ಹಳ್ಳಿಗಳಲ್ಲಿ ಮಾತ್ರ ಸಂಸ್ಕೃತಿ ಉಳಿದಿದೆ: ಆದಿಶ್ರೀ
ಎಚ್.ಡಿ. ಕೋಟೆ: ಹಳ್ಳಿ ಜನರಲ್ಲಿರುವ ಮುಗ್ಧತೆ, ಪ್ರೀತಿ, ಅಭಿಮಾನ ಬೇರೆ ಎಲ್ಲೂ ಕಾಣಲು ಸಾಧ್ಯವಿಲ್ಲ. ನಾಗರಿಕತೆ, ಸಂಸ್ಕೃತಿ ಉಳಿದಿದ್ದರೆ ಅದು ಹಳ್ಳಿಗಳಲ್ಲಿ ಮಾತ್ರ ಎಂದು ಆದಿಚುಂಚನಗಿರಿ ಸಂಸ್ಥಾನ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೇಹಳ್ಳಿ ಎ. ಕಾಲೋನಿಯಲ್ಲಿ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಿಂದ ಏರ್ಪಡಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆ ಮಹಾತ್ಮ ಗಾಂಧೀಜಿಯವರ ಕನಸುಗಳಲ್ಲಿ ಒಂದಾಗಿತ್ತು. ಈ ಯೋಜನೆ ಉದ್ದೇಶ ಗ್ರಾಮಗಳಲ್ಲಿ ಸೌಹಾರ್ದ ಭಾವನೆ ಮತ್ತು ಸಹಬ್ವಾಳೆಯನ್ನು ಉಂಟು ಮಾಡುವುದಾಗಿದೆ ಎಂದರು.
ಆದಿಚುಂಚನಗಿರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ಕೆ.ಪಿ. ಬಸವೇಗೌಡ ಮಾತನಾಡಿ, ಮಹಾತ್ಮ ಗಾಂಧೀಜಿ ಮತ್ತು ಸ್ವಾಮಿ ವಿವೇಕಾನಂದರು ಈ ದೇಶದಲ್ಲಿರುವ ಬಡತನ, ಅಜ್ಞಾನವನ್ನು ಹೋಗಲಾಡಿಸಬೇಕೆಂಬ ಕನಸು ಕಂಡಿದ್ದರು. ಇವರಿಂದ ಪ್ರೇರಣೆ ಪಡೆದ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಹಳ್ಳಿ ಹಳ್ಳಿಗೆ ಹೋಗಿ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಜ್ಞಾನ ನೀಡಿದ್ದಾರೆ ಎಂದರು.
ಸೆನೆಟ್ ಮಾಜಿ ಸದಸ್ಯ ಕೃಷ್ಣೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್. ನರಸಿಂಹೇಗೌಡ, ಸೋಮೇಶ್, ಚನ್ನಬಸವನಾಯಕ, ಮಾದೇಗೌಡ, ಬಸವರಾಜೇಗೌಡ, ಪ್ರದೀಪ್ ಕುಮಾರ್, ಮರಿ ಈರನಾಯಕ, ನಂಜನಾಯಕ, ಶಂಬೇಗೌಡ, ಹುಚ್ಚಯ್ಯ, ಬೆಟ್ಟಯ್ಯ, ನಾಗೇಗೌಡ, ಈರಣ್ಣಶೆಟ್ಟಿ, ಪ್ರಾಂಶುಪಾಲರಾದ ಎಸ್.ಪಿ. ಪ್ರಕಾಶ್, ಜೆ.ಎನ್. ವೆಂಕಟೇಶ್, ಎ.ಸಿ. ಭೈರಪ್ಪ, ಎಚ್.ಸಿ. ರವೀಗೌಡ, ಜಯಪ್ರಕಾಶ್, ಎನ್ಎನ್ಎಸ್ ಅಧಿಕಾರಿಗಳಾದ ಬಿ. ಭೈರೇಗೌಡ, ಡಿ. ಪ್ರಕಾಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

