ಮೈಸೂರು

ವ್ಯಾಪಾರಸ್ಥರ ಏಳಿಗೆಗೆ ನೂತನ ಸೇವಾ ಸಂಸ್ಥೆ

Published On :

ಮೈಸೂರು: ನಗರದ ದೇವರಾಜ ಮಾರುಕಟ್ಟೆಯ ಸುತ್ತಮುತ್ತ ಇರುವ ವ್ಯಾಪಾರಿಗಳು ಸೇರಿ ಸ್ಥಾಪಿಸಿರುವ ಶ್ರೀವಾಲ್ಮೀಕಿ ನಾಯಕರ ಸೇವಾ ಸಂಸ್ಥೆಯು ಸೋಮವಾರ ಉದ್ಘಾಟನೆಯಾಯಿತು.
ಚಿಕ್ಕಗಡಿಯಾರ ವೃತ್ತದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಸಂಸ್ಥೆ ಉದ್ಘಾಟಿಸಿ, ಶುಭ ಕೋರಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸ್ಥಳೀಯ ನಗರ ಪಾಲಿಕೆ ಸದಸ್ಯ ಎಂ.ಜೆ. ರವಿಕುಮಾರ್, ದೇವರಾಜ ಮಾರುಕಟ್ಟೆಯ ಸುತ್ತಮುತ್ತ ಅನೇಕ ವರ್ಷಗಳಿಂದ ಬೀದಿ ಬದಿಯಲ್ಲಿ ವ್ಯಾಪಾರ ನಡೆಸುತ್ತಿರುವವರು ಸಂಘಟಿತರಾಗಿ ಇಂತಹ ಸಂಸ್ಥೆ ಸ್ಥಾಪಿಸಿರುವುದು ಶ್ಲಾಘನೀಯ. ವಾಲ್ಮೀಕಿ ಹೆಸರಿನಲ್ಲಿ ಸ್ಥಾಪಿಸಿರುವ ಈ ಸಂಸ್ಥೆಯು ಉತ್ತಮ ಕಾರ್ಯಕ್ರಮಗಳೊಂದಿಗೆ ಮುನ್ನಡೆಯಲಿ ಎಂದು ಶುಭ ಹಾರೈಸಿದರು.
ನಾಮಕರಣ: ಚಿಕ್ಕಗಡಿಯಾರ ಉದ್ಯಾನದಲ್ಲಿ ನೂತನವಾಗಿ ನಿರ್ಮಿಸಿರುವ ಆವರಣದಲ್ಲಿನ ಮಂಟಪಕ್ಕೆ ವಾಲ್ಮೀಕಿ ಹೆಸರಿಡುವ ಸಂಬಂಧ ಮುಖಂಡರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಪಾಲಿಕೆ ಸಭೆಯಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಅವರು ಭರವಸೆ ನೀಡಿದರು. ಈ ಸಂದರ್ಭಣದಲ್ಲಿ ವ್ಯಾಪಾರಸ್ಥರಾದ ಎಸ್. ಕೃಷ್ಣ, ಮಂಜುನಾಥ್, ಹೇಮಣ್ಣ, ಸುಬ್ರಹ್ಮಣ್ಯ, ಸಿ.ಪಿ.ಸಿ.ಮಹದೇವು ಹಾಗೂ ಬಿ. ಬಸವರಾಜು ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆ ಅಧ್ಯಕ್ಷ ಬಸವರಾಜು, ಗೌರವಾಧ್ಯಕ್ಷ ನಾರಾಯಣಪ್ಪ, ಉಪಾಧ್ಯಕ್ಷ ಎಂ.ರಂಗಸ್ವಾಮಿ, ಜಯರಾಮನಾಯ್ಕ, ಮಹದೇವನಾಯ್ಕ, ಎಸ್.ಆರ್. ಸುರೇಶ್, ಪ್ರಧಾನ ಕಾರ್ಯದರ್ಶಿ ಎ.ವಿಜಯ, ಸಹಕಾರ್ಯದರ್ಶಿ ನಾಗರಾಜನಾಯ್ಕ, ಖಜಾಂಚಿ ಬಿ. ಯಶವಂತ್ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.