ಬಿಜೆಪಿ ನೈತಿಕ ಮೌಲ್ಯ ಕುಸಿತ: ವಿಶ್ವನಾಥ್
ಮೈಸೂರು: ರಾಜ್ಯ ಬಿಜೆಪಿ ಈಗ ನೈತಿಕ ಮೌಲ್ಯ ಕಳೆದುಕೊಂಡಿದೆ ಎಂದು ಸಂಸದ ಎಚ್. ವಿಶ್ವನಾಥ್ ಟೀಕಿಸಿದರು.
ಮಾಜಿ ಸಚಿವ ಎಸ್.ಎ. ರಾಮದಾಸ್- ಪ್ರೇಮಕುಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿ ತನ್ನ ನೈತಿಕ ಮೌಲ್ಯ ಕಳೆದುಕೊಂಡಿದೆ. ಆದರೆ ರಾಮದಾಸ್ ತಾಯಿ ಮತ್ತು ಅಭಿಮಾನಿಗಳಿಗೆ ಈ ಪ್ರಕರಣ ಮರೆಯುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು. ದೆಹಲಿಯಲ್ಲಿ ಆಡಳಿತ ನಡೆಸಿದ ಆಮ್ ಆದ್ಮಿಯ ಅರವಿಂದ ಕೇಜ್ರಿವಾಲ ಅವರಿಗೆ ಆಡಳಿತ ಅನುಭವ ಇಲ್ಲ. ಅವರಿಗೆ ಬಹಳಷ್ಟು ಅನುಭವ ಬೇಕು. ಕಾಂಗ್ರೆಸ್ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗೌರವಿಸುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೆ ಷರತ್ತು ವಿಧಿಸದೆ ಕಾಂಗ್ರೆಸ್ ಆಮ್ಆದ್ಮಿಗೆ ಬೆಂಬಲ ನೀಡಿತ್ತು ಎಂದರು.
ಕೆಂಗಲ್ -ಅರಸು ಛಾಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್ನಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ದೇವರಾಜ ಅರಸು ಅವರ ಸ್ಫೂರ್ತಿಯ ಛಾಯೆ ಕಾಣಿಸುತ್ತಿದೆ. ನಮ್ಮ ಶಾಸಕರು ಮತ್ತು ಸಂಸದರು ಕೇಳಿದ್ದನ್ನು ನೀಡಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ಪ್ರಾಧಿಕಾರ ರಚಿಸಿದ್ದಾರೆ. ಆದರೆ ಅದಕ್ಕೆ ಸೂಕ್ತ ಅಧಿಕಾರಿ ಮತ್ತು ಅಧ್ಯಕ್ಷರನ್ನು ನೇಮಿಸಬೇಕು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಗ್ರೀನ್ ಫೀಲ್ಡ್, ಬಡ್ಡಿ ರಹಿತ ಸಾಲ, ಆಶ್ರಯ ಮನೆ ಸಾಲ ಮನ್ನ ಸೇರಿದಂತೆ ಅನೇಕ ಯೋಜನೆ ನೀಡಿದ್ದಾರೆ. ಇದು ಅವರ ಮನಸ್ಸಿಗೆ ಹಿಡಿದ ಕನ್ನಡಿಯಂತಿದೆ ಎಂದರು.
ಮೈಸೂರು ಮತ್ತು ಕೊಡಗು ರೈಲು ಮಾರ್ಗ ನಿರ್ಮಾಣವಾಗುವುದು ಖಚಿತ. ಆದರೆ ಮರ ಕಡಿಯಲು ಪರಿಸರವಾದಿಗಳು ಅಡ್ಡಿ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಲ್ಪ ವಿಳಂಬ ಆಗಬಹುದು. ಅಲ್ಲದೆ ಸಿದ್ದರಾಮಯ್ಯ ಮತ್ತುಸಚಿವರು ಅಧಿಕಾರಿಗಳನ್ನು ಎಚ್ಚರಗೊಳಿಸಿ ತಮ್ಮ ಎಲ್ಲಾ ಯೋಜನೆಗಳೂ ಕಾರ್ಯಗತ ಆಗುವಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಎಚ್.ಎ. ವೆಂಕಟೇಶ್, ಕೆ. ಮರಿಗೌಡ, ಶೌಕತ್ ಅಲಿಖಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

