ಮೈಸೂರು

ವಿಶ್ವಕರ್ಮರಿಗೆ ರಾಜಕೀಯ ಸ್ಥಾನ ದೊರಕಲಿ: ಜಿಟಿಡಿ

Published On :

ಮೈಸೂರು: ವಿಶ್ವಕರ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ ಸ್ಥಾನಮಾನ ದೊರಕಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಮೈಸೂರು ಜಿಲ್ಲಾ ವಿಶ್ವಕರ್ಮ ಯುವ ಜಾಗೃತಿ ವೇದಿಕೆಯು ರಾಮಾನುಜ ರಸ್ತೆಯ ವೀರಶೈವ ಅನಾಥಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ಯಾಲೆಂಡರ್ ಬಿಡುಗಡೆ ಮತ್ತು ವಿಮಾ ಬಾಂಡ್ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿಶ್ವಕರ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸಂಸದರು, ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಆಯ್ಕೆ ಆಗುತ್ತಿಲ್ಲ. ನಿಮಗೆ ಸಿಗಬೇಕಾದ ರಾಜಕೀಯ ಸವಲತ್ತನ್ನು ಬಲಿಷ್ಠ ಸಮುದಾಯಗಳು ಪಡೆದುಕೊಳ್ಳುತ್ತಿವೆ. ಪ್ರತಿಯೊಬ್ಬರು ಸಂಘಟಿತರಾಗಿ ನಿಮ್ಮ ಹಕ್ಕು ಪಡೆಯಬೇಕು. ರಘು ಆಚಾರ್ ಅವರನ್ನು ರಾಜಕೀಯವಾಗಿ ತುಳಿಯಲು ಕೆಲವರು ಟಿಕೆಟ್ ತಪ್ಪಿಸಿದರು. ಆದರೆ ಚಿತ್ರದುರ್ಗದಲ್ಲಿ ತಮ್ಮ ಸ್ವಂತ ಬಲದಿಂದ ಅವರು ಜಯಗಳಿಸಿದ್ದಾರೆ ಎಂದು ಹೇಳಿದರು.
ತಮ್ಮದು ಪ್ರತಿಭಾವಂತ ಸಮಾಜ. ತಾವು ಎಲ್ಲಾ ಸಮಾಜದ ಪ್ರೀತಿ, ವಿಶ್ವಾಸ ಗಳಿಸಿದ್ದೀರಿ. ಅಮರಶಿಲ್ಪಿ ಜಕಣಾಚಾರಿಯಿಂದ ಇಲ್ಲಿಯವರೆಗೆ ತಾವು ಗುಡಿ, ಗೋಪುರ, ಮಠ, ಮಂದಿರ ನಿರ್ಮಿಸಿದ ಕೀರ್ತಿ ತಮ್ಮ ಸಮುದಾಯಕ್ಕೆ ಸಲ್ಲುತ್ತದೆ ಎಂದರು.
ಅರೇಮಾದನಹಳ್ಳಿ ವಿಶ್ವಕರ್ಮ ಪೀಠದ ಶ್ರೀ ಗುರುಶಿವಸುಜ್ಞಾನಮೂರ್ತಿ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ವೇದಿಕೆ ಗೌರವಾಧ್ಯಕ್ಷ ಎನ್. ನಂದಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಜಿ. ರಘು ಆಚಾರ್, ಗಾಯತ್ರಿ ಸಿನೆಮಾ ಮಂದಿರದ ಮಾಲೀಕ ಎಂ.ಟಿ. ರಾಮಚಂದ್ರ, ವಿಶ್ವಕರ್ಮ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಟಿ.ನಾಗರಾಜು, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಸಿ. ಹುಚ್ಚಪ್ಪಾಚಾರ್, ಚಿನ್ನಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಸಿ.ವಿ.ಆರ್. ಜಯಕುಮಾರ್, ಜಿಲ್ಲಾಧ್ಯಕ್ಷ ಸಿ.ಟಿ. ಆಚಾರ್, ವೇದಿಕೆ ಅಧ್ಯಕ್ಷ ಕೆ. ಕೆಂಡಗಣ್ಣ, ಮುಖಂಡರಾದ ಕೆ. ರೇವಣ್ಣ, ಪ್ರಭಾಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.