ಮೈಸೂರು

ನಮೋ ಟೀ ಸ್ಟಾಲ್ ಉದ್ಘಾಟನೆ: 1 ರು.ಗೆ ಒಂದು ಟೀ ಮಾರಾಟ

Published On :

ಮೈಸೂರು: ನಗರ ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಸಂಚಾರಿ ನಮೋ (ನರೇಂದ್ರ ಮೋದಿ) ಟೀ ಸ್ಟಾಲ್ ಅನ್ನು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಾಜಿ ಸಚಿವ ಎಸ್.ಎ. ರಾಮದಾಸ್ ಉದ್ಘಾಟಿಸಿದರು.ನಂತರ ಮಾತನಾಡಿದ ರಾಮದಾಸ್, ನಮ್ಮ ದೇಶದಲ್ಲಿ ಟೀ ಮಾರುವ ವ್ಯಕ್ತಿಯೂ ಸಹ ಪ್ರಧಾನಮಂತ್ರಿ ಆಗಬಹುದೆಂಬುದನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿ ನಮೋ ಟೀ ಸ್ಟಾಲ್ ಆರಂಭಿಸಲಾಗಿದೆ ಎಂದರು.
ನಗರದ 65 ವಾರ್ಡ್‌ಗಳಲ್ಲೂ ಈ ನಮೋ ಟೀ ಸ್ಟಾಲ್ ವಾಹನವು ಸಂಚರಿಸಲಿದೆ. ಭಾರತೀಯ ಸಂಸ್ಕೃತಿ, ದೇಶದ ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ, ಒಂದೇ ಭಾರತವು ಎಂಬ ಭಾವನೆ ಜನರಲ್ಲಿ ಮೂಡಿಸಲು ನಮೋ ಟೀ ಸ್ಟಾಲ್ ಮೂಲಕ ಕರಪತ್ರ ವಿತರಿಸಲಾಗುತ್ತದೆ. ನಮೋ ಟೀ ಸ್ಟಾಲ್‌ನಲ್ಲಿ 1 ರು.ಗೆ ಒಂದು ಟೀ ನೀಡುವ ವ್ಯವಸ್ಥೆ ಮಾಡಲಾಗಿದೆ. ಚುನಾವಣಾ ನೀತಿ ಸಂಹಿತೆ ಘೋಷಣೆ ಆಗುವವರೆಗೂ ಈ ಟೀ ಸ್ಟಾಲ್ ನಡೆಸಲಾಗುವುದು ಎಂದು ತಿಳಿಸಿದರು. ಬಿಜೆಪಿ ನಗರಾಧ್ಯಕ್ಷ ಇ. ಮಾರುತಿರಾವ್ ಪವಾರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪಗೌಡ, ಯಶಸ್ವಿನಿ ಸೋಮಶೇಖರ್, ಸೋಮಸುಂದರ್, ಸಂಘಟನಾ ಪ್ರಧಾನ ಕಾರ್ಯದರ್ಶಿ ಶ್ರೀವತ್ಸ, ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ,  ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್, ಸ್ಲಂಮೋರ್ಚಾ ಅಧ್ಯಕ್ಷ ಎಲ್. ನಾಗೇಂದ್ರ, ಯುವ ಮೋರ್ಚಾ ರಾಜ್ಯ ಕಾರ್ಯಕಾರಿ ಸದಸ್ಯ ಎಲ್. ಜಗದೀಶ್, ನಗರಾಧ್ಯಕ್ಷ ಕೆ. ದೇವರಾಜ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.