ಮೈಸೂರು

ವೇತನ ವಿಳಂಬ ಖಂಡಿಸಿ ನೌಕರರ ಪ್ರತಿಭಟನೆ

Published On :

ಮೈಸೂರು: ನಿಗದಿತ ವೇಳೆಗೆ ವೇತನ ನೀಡಬೇಕು ಎಂದು ಆಗ್ರಹಿಸಿ ನಗರ ಪಾಲಿಕೆ ನೌಕರರು ಸೋಮವಾರ ವೆಂಕಟರಾಂ ಹಾಗೂ ಉಮೇಶ್ ಅವರ ನೇತೃತ್ವದಲ್ಲಿ ಪಾಲಿಕೆ ಎದುರು ಪ್ರತಿಭಟಿಸಿದರು.
ಕಳೆದ ಆರು ತಿಂಗಳಿಂದ ನಿಗದಿತ ವೇಳೆಗೆ ವೇತನ ಆಗುತ್ತಿಲ್ಲ. ಈ ಮುಂಚೆ ತಿಂಗಳ ಮೊದಲ ದಿನವೇ ವೇತನ ಸಿಗುತ್ತಿತ್ತು. ಆದರೆ ಈಗ 15 ದಿನ ತಡವಾಗುತ್ತಿದೆ. ಇದರಿಂದ ಪಾಲಿಕೆ ನೌಕರರು ತಮ್ಮ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಆರೋಪಿಸಿದರು.
ಅನೇಕ ನೌಕರರು ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುತ್ತಾರೆ. ಆದರೆ ಇಲ್ಲಿ ನಮಗೆ ಸರಿಯಾದ ವೇಳೆಗೆ ವೇತನ ಸಿಗದಿದ್ದರೆ ತೊಂದರೆ ಆಗುತ್ತದೆ. ಇಂದು ತಾರೀಖು 10 ಆದರೂ ಸಂಬಳ ಆಗಿಲ್ಲ. ಅಲ್ಲದೆ ಪಾಲಿಕೆ ನೌಕರರಿಗೆ ನೀಡಬೇಕಾದ ಡಿಎ ಬಾಕಿಯನ್ನೂ ನೀಡಿಲ್ಲ ಎಂದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಸೋಮವಾರ ಮತ್ತು ಮಂಗಳವಾರ ಬ್ಯಾಂಕ್ ನೌಕರರ ಪ್ರತಿಭಟನೆ ಇರುವ ಹಿನ್ನೆಲೆಯಲ್ಲಿ ಯಾವ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಆದ್ದರಿಂದ ಗುರುವಾರ ತಮ್ಮ ಖಾತೆಗೆ ಸಂಬಳ ಬರುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ ಬಳಿಕ ನೌಕರರು ತಮ್ಮ ಪ್ರತಿಭಟನೆ ಹಿಂಪಡೆದರು.

ವೆಂಕಟೇಶ್ ಅಧಿಕಾರ ಸ್ವೀಕಾರ
ಮೈಸೂರು: ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕರಾಗಿ ಡಾ. ವೆಂಕಟೇಶ್ ಗುರುವಾರ ಅಧಿಕಾರ ಸ್ವೀಕರಿಸಿದರು. ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೆಂಕಟೇಶ್ ಅವರನ್ನು ಸರ್ಕಾರ ಮೈಸೂರಿನ ಜಂಟಿ ನಿರ್ದೇಶಕರಾಗಿ ವರ್ಗಾವಣೆಗೊಳಿಸಿತ್ತು.  ಧನ್ವಂತರಿ ರಸ್ತೆಯ ಪಶುಸಂಗೋಪನಾ ಇಲಾಖೆ ಕಚೇರಿಯಲ್ಲಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು.ಈ ವೇಳೆ ಡಿ. ಜಗನ್ನಾಥ್‌ಬಾಬು, ದೇವರಾಜ ನಾಯಕ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.