಡಮೂರ್ತಿ, ವಾಹನ ಚಾಲಕ ಸಂಘದ ಅಧ್ಯಕ್ಷ ಲಿಂಗರಾಜು, ಹ್ಯಾಂಡ್ಪೋಸ್ಟ್ ವಾಹನ ಚಾಲಕ ಸಂಘದ ಅಧ್ಯಕ್ಷ ಕಾಳಸ್ವಾಮಿ, ಕಾಂಗ್ರೆಸ್ ಮುಖಂಡ ಬಸಪ್ಪ, ರವಿಕುಮಾರ್, ವಾಹನ ಚಾಲಕ ಸಂಘದ ಮಾಜಿ ಅಧ್ಯಕ್ಷ ಶಶಿ, ನರಸಿಂಹೇಗೌಡ, ಅಬ್ಬಾಸ್, ಚಿಕ್ಕಣ್ಣ, ಎಸ್.ಕೆ. ಮುಕುಂದರಾಜು, ನಂಜಾಚಾರಿ, ಎಸ್.ಟಿ. ರವಿ, ಎಸ್.ಆರ್. ಜಗದೀಶ್, ವೆಂಕಟೇಶ್ ಹಾಗೂ ವಾಹನ ಚಾಲಕ ಸಂಘದ ಸದಸ್ಯರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

