ಮೈಸೂರು

ರತ್ನಾಪುರಿ ದರ್ಗಾಕ್ಕೆ ಸಚಿವ ಖಾದರ್ ಭೇಟಿ

Published On :

ಹುಣಸೂರು: ತಾಲೂಕಿನ ಹಿಂದೂ- ಮುಸ್ಲಿಮರ ಭಾವೈಕ್ಯ ಬೆಸೆಯುವ ಹಜರತ್ ಬೀಬಿ ಮಾ ಸಾಹೇಬರ ಗಂಧೋತ್ಸವ ಮೆರವಣಿಗೆ ಯಶಸ್ವಿಯಾಗಿ ಜರುಗಿತು.
50ನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ಹಿಂದೂ- ಮುಸ್ಲಿಮರ ಸಹಭಾಗಿತ್ವದಲ್ಲಿ ಶ್ರೀ. ಆಂಜನೇಯಸ್ವಾಮಿ ಉತ್ಸವ ಮತ್ತು ಹಜರತ್ ಬೀಬೀ ಮಾ ಸಾಹೇಬರ ಗಂಧೋತ್ಸವ (ಉರುಸ್) ಜಾತ್ರೆಗೆ ಸೋಮವಾರ ತೆರೆ ಬಿದ್ದಿತ್ತು. ಕುಡಿರು ಮುದ್ದನಹಳ್ಳಿಯಿಂದ ಮುಸ್ಲಿಂ ಸಮುದಾಯದವರು ಗಂಧೋತ್ಸವವನ್ನು ತಂದು ಜಮಾಲ್ ಬೀಬೀಗೆ ಪೂಜೆ ಸಲ್ಲಿಸಿ ಉರುಸ್ಗೆ ಚಾಲನೆ ನೀಡಿದರು.
ಆರೋಗ್ಯ ಸಚಿವ ಯು.ಟಿ. ಖಾದರ್, ಶಾಸಕ ಎಚ್.ಪಿ. ಮಂಜುನಾಥ್, ಸಂಸದ ಎಚ್. ವಿಶ್ವನಾಥ್, ಜಿಪಂ ಸದಸ್ಯೆ ಡಾ.ಪುಷ್ಪಾ ಅಮರನಾಥ್, ಉದ್ಯಮಿ ಅಮರನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ಭಾಗವಹಿಸಿದ್ದರು.
ಸಮುದಾಯದ ನೆರವಿನಿಂದ ದೇವಾಲಯದ ಅಭಿವೃದ್ಧಿ ಮಾಡಲಾಗುವುದು ಎಂದು ಸಚಿವ ಯು.ಟಿ. ಖಾದರ್ ಮತ್ತು ಶಾಸಕ ಎಚ್.ಪಿ.ಮಂಜುನಾಥ್ ಭರವಸೆ ನೀಡಿದರು. ಮುಸ್ಲಿಂ ಗುರುಗಳಾದ ಸೈಜಾ ಅಮೀದ್, ಸೈಜಾ ಪಾಷಾ ಮೀಸಾದ್, ಸಮಿತಿ ಅಧ್ಯಕ್ಷ ಕಲೀಲ್ ಅಜಿ, ಉಪಾಧ್ಯಕ್ಷ ಅತಾವುಲ್ಲಾ, ಕಾರ್ಯದರ್ಶಿ ರಫೀಕ್ ಖಜಾಂಚಿ ಉಮ ಷರೀಫ್ ಮುಖಂಡರಾದ ಅಜ್ಗಾರ ಪಾಷಾ, ಅನ್ವರ್ ಪಾಷಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.