ಪಿರಿಯಾಪಟ್ಟಣ ತಾ. ರೈತರಿಗೆ ರು. 128 ಕೋಟಿ ಸಾಲ: ನರೇಂದ್ರ
ಪಿರಿಯಾಪಟ್ಟಣ: ತಾಲೂಕಿನ ರೈತರಿಗೆ 128.54 ಕೋಟಿ ಸಾಲ ನೀಡಲಾಗಿದೆ ಎಂದು ಹನೂರು ಶಾಸಕ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ನರೇಂದ್ರ ತಿಳಿಸಿದರು.
ತಾಲೂಕಿನ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ನಿರ್ದೇಶಕರು ಪಟ್ಟಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ತಂಬಾಕು ಬೆಳೆಯನ್ನೇ ರೈತರು ಅವಲಂಭಿಸಿಕೊಂಡಿರುವುದರಿಂದ ಸಹಕಾರ ಸಂಘವು ಇಲ್ಲಿಯ ರೈತರಿಗೆ ಹೆಚ್ಚಿನ ಸಾಲವನ್ನು ನೀಡಿದೆ ಎಂದರು.
ಮೈಸೂರು- ಚಾಮರಾಜನಗರ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಬ್ಯಾಂಕಿನಿಂದ 257 ಕೋಟಿ ರು.ಗಳ ಸಾಲ ನೀಡಲಾಗಿದೆ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರಿಗೆ ಹೆಚ್ಚಿನ ರೀತಿಯಲ್ಲಿ ಸಾಲ ನೀಡಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು. ಸರ್ಕಾರದ ಸಾಲಮನ್ನಾ ಯೋಜನೆಯಲ್ಲಿ 17.6 ಕೋಟಿ ರು. ಮನ್ನಾ ಆಗಿದೆ ಎಂದು ಮಾಹಿತಿ ನೀಡಿದರು.
ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಅತ್ತಹರ್ ಮತೀನ್ ಮಾತನಾಡಿ, ಕಳೆದ 25 ವರ್ಷಗಳಿಂದ ಸಹಕಾರ ಬ್ಯಾಂಕಿನ ಷೇರು ಹಣವೇ 40 ಕೋಟಿ ಇದೆ. ಜಿಲ್ಲಾ ಬ್ಯಾಂಕಿನ ಲೆಕ್ಕಪರಿಶೀಲನೆ ಆದ ಮೇಲೆ ಆದಾಯವನ್ನು ಷೇರುದಾರರಿಗೆ ನೀಡಬೇಕಾದ ಹಣವನ್ನು ಇನ್ನು ನೀಡಿಲ್ಲ ಆರೋಪಿಸಿದರು.
ವ್ಯವಸ್ಥಾಪಕ ನಿರ್ದೇಶಕ ಗುರುಸ್ವಾಮಿ, ಎನ್.ಎಸ್. ವಿರೂಪಾಕ್ಷ, ಮಾಜಿ ನಿರ್ದೇಶಕ ಈಚೂರು ಪಾಂಡು, ಎಂಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ದೇವೇಗೌಡ, ನಂದಿನಾಥಪುರ ಸೊಸೈಟಿಯ ವ್ಯವಸ್ಥಾಪಕ ಎಚ್.ಡಿ. ರಾಜೇಂದ್ರ, ಎನ್.ವಿ. ಸುಕುಮಾರ್, ಶೇಖರ್, ರಮೇಶ್, ಮುತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಅಜಿತ್ಕುಮಾರ್, ಕಂಪಲಾಪುರದ ಸಂಘದ ಸಿಇಒ ರಾಮಚಂದ್ರು, ಸತೀಶ್, ಎಸ್.ಎಂ. ಪ್ರೇಂಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

