ಮೈಸೂರು

ವೇತನ ತಾರತಮ್ಯ ಸರಿಪಡಿಸಲು ಆಗ್ರಹ

Published On :

ಮೈಸೂರು: ಪದವಿಪೂರ್ವ ಕಾಲೇಜು ಉಪನ್ಯಾಸಕರ ಮತ್ತು ಪ್ರಾಂಶಪಾಲರ ವೇತನ ಹೆಚ್ಚಿಸುವಂತೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರಿಗೆ ಉಪನ್ಯಾಸಕರು ಮಂಗಳವಾರ ಮನವಿ ಮಾಡಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಪಿಯು ಕಾಲೇಜಿನ ಉಪನ್ಯಾಸಕರ ಸಮನ್ವಯ ಸಮಿತಿ ಪದಾಧಿಕಾರಿಗಳು ಸಚಿವರನ್ನು ಭೇಟಿ ಮಾಡಿ, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೋಧಕ ವರ್ಗವು ಬದುಕು ಸರಿದೂಗಿಸುವುದು ಕಷ್ಟವಾಗಿದೆ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಉಪನ್ಯಾಸಕ ವರ್ಗಕ್ಕೆ ಆರ್ಥಿಕ ಮುಕ್ತ ವಾತಾವರಣ ಕಲ್ಪಿಸಿಕೊಡಬೇಕು. ಹಾಗೂ ವೇತನ ತಾರತಮ್ಯ ಪರಿಹರಿಸಬೇಕು ಎಂದರು.
ಕರ್ನಾಟಕ ಸರ್ಕಾರ 1998ರವರೆಗೆ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಮತ್ತು ಪಿಯು ಉಪನ್ಯಾಸಕರನ್ನು ಬಿ. ಶ್ರೇಣಿಯ ಹುದ್ದೆಗಳೆಂದು ಪರಿಗಣಿಸಿ, ಒಂದೇ ವೇತನ ಶ್ರೇಣಿಯನ್ನು ನೀಡುತ್ತಿತ್ತು. ಆದರೆ 1998 ರ ನಂತರ ತಾರತಮ್ಯ ಎಸಗಿದೆ. ಉಪ ವಿಭಾಗಾಧಿಕಾರಿಗಳ ವೇತನ 30,400ರಿಂದ 51, 300 ಮತ್ತು ತಹಸೀಲ್ದಾರರ ವೇತನ 28,100ರಿಂದ 50,100 ಆಗಿರುತ್ತದೆ. ಆದರೆ ಉಪನ್ಯಾಸಕರಿಗೆ 22,800ರಿಂದ 43,200 ಮಾತ್ರ. ಆದ್ದರಿಂದ ಈ ತಾ ರತಮ್ಯವನ್ನು ಸರಿಪಡಿಸಬೇಕು ಎಂದು ಅವರು ಅಗ್ರಹಿಸಿದರು.
ಭರವಸೆ: ಪದವಿಪೂರ್ವ ಕಾಲೇಜು ಉಪನ್ಯಾಸಕರು ಮತ್ತು ಪ್ರಾಂಶುಪಾಲರ ವೇತನ ತಾರತಮ್ಯ ನಿವಾರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದ ಸಚಿವರು ಫೆ. 24ರಂದು ಉಪನ್ಯಾಸಕರ ನಿಯೋಗ ಹಾಗೂ ಸಂಸದ ಎಚ್. ವಿಶ್ವನಾಥ್ ಅವರೊಡಗೂಡಿ ಭೇಟಿ ಮಾಡೋಣ ಎಂದು ತಿಳಿಸಿದರು.
ಸಂಸದ ಎಚ್. ವಿಶ್ವನಾಥ್, ಕಾಂಗ್ರೆಸ್ ಮುಖಂಡ ಎಂ. ಲಕ್ಷ್ಮಣ್, ಸಮಿತಿ ಅಧ್ಯಕ್ಷ ರವಿಶಂಕರ್ ಹಾಗೂ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.