ಶಾಲಾ ಮರ ಕಡಿಯಲು ವಿದ್ಯಾರ್ಥಿಗಳ ವಿರೋಧ
ಸರಗೂರು: ಪಟ್ಟಣದ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿರುವ ಮರಗಳ ಹರಾಜು ಪ್ರಕ್ರಿಯೆಯನ್ನು ರದ್ದುಪಡಿಸಲಾಯಿತು. ಕಾಲೇಜು ಹಾಗೂ ಪ್ರೌಢಶಾಲಾ ಅಭಿವೃದ್ಧಿ ಸಮಿತಿಯವರು ಕಾಲೇಜು ಆವರಣದಲ್ಲಿ ಇರುವ ರೈನ್ಟ್ರೀ 2 ಮರ ಮತ್ತು 9 ನೀಲಗಿರಿ ಮರಗಳನ್ನು ಹರಾಜು ಮಾಡಲು ತೀರ್ಮಾನಿಸಿ ಅರಣ್ಯ ಇಲಾಖೆಗೆ ಅಧಿಕಾರಿಗಳಿಗೆ ತಿಳಿಸಿದ್ದರು.
ಅದರಂತೆ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಕಾಲೇಜು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಿಕ್ಕವೀರನಾಯಕ ಮತ್ತು ಸದಸ್ಯ ಶಿವಣ್ಣ ಮಾತ್ರ ಹಾಜರಿದ್ದರು.
ಹರಾಜು ಪ್ರಕ್ರಿಯೆ ಪ್ರಾರಂಭವಾಗುವ ಹಂತದಲ್ಲಿ ಇರುವಾಗ ಹಳೆ ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರಿಗೆ ಹಾಗೂ ಶಾಲಾಭಿವೃದ್ಧಿ ಸಮಿತಿಯ ಕೆಲವು ಸದಸ್ಯರಿಗೆ ಮರಗಳ ಹರಾಜಿನ ಬಗ್ಗೆ ಮಾಹಿತಿ ಇಲ್ಲ. ಇಲ್ಲಿ ಇರುವ ಮರಗಳು 40 ವರ್ಷಗಳಷ್ಟು ಹಿಂದಿನವು. ನೀವು ಯಾವ ಕಾರಣಕ್ಕೆ ಮರಗಳನ್ನು ಹರಾಜು ಮಾಡುತ್ತಿದ್ದೀರಿ ಎಂದು ಪ್ರಾಂಶುಪಾಲ ಮೋಹನ್ ಅವರನ್ನು ಕೇಳಿದಾಗ, ನಮ್ಮ ಕಾಲೇಜು ಅಭಿವೃದ್ಧಿ ಸಮಿತಿಯಲ್ಲಿ ಹಣ ಇಲ್ಲ. ಈ ಮರಗಳನ್ನು ಹರಾಜು ನಡೆಸಿ ಅದರಲ್ಲಿ ಬರುವ ಹಣದಲ್ಲಿ ಶೌಚಾಲಯ ದುರಸ್ತಿ ಮಾಡಿಸಬೇಕು ಎಂದು ತಿಳಿಸಿದರು.
ಇದಕ್ಕೆ ವಿರೋಧಿಸಿದ ಹಿರಿಯ ವಿದ್ಯಾರ್ಥಿಗಳಾದ ಎಸ್.ಎಲ್. ರಾಜಣ್ಣ, ರವಿಕುಮಾರ್, ವೆಂಕಟಪ್ಪ ಅವರು ಕಾಲೇಜು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮತ್ತು ಸದಸ್ಯರಾದ ನೀವು ಶಾಸಕರ ಮೂಲಕ ಹಣವನ್ನು ಸಮಿತಿಗೆ ದೊರಕಿಸಿಕೊಂಡು ಕೆಲಸ ಮಾಡಿಸಿ. ಮಕ್ಕಳಿಗೆ ನೆರಳಾಗಿರುವ ಮರವನ್ನು ಕಡಿಯುವುದು ಬೇಡ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

