ಗ್ರಾಪಂ ಖಾಲಿ ಸ್ಥಾನಗಳಿಗೆ ಮಾ.2ರಂದು ಚುನಾವಣೆ
ಮೈಸೂರು: ಜಿಲ್ಲೆಯ ಗ್ರಾಪಂಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದ್ದಾರೆ.
ಫೆ.19 ನಾಮಪತ್ರ ಸಲ್ಲಿಸಲು ಕೊನೆ ದಿನ. ಫೆ.20 ನಾಮಪತ್ರಗಳನ್ನು ಪರಿಶೀಲಿಸುವ ದಿನ. ಫೆ. 22 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆ ದಿನ. ಮಾ.2ರಂದು ಅವಶ್ಯವಿದ್ದರೆ ಮತದಾನ ನಡೆಸಬೇಕು. ಮತದಾನ ಬೆಳಗ್ಗೆ 7ರಿಂದ ಸಂಜೆ 5ರವರೆಗೆ. ಮಾ. 5ರ ಬೆಳಗ್ಗೆ 8ಕ್ಕೆ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ಮತಗಳ ಎಣಿಕೆ ನಡೆಯಲಿದೆ.
ತೆರವಾಗಿರುವ ಸದಸ್ಯ ಸ್ಥಾನಗಳ ವಿವರ. ಮೈಸೂರು ತಾಲೂಕು- ಹಾರೋಹಳ್ಳಿ ಗ್ರಾಪಂನ ಮದ್ದೂರು ಕ್ಷೇತ್ರ (ಸಾಮಾನ್ಯ). ನಂಜನಗೂಡು- ಕೆಂಪಿಸಿದ್ದನಹುಂಡಿ ಗ್ರಾಪಂನ ಬಸವನಪುರ ಕ್ಷೇತ್ರ (ಹಿಂದುಳಿದ ವರ್ಗ ಎ), ಬಿಳಿಗೆರೆ ಗ್ರಾಪಂಯ ಕುಪ್ಪರವಳ್ಳಿ ಕ್ಷೇತ್ರ (ಸಾಮಾನ್ಯ), ನೆಲ್ಲಿತಾಳಪುರ ಗ್ರಾಪಂನ ಆಕಲ ಕ್ಷೇತ್ರ (ಅನುಸೂಚಿತ ಜಾತಿ), ಟಿ. ನರಸೀಪುರ- ಬೈರಪುರ ಕ್ಷೇತ್ರ-2 (ಸಾಮಾನ್ಯ-ಮಹಿಳೆ), ಹುಣಸೂರು- ನೇರಳಕುಪ್ಪೆ ಗ್ರಾಪಂನ ಅಬ್ಬೂರು ಕ್ಷೇತ್ರ (ಸಾಮಾನ್ಯ), ದೊಡ್ಡಹೆಜ್ಜೂರು ಗ್ರಾಪಂನ ಮುದುಗನೂರು ಕ್ಷೇತ್ರ (ಹಿಂದುಳಿದ ವರ್ಗ ಎ), ಕೆ.ಆರ್. ನಗರ- ಅಂಕನಹಳ್ಳಿ-1 ಕ್ಷೇತ್ರ (ಅನುಸೂಚಿತ ಪಂಗಡ- ಮಹಿಳೆ), ಹೊಸಕೋಟೆ- 2 ಕ್ಷೇತ್ರ (ಅನುಸೂಚಿತ ಪಂಗಡ (ಮಹಿಳೆ), ಹಲಿಯೂರು ಗ್ರಾಪಂನ ಹೊಸೂರು-1 ಕ್ಷೇತ್ರ (ಅನುಸೂಚಿತ ಜಾತಿ), ಪಿರಿಯಾಪಟ್ಟಣ- ಬೈಲಕುಪ್ಪೆ- 1 (ಅನುಸೂಚಿತ ಜಾತಿ- ಮಹಿಳೆ), ಎಚ್.ಡಿ. ಕೋಟೆ- ಮುತ್ತಿಗೆ ಚಿಕ್ಕತಳಲು ಗ್ರಾಪಂನ ಹಾದನೂರು-2 ಕ್ಷೇತ್ರ (ಹಿಂದುಳಿದ ವರ್ಗ ಎ).
ಜಿಲ್ಲೆಯ ಒಟ್ಟು 12 ಗ್ರಾಪಂಗಳ 12 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಹೆಚ್ಚಿನ ವಿವರಗಳಿಗೆ ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ಅಥವಾ ಸಂಬಂಧಪಟ್ಟ ಗ್ರಾಪಂ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಪಡೆಯಬಹುದು.
ಚುನಾವಣೆ ನಡೆಯುವ ಪ್ರತಿ ಗ್ರಾಪಂಗೆ ಒಬ್ಬರು ಚುನಾವಣಾಧಿಕಾರಿ ಹಾಗೂ ಒಬ್ಬರು ಸಹಾಯಕ ಚುನಾವಣಾಧಿಕಾರಿ ನೇಮಿಸಲಾಗಿದೆ. ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಬಹುದು. ಗ್ರಾಪಂಗಳ ಚುನಾವಣೆ ನಡೆಯುವ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು ಮಾ. 5ರವರೆಗೆ ಜಾರಿಯಲ್ಲಿರುತ್ತದೆ. ಇದು ಬರ ಕಾಮಗಾರಿ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ.ಕೆ.ಆರ್. ನಗರ ಪುರಸಭಾ ಚುನಾವಣೆ
ಜಿಲ್ಲೆಯ ಕೆ.ಆರ್. ನಗರ ಪುರಸಭೆಯಲ್ಲಿ ವಾರ್ಡ್ ನಂ. 15 ಮತ್ತು 18ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ. ಫೆ.19 ನಾಮಪತ್ರ ಸಲ್ಲಿಸಲು ಕೊನೆ ದಿನ. ಫೆ.20 ನಾಮಪತ್ರ ಪರಿಶೀಲಿಸುವ ದಿನ. ಫೆ.22 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕೊನೆ ದಿನ. ಮಾ. 2 ಅವಶ್ಯವಿದ್ದರೆ ಮತದಾನ ನಡೆಯುವುದು. ಬೆಳಗ್ಗೆ 7ರಿಂದ ಸಂಜೆ 5. ಮಾ. 5 ಮತ ಎಣಿಕೆ. ವಾರ್ಡ್ ನಂ. 15 (ಸಾಮಾನ್ಯ), ವಾರ್ಡ್ ನಂ. 18 (ಹಿಂದುಳಿದ ವರ್ಗ ಎ). ವಿವರಗಳನ್ನು ಸಂಬಂಧಪಟ್ಟ ತಹಸೀಲ್ದಾರ್ ಕಚೇರಿಯಲ್ಲಿ ಅಥವಾ ಚುನಾವಣಾಧಿಕಾರಿಗಳ ಕಚೇರಿ ಸಂಪರ್ಕಿಸಿ ಪಡೆದುಕೊಳ್ಳಬಹುದು. ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರವಿಕುಮಾರ್ ಚುನಾವಣಾಧಿಕಾರಿಯಾಗಿ ಹಾಗೂ ಪುರಸಭೆಯ ವ್ಯವಸ್ಥಾಪಕ ಪಂಚಲಿಂಗೇಗೌಡ ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವರು. ಪಟ್ಟಣದ ತಾಲೂಕು ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸುವರು. ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವಾರ್ಡ್ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಮಾ. 5ರವರೆಗೆ ಜಾರಿಯಲ್ಲಿರುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

