ಮೈಸೂರು

ನೀರನ್ನು ಮಿತವಾಗಿ ಬಳಸಿ: ಲಕ್ಷ್ಮಮ್ಮ

Published On :

ಭೇರ್ಯ: ಗ್ರಾಮೀಣ ಪ್ರದೇಶದ ಜನರಿಗೆ ಮುಂದಿನ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗಲಿದ್ದು, ಆದ್ದರಿಂದ ಇಂದಿನಿಂದಲೇ ನೀರನ್ನು ಮಿತವಾಗಿ ಬಳಸಿ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕಿ ಲಕ್ಷ್ಮಮ್ಮ ಹೇಳಿದರು.
ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಅಂತರ್ಜಲ ಜನಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಿಕ್ಕ ಸಿಕ್ಕ ಕಡೆಗಳಲ್ಲಿ ಕೊಳವೆ ಬಾವಿ ಕೊರಸಿ ಅಂತರ್ಜಲವನ್ನು ಹಾಳು ಮಾಡುತ್ತಿದ್ದೇವೆ. ಇತ್ತಿಚೀನ ದಿನಗಳಲ್ಲಿ 400 ಅಡಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಆದ್ದರಿಂದ ಮಳೆ ನೀರನ್ನು ಶೇಖರಿಸಿ ಜೊತೆಗೆ ನಿಮ್ಮ ಕೊಳವೆ ಬಾವಿಗೆ ಹೊಂದಿಕೊಂಡತೆ ಇಂಗು ಗುಂಡಿಗಳನ್ನು ತೆಗೆಸಿ ಮಳೆ ನೀರು ವ್ಯರ್ಥವಾಗುವುದನ್ನು ಗುಂಡಿಗೆ ಹರಿಯಲು ಬಿಡುವಂತೆ ತಿಳಿಸಿದರು.
ಇಲಾಖೆ ವತಿಯಿಂದ ಮಳೆ ಮತ್ತು ಅಂತರ್ಜಲ ಬಗ್ಗೆ ವಿಡಿಯೋ ಚಿತ್ರ ಪ್ರದರ್ಶಿಸಲಾಯಿತು. ಜನಾರ್ಧನ್ ಮತ್ತು ಪ್ರಾಣೇಶ್ ಅಂತರ್ಜಲ ಬಗ್ಗೆ ಉಪನ್ಯಾಸ ನೀಡಿದರು. ಸಿಡಿಸಿ ಅಧ್ಯಕ್ಷ ಎಂ.ಟಿ. ಕುಮಾರ್, ಪ್ರಾಂಶುಪಾಲ ಸೋಮಶೇಖರ್, ಹಿರಿಯ ಭೂ ವಿಜ್‌ಞಾನಿ ಸುಮಿತ್ರಮ್ಮ, ಸಿಡಿಸಿ ಸದಸ್ಯರಾದ ಖಾಲಿದ್‌ಪಾಷ, ರಂಗೇಗೌಡ, ಉಪನ್ಯಾಸಕ ಸೋಮಣ್ಣ ಇದ್ದರು.

ಮಕ್ಕಳಿಗೆ ಶಿಕ್ಷಣ ಕೊಡಿಸಲು ಕರೆ
ತಾಂಡವಪುರ: ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಶಿಕ್ಷಣ ಕೊಡಿಸಿ ಎಂದು ಮೈಸೂರು ಕಾಗಿನೆಲೆ ಶಾಖಾ ಮಠದ ರೇವಣ್ಣ ಸಿದ್ದೇಶ್ವರ ಸ್ವಾಮೀಜಿ ಕರೆ ನೀಡಿದರು.
ನಂಜನಗೂಡು ತಾಲೂಕು ಬಂಚಹಳ್ಳಿಹುಂಡಿ ಗ್ರಾಮಕ್ಕೆ ಕೆ.ಆರ್. ನಗರ ಶಾಖಾ ಮಠದಲ್ಲಿ ಹಾಗೂ ನಂಜನಗೂಡಿನ ಕನಕದಾಸ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ನೆರವಾಗುವ ದೃಷ್ಟಿಯಿಂದ ಗ್ರಾಮಗಳಲ್ಲಿ ಮಠದ ಭಕ್ತರಿಂದ ದೇಣಿಗೆ ಸಂಗ್ರಹಿಸಲು ಭೇಟಿ ನೀಡಿದಾಗ, ಗ್ರಾಮಸ್ಥರು ಉದಾರವಾಗಿ ನೀಡಿದ ಕಾಣಿಕೆ ಮತ್ತು ಗೌರವವನ್ನು ಸ್ವೀಕರಿಸಿ ಅವರು ಮಾತನಾಡಿದರು.
ತಮ್ಮ ತಮ್ಮ ಗ್ರಾಮಗಳಲ್ಲಿ ಮಕ್ಕಳನ್ನು ಓದಿಸಲು ಸಾಧ್ಯವಿಲ್ಲ ಎಂದು ಕಂಡು ಬಂದರೆ ಅಂಥ ಮಕ್ಕಳನ್ನು ಕೆ.ಆರ್. ನಗರ ಶಾಖಾ ಮಠಕ್ಕಾಗಲಿ ಅಥವಾ ನಂಜನಗೂಡಿನ ಕನಕದಾಸ ವಿದ್ಯಾರ್ಥಿ ನಿಲಯಕ್ಕಾಗಲಿ ಸೇರಿಸಿದರೆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ತಿಳಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ಬಿ.ಪಿ. ಮಹದೇವು, ಗ್ರಾಪಂ ಸದಸ್ಯ ಪ್ರಭುಸ್ವಾಮಿ, ಅಹಿಂದ ಮುಖಂಡರಾದ ಮನ್ನೇಗೌಡ, ಹುಚ್ಚೇಗೌಡ, ಮಾಲೇಗೌಡ, ಕುರಹಟ್ಟಿ ಬಸವರಾಜು, ಬಿ.ಎಂ. ಬಸವರಾಜು, ಗಣೇಶ್, ದೇವರಗುಡ್ಡಪ್ಪ, ರವಿ ಹಾಗೂ ಕನಕ ಯುವ ಸೇನೆಯ ಮುಖಂಡರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.