ಮೈಸೂರು

ಕಳಪೆ ಕಾಮಗಾರಿ ಖಂಡಿಸಿ ಪ್ರತಿಭಟನೆ

Published On :

ಎಚ್.ಡಿ. ಕೋಟೆ: ತಾಲೂಕಿನ ಭೀಮನಹಳ್ಳಿಯಿಂದ ಸರಗೂರಿನವರೆಗೆ ನಡೆಯುತ್ತಿದ್ದ ಕಾಮಗಾರಿ ಅರ್ಧಕ್ಕೆ ನಿಂತಿರುವುದನ್ನು ಖಂಡಿಸಿ ಹಾಗೂ ಈಗ ನಡೆದಿರುವ ಕಾಮಗಾರಿ ಕಳಪೆಯಾಗಿರುವುದನ್ನು ವಿರೋಧಿಸಿ ಕರವೇ ಕಾರ್ಯಕರ್ತರು ಸೋಮವಾರ ತಾಲೂಕಿನ ಹ್ಯಾಂಡ್‌ಪೋಸ್ಟ್ ವೃತ್ತದ ಬಳಿ ರಸ್ತೆ ತಡೆ ನಡೆಸಿದರು.
ತಾಲೂಕಿನ ಭೀಮನಹಳ್ಳಿಯಿಂದ ಶಾಂತಿಪುರಕ್ಕೆ ಡಾಂಬರೀಕರಣ ಮಾಡಿದ್ದು, ಈ ಕಾಮಗಾರಿ ಕಳಪೆಯಾಗಿದೆ. ಅಲ್ಲದೇ ರಸ್ತೆ ಕಿರಿದಾಗಿದೆ. ಈ ಕೂಡಲೇ ಇದನ್ನು ಪರಿಶೀಲಿಸಿ ಲೋಕಾಯುಕ್ತ ತನಿಖೆಗೆ ವಹಿಸಿಬೇಕು ಎಂದು ಆಗ್ರಹಿಸಿದರು.
ಹ್ಯಾಂಡ್‌ಪೋಸ್ಟ್‌ನಿಂದ ಸರಗೂರಿನವರಗೆ ರಸ್ತೆ ಕಾಮಗಾರಿಯ ನೆಪದಲ್ಲಿ ಇದ್ದ ರಸ್ತೆಯನ್ನು ಅಗೆದಿದ್ದಾರೆ. ಅಗೆದ ರಸ್ತೆಯನ್ನು ಇನ್ನೂ ಡಾಂಬರೀಕರಣ ಮಾಡದೇ ಗುತ್ತಿಗೆದಾರ ನಾಪತ್ತೆಯಾಗಿದ್ದಾನೆ. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಅಧ್ಯಕ್ಷ ನಟರಾಜು, ಟೌನ್ ಅಧ್ಯಕ್ಷ ಪ್ರಸಾದ್, ಉಪಾಧ್ಯಕ್ಷ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಮಹೇಶ್, ಸಂಚಾಲಕ, ರಮೇಶ್, ರಾಜಾಚಾರಿ, ರವಿಗೌಡ, ಚಂದ್ರಶೇಖರ್, ವಿನೋದ್, ವಿಜಯಕುಮಾರ್, ಪ್ರಸನ್ನ, ಎ.ಎನ್. ನಂದೀಶ್, ಇನಾಯತ್ ಪಾಷ, ಚುಂಚೇಗೌಡ, ರಾಜು ಇದ್ದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಿಗೆ ಸನ್ಮಾನ
ಭೇರ್ಯ: ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಸಹಕಾರ ಸಂಘದ ವತಿಯಿಂದ ಜಿಲ್ಲಾ ಬ್ಯಾಂಕ್ ನಿರ್ದೇಶಕರಾದ ಎ.ಟಿ. ಸೋಮಶೇಖರ್, ಅಮಿತ್‌ದೇವರಹಟ್ಟಿ ಮತ್ತು ಹುಣಸೂರಿನ ಜಿ.ಡಿ. ಹರೀಶ್‌ಗೌಡ ಅವರನ್ನು ಅಭಿನಂದಿಸಲಾಯಿತು.
ಭೇರ್ಯದ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಟಿ.ಕುಮಾರ್, ಎಂಡಿಸಿಸಿ ಬ್ಯಾಂಕ್ ಹಿರಿಯ ಮೇಲ್ವಿಚಾರಕ ಮಂಜೇಗೌಡ, ನಿರ್ದೇಶಕರಾದ ಸಣ್ಣರಾಮೇಗೌಡ, ಬಿ.ಸಿ.ಜಯರಾಮು, ಶೇಖರ್, ಮೊಕಬಲ್, ರಂಗಯ್ಯ, ಮಾಜಿ ಅಧ್ಯಕ್ಷ ಅಲ್ತಾಫ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಲ್. ರಾಜಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಚ್. ಮಹದೇವು, ಮುಶೀರ್‌ಖಾನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.