ಮೈಸೂರು

ಕೃಷ್ಣಮೂರ್ತಿ ಹೆಸರಲ್ಲಿ ಕಲಾಭವನ ನಿರ್ಮಿಸಿ

Published On :

ಹುಣಸೂರು: ಕಲೆ ಸಾಹಿತ್ಯದ ತವರೂರಾಗಿರುವ ಹುಣಸೂರಿನಲ್ಲಿ ಕನ್ನಡ ಚಲನಚಿತ್ರದ ದಿಗ್ಗಜ ಹುಣಸೂರು ಕೃಷ್ಣಮೂರ್ತಿಯವರ ಹೆಸರಿನಲ್ಲಿ ಕಲಾ ಭವನವೊಂದನ್ನು ನಿರ್ಮಿಸಬೇಕೆಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಆಗ್ರಹಿಸಿದರು. ಸತ್ಯ ಎಂಎಎಸ್ ಫೌಂಡೇಶನ್ ವತಿಯಿಂದ ಕನ್ನಡ ಚಲನಚಿತ್ರರಂಗದ ಹೆಸರಾಂತ ನಿರ್ದೇಶಕ ದಿ. ಹುಣಸೂರು ಕೃಷ್ಣಮೂರ್ತಿಯವರ ಸ್ಮರಣಾರ್ಥ ಪಟ್ಟಣದ ಪುರಸಭಾ ಮೈದಾನದಲ್ಲಿ ಆಯೋಜಿಸಿದ್ದ ಕಲಾಸಂಗಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಅಧಿಕಾರಿ ನಡೆಸಿದ ಜನಪ್ರತಿನಿಧಿಗಳು ತಮ್ಮ ಹುಟ್ಟುಹಬ್ಬದಂದು ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಆದರೆ, ಎಲೆಮರೆಕಾಯಿಯಂತೆ ಇರುವ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಕಲಾ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಮಾಡುತ್ತಿಲ್ಲ. ರಾಜ್ಯಾದ್ಯಂತ ಹುಣಸೂರಿಗೆ ಹೆಸರನ್ನು ತಂದುಕೊಟ್ಟ ಹುಣಸೂರು ಕೃಷ್ಣಮೂರ್ತಿಯವರನ್ನು ನೆನೆಯುವ ಕನಿಷ್ಠ ಸೌಜನ್ಯವನ್ನೂ ನಾವು ತೋರುತ್ತಿಲ್ಲವೆಂದು ವಿಷಾದಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹುಣಸೂರು ಕೃಷ್ಣಮೂರ್ತಿಯವರ ಹಿರಿಯಪುತ್ರ, ಬೆಂಗಳೂರಿನ ರಾಮಯ್ಯ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ನರಹರಿ ಮಾತನಾಡಿ, ಕಲೆ ಎಲ್ಲರನ್ನೂ ಆಕರ್ಷಿಸುತ್ತದೆ. ಆದರೆ ಕೆಲವೇ ಮಂದಿಗೆ ಮಾತ್ರ ಒಲಿಯುತ್ತದೆ. ನಮ್ಮ ತಂದೆಯವರು ಕನ್ನಡಭಾಷೆಗೆ ನೀಡಿದ ಕೊಡುಗೆ ಇಂದಿಗೂ ಜನರು ನಮ್ಮನ್ನು ಗುರುತಿಸುವಂತಾಗಿದೆ ಎಂದು ಭಾವುಕರಾಗಿ ನುಡಿದರು.
ಕಿರುತೆರೆ ಕಲಾವಿದೆ ಪದ್ಮಕಲಾ, ಕೊಳಲುವಾದನ ಸಹೋದರರಾದ ಚಿಲ್ಕುಂದ ಶೇಷಮೂರ್ತಿ, ನಾಗರಾಜ ಮೂರ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ನಟ ಪ್ರೇಮ್ರಾಜ್, ರತ್ನಪುರಿ ಮಂಜು, ಹಿರಿಯ ಕಲಾವಿದ ಕುಮಾರ್ ಅರಸೇಗೌಡ, ಮಂಗಳಮುಖಿಯರಾದ ಹಿರಿಕ್ಯಾತನಹಳ್ಳಿ ಕೃಷ್ಣ, ಕಲ್ಕುಣಿಕೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.