ಮೈಸೂರು

ಕೃಷ್ಣದೇವರಾಯ, ಕಾರಂತರ ಕೃತಿಗಳ ಲೋಕಾರ್ಪಣೆ

Published On :

ಮೈಸೂರು: ಬಿ.ಎಸ್. ಕೇಶವರಾವ್ ಅವರ ರಾಯರ ರಾಯ ಶ್ರೀಕೃಷ್ಣದೇವರಾಯ ನಾಟಕ ಹಾಗೂ ಸೂತ್ರದಾರ ಬಿ.ವಿ. ಕಾರಂತ ಅವರ ಜೀವನಗಾಥಾ ಕೃತಿಗಳ ಲೋಕಾರ್ಪಣೆ ಸೋಮವಾರ ನಡೆಯಿತು.
ಕದಂಬ ರಂಗ ವೇದಿಕೆಯು ರಂಗಾಯಣದ ಶ್ರೀರಂಗದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ರಂಗ ಕಲಾವಿದೆ ರಾಮೇಶ್ವರಿ ವರ್ಮ ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು.ನಂತರ  ಮಾತನಾಡಿದ ಅವರು, ಮೈಸೂರು ರಂಗಭೂಮಿಯಲ್ಲಿ ಅನೇಕ ನಾಟಕ, ರಂಗಶಿಬಿರ ಮುಂತಾದ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತವೆ. ಆದರೆ ಅವುಗಳ ದಾಖಲಿಸುವ ಕೆಲಸ ನಡೆಯುತ್ತಿಲ್ಲ. ಆದ್ದರಿಂದ ತಮ್ಮ ಕಾಲಮಾನದಲ್ಲಿ ನಡೆಯುವ ಕಾರ್ಯಕ್ರಮ ಹಾಗೂ ಕಲೆ ಮತ್ತು ಕಲಾವಿದರ ವಿಶೇಷತೆಯನ್ನು ರಂಗಕರ್ಮಿಗಳು ಬರೆಯುವಲ್ಲಿ ಮುಂದಾಗಬೇಕು ಎಂದು ಆಶಿಸಿದರು. ಕಾರಂತರ ಬಾಲ್ಯ, ರಂಗಪ್ರವೇಶ, ಗುಬ್ಬಿ ವೀರಣ್ಣ ಅವರೊಂದಿಗಿನ ಒಡನಾಟ ಹಾಗೂ ಅವರ ವೈಯಕ್ತಿಕ ಬದುಕನ್ನು ಲೇಖಕರಾದ ಬಿ.ಎಸ್. ಕೇಶವರಾವ್ ಅವರು ಈ ಕೃತಿಯಲ್ಲಿ ಚೆನ್ನಾಗಿ ನಿರೂಪಿಸಿ, ಕಾರಂತರ ಬಗ್ಗೆ ಇದ್ದ ಕೆಲವು ಪೂರ್ವಗ್ರಹಗಳನ್ನು ನಿವಾರಿಸಿದ್ದಾರೆ ಎಂದರು.
ವೇದಿಕೆ ಅಧ್ಯಕ್ಷ ರಾಜಶೇಖರ ಕದಂಬ ಮಾತನಾಡಿ, ಕದಂಬ ವೇದಿಕೆಗೆ ಹಲವು ನಾಟಕಗಳನ್ನು ಬರೆದುಕೊಟ್ಟಿರುವ ಕೇಶವರಾಯರು, ರಾಯರ ರಾಯ ಶ್ರೀಕೃಷ್ಣದೇವರಾಯ ನಾಟಕವನ್ನು ಸಹ ನಮ್ಮ ತಂಡಕ್ಕಾಗಿ ಬರೆದುಕೊಟ್ಟರು. ಈಗಾಗಲೇ ಮೈಸೂರು ಸೇರಿದಂತೆ ಅನೇಕ ಕಡೆ ಪ್ರಯೋಗ ಕಂಡಿರುವ ಈ ನಾಟಕ ಕೃತಿಯು ಈಗ ಮುದ್ರಣಗೊಂಡಿದೆ ಎಂದರು.
ರಂಗಕರ್ಮಿ ಪ್ರೊ.ಎಚ್.ಎಸ್. ಉಮೇಶ್ ಮುಖ್ಯ ಅತಿಥಿಗಳಾಗಿದ್ದರು. ರಂಗತಜ್ಞ ಡಾ.ಎಚ್.ಕೆ. ರಾಮನಾಥ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.